ಹುಲಿ ಸೆರೆ ಹಿಡಿಯಲು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಈವರೆಗೆ ಯಾವುದೇ ಫಲ ನೀಡಿಲ್ಲ. ಹುಲಿಯ ಸುಳಿವೂ ಸಿಕ್ಕಿರದ ಕಾರಣ ಸೋಲಿಗರ ಮೊರೆ ಹೋಗಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಚಾಮರಾಜನಗರ(ಅ.12): ಗುಂಡ್ಲುಪೇಟೆಯಲ್ಲಿ 3ನೇ ದಿನ ಕಾರ್ಯಾಚರಣೆಯಲ್ಲಿ ಹುಲಿಯ ಜಾಡು ಪತ್ತೆಯಾಗದ ಕಾರಣ ಹುಲಿ ಜಾಡಿಗಾಗಿ ಸೋಲಿಗರ ಮೊರೆ ಹೋಗಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಹುಲಿ ಜಾಡು ಪತ್ತೆ ಹಚ್ಚುವುದರಲ್ಲಿ ನೈಪುಣ್ಯತೆ ಹೊಂದಿರುವ ಸೋಲಿಗರ ಕರೆ ತರಲು ಇಲಾಖೆಯು ಚಿಂತನೆ ನಡೆಸಿದೆ ಎಂದು ಬಂಡೀಪುರ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.
ಡ್ರೋನ್ ಕ್ಯಾಮೆರಾ ಕಣ್ಣಿಂದಲೂ ತಪ್ಪಿಸಿಕೊಂಡ ಹುಲಿ
ಶನಿವಾರ ಸೋಲಿಗರ ತಂಡ ಕರೆ ತಂದು ಹುಲಿ ಜಾಡು ಪತ್ತೆಗೆ ಕ್ರಮ ವಹಿಸಲಾಗುವುದು ಹಾಗೂ ಶನಿವಾರ ಕಾರ್ಯಾಚರಣೆಯಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದರು.
ಕಾರ್ಯಾಚರಣೆ ಸ್ಥಳಕ್ಕೆ ಡಿಸಿ ಭೇಟಿ:
ಹುಲಿ ಸೆರೆಗೆ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಶುಕ್ರವಾರ ಸಂಜೆ ಕಾರ್ಯಾಚರಣೆಯ ಬೇಸ್ ಕ್ಯಾಂಪ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಕಾರ್ಯಾಚರಣೆಯ ಬಗ್ಗೆ ವಿವರಿಸಿದ್ದಾರೆ.
ಚಾಮರಾಜನಗರ: ಹುಲಿ ದರ್ಶನವೂ ಇಲ್ಲ, ಕುರುಹೂ ಇಲ್ಲ