ಅಪ್ಪ-ಅವ್ವನ ಮುಖ ನೋಡಲು ಹೋದ ಮೂರು ಕಂದಮ್ಮಗಳು ನೀರುಪಾಲು

Published : Oct 13, 2019, 10:18 PM ISTUpdated : Oct 13, 2019, 10:19 PM IST
ಅಪ್ಪ-ಅವ್ವನ ಮುಖ ನೋಡಲು ಹೋದ ಮೂರು ಕಂದಮ್ಮಗಳು ನೀರುಪಾಲು

ಸಾರಾಂಶ

ತಂದೆ-ತಾಯಿಯನ್ನ ನೋಡಲು ಹೋದ ಮೂರು ಕಂದಮ್ಮಗಳು ನೀರು ಪಾಲು| ರಭಸವಾಗಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಮೂವರು ಮಕ್ಕಳು| ಚಾಮರಾಜನಗರ ಜಿಲ್ಲೆಯ ಮಲೆ‌ಮಹದೇಶ್ವರ ಬೆಟ್ಟದ ಪೊನ್ನಚ್ಚಿಯ ರಾಮೇಗೌಡನ ದೊಡ್ಡಿಯಲ್ಲಿ ಘಟನೆ.

ಚಾಮರಾಜನಗರ, [ಅ.13]: ಹೊತ್ತು ಆಯ್ತು ಹೊಲಕ್ಕೆ ಹೋದ ಅವ್ವ-ಅಪ್ಪ ಬರ್ಲಿಲ್ಲ ಅಂತ ನೋಡೊಕೆ ಹೋಗುತ್ತಿದ್ದ ಮೂರು ಕಂದಮ್ಮಗಳು ನೀರುಪಾಲದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಮಲೆ‌ಮಹದೇಶ್ವರ ಬೆಟ್ಟದ ಪೊನ್ನಚ್ಚಿಯ ರಾಮೇಗೌಡನ ದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು, ಅನುಪಮ(5), ನಿಖಿತ(6), ಪ್ರಣಿತಾ(8) ಮೃತ ಮಕ್ಕಳು.

ದುಡುಕಿದ ಪ್ರೇಮಿಗಳು: ಇದು ಹಾಸನದಲ್ಲಿ ನಡೆದ ಪ್ರೇಮ್ ಕಹಾನಿ

ಇಂದು [ಭಾನುವಾರ] ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆ-ತಾಯಿಯನ್ನು ನೋಡಲೆಂದು ಹಳ್ಳ ದಾಟುತ್ತಿದ್ದ ವೇಳೆ ನೀರಿನ ರಭಸಕ್ಕೆ ಕಂದಮ್ಮಗಳು ಕೊಚ್ಚಿ‌ಹೋಗಿವೆ. 

ಭಾರೀ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿತ್ತು.ಅಪ್ಪ-ಅವ್ವನನ್ನು ನೋಡುವ ಕಾತರದಲ್ಲಿ ಅದನ್ನು ಲೆಕ್ಕಿಸದ ಪುಟಾಣಿಗಳು ಹಳ್ಳ ದಾಟುವಾಗ ಈ ದುರ್ಘಟನೆ ಸಂಭವಿಸಿದೆ.

ದೊಡಮಡಕ್ಕೆ ಹಳದಲ್ಲಿ ಮೂರು ಮಕ್ಕಳ ಶವ ಪತ್ತೆಯಾಗಿದ್ದು, ಗಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಶಿವಣ್ಣ-ಜಯಲಕ್ಷ್ಮಿ ದಂಪತಿಯ ಮಕ್ಕಳಾದ ಅನುಪಮಾ ಮತ್ತು ನಿಖಿತಾ. ಹಾಗೂ ಬಸವರಾಜು-ಶಿವಮ್ಮ ದಂಪತಿಯ ಪುತ್ರಿ  ಪ್ರಣಿತಾ ಎಂದು ಗುರುತಿಸಲಾಗಿದೆ. ಇನ್ನು ಈ ಬಗ್ಗೆ ಮಲೆ‌ಮಹದೇಶ್ವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

PREV
click me!

Recommended Stories

ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!