ಚಾಮರಾಜನಗರ: ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ!

By Kannadaprabha NewsFirst Published Nov 3, 2019, 12:43 PM IST
Highlights

ಮರದಿಂದ ಹಾಲು ಸುರಿಯುವುದು ನೋಡಿ ಹಾನೂರಿನ ಜನ ಅಚ್ಚರಿಗೊಳಗಾಗಿದ್ದಾರೆ. ಹತ್ತಿರ ಬಂದು ನೋಡಿದರೆ ಅದು ಹಾಲಲ್ಲ. ಹಾಲಿನ ಬಣ್ಣವಿರುವುದು ಮಾತ್ರ. ಹಾಗಾದರೆ ಮರದಿಂದ ಸುರಿದಿದ್ದೇನು..? ವಿಶೇಷ ಮರ ನೋಡಲು ಜನರ ದಂಡೇ ತಲುಪಿದೆ. ಇಲ್ಲಿದೆ ಹೆಚ್ಚಿನ ವಿವರ.

ಚಾಮರಾಜನಗರ(ನ.03): ಬೇವಿನ ಮರದಲ್ಲಿ ಹಾಲಿನ ರೂಪದ ಬಿಳಿಯಾದ ದ್ರವ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೂತುಹಲದಿಂದ ದೃಶ್ಯವನ್ನು ನೋಡಲು ತಂಡೋಪತಂಡವಾಗಿ ಆಗಮಿಸಿ ಪೂಜೆ ಸಲ್ಲಿಸುತ್ತಿರುವುದು ಕಂಡು ಬಂದಿದೆ.

ಹನೂರು ಸಮೀಪದ ರಾಮಾಪುರ ದಿನ್ನಳ್ಳಿ ರಸ್ತೆ ಬದಿಯ ಬೇವಿನ ಮರವೊಂದರಲ್ಲಿ ಹಾಲಿನ ರೂಪದ ದ್ರವ ಬರುತ್ತಿದ್ದು, ದಾರಿಹೋಕರು ಇದನ್ನು ಕಂಡು ನೆರೆ ಹೊರೆಯವರಿಗೆ ತಿಳಿಸಿದ್ದರಿಂದ ಜನರು ಈ ಅಪರೂಪದ ದೃಶ್ಯವನ್ನು ಕಣ್ಣಾರೆ ಕಾಣಲು ಮುಗಿ ಬೀಳುತ್ತಿದ್ದಾರೆ.

ಎರಡು ವರ್ಷಗಳ ನಂತರ ತುಂಬಿದ ಡ್ಯಾಂ, ಕುರಿ ಬಲಿ ನೀಡಿದ ಜನ

ಅದರಲ್ಲೂ ಮೌಢ್ಯ ಮತ್ತು ಕಂದಚಾರವನ್ನೇ ಉಸಿರಾಗಿರುವ ಜನತೆಯಂತು ಇದೊಂದು ವಿಸ್ಮಯ ಹಾಗೂ ಪವಾಡ ಎಂದು ತಿಳಿದು ಕಾಣಿಕೆ ಇಟ್ಟು, ಹೊಸ ಕೆಂಪು ವಸ್ತ್ರವನ್ನಿಟ್ಟು, ಅರಿಸಶಿನ, ಕುಂಕಮ ವಿಭೂತಿ, ಸುರಿದು ಗಂಧದ ಕಡ್ಡಿ ಹಚ್ಚಿ ಪೂಜೆ ಸಲ್ಲಿಸುತ್ತಿರುವುದು ಸಹ ಕಂಡು ಬಂದಿದೆ.

ಸಸ್ಯಲೋಕದ ವೈಜ್ಞಾನಿಕ ಸತ್ಯತೆಯನ್ನು ಅರಿಯದ ಜನತೆ ದೇವರ ಪವಾಡ ಎಂದು ತಿಳಿದು, ಸಸ್ಯಶಾಸ್ತ್ರದಲ್ಲಿ ಇದಕ್ಕೆ ಆದ ಹಿನ್ನೆಲೆ ಇದ್ದು ಕೀಟಗಳಿಂದ ಎದುರಾಗುವ ರೋಗವನ್ನು ನಿಯಂತ್ರಿಸಿಕೊಳ್ಳಲು ಈ ದ್ರವ ನೆರವಾಗಲಿದ್ದು, ಕೀಟಗಳು ಮರವನ್ನು ಕಚ್ಚಿ ರಂಧ್ರ ಕೊರೆದಾಗ ಈ ಬಿಳಿಯಾದ ದ್ರವ ಹೊರ ಬರಲಿದೆ ಎಂದು ವಿಜ್ಞಾನ ಲೋಕದಲ್ಲಿ ಹೇಳಲಾಗುತ್ತದೆ. ಇಂತಹ ವಿಚಾರಗಳಲ್ಲಿ ಮುಗ್ಧ ಅಮಾಯಕ ಜನತೆ ಮೌಢ್ಯಕ್ಕೆ ಜೋತು ಬೀಳದಂತೆ ಪ್ರಜ್ಞಾವಂತರು ಅವರಿಗೆ ಮನವರಿಕೆ ಮಾಡಿಕೊಡಬೇಕೆಂದು ವೈಚಾರಿಕ ಮನೋಭಾವನೆ ಉಳ್ಳ ಪ್ರಜ್ಞಾವಂತ ನಾಗರಿಕರು ಹಾಗೂ ಪರಿಸರ ತಜ್ಞರು ಅಭಿವ್ಯಕ್ತಪಡಿಸುತ್ತಾರೆ.

ಮಂಗಳೂರು ಮೀನು ಸಾರಿಗೆ ಉಪರಾಷ್ಟ್ರಪತಿ ಫಿದಾ..!

click me!