ಗುಂಡ್ಲುಪೇಟೆಯಲ್ಲಿ ನಡೆದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಹುಲಿಯ ಜಾಡನ್ನು ಪತ್ತೆ ಹಚ್ಚಿದವರು ಕಾಡಿನ ಮಕ್ಕಳು. ಹುಲಿ ಹಿಡಿಯಲು ಸೋಲಿಗರ ಮೊರೆ ಹೋದ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರಿಗೆ ಕಾಡಿನ ಮಕ್ಕಳು ತಮ್ಮಿಂದಾದ ನೆರವು ನೀಡಿ ಹುಲಿಯ ಜಾಡು ಪತ್ತೆ ಹಚ್ಚಿದ್ದಾರೆ.
ಚಾಮರಾಜನಗರ(ಅ.16): ಗುಂಡ್ಲುಪೇಟೆಯ ಹುಲಿಸೆರೆ ಕಾರ್ಯಾಚರಣೆಯ ದಿನ ಶ್ವಾನ ರಾಣ ಬಳಕೆ ಮಾಡಿಲ್ಲ. ಹುಲಿಯ ಜಾಡು ಮೊದಲಿಗೆ ಪತ್ತೆ ಹಚ್ಚಿದ್ದು ಸೋಲಿಗರು ಎಂದು ಬಂಡೀಪುರ ಹುಲಿ ಯೋಜನೆ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಟಿ.ಬಾಲಚಂದ್ರ ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅ. 13ರಂದು ಬೆಳಗ್ಗೆ 7.10 ನಿಮಿಷದಲ್ಲಿ ಮಗುವಿನಹಳ್ಳಿ ಬಳಿ ಸಿದ್ದಿಕಿ ಫಾರಂ ಬಳಿ ಹುಲಿ ಹೆಜ್ಜೆ ಹಾಕಿದ್ದು, ಸಿಬ್ಬಂದಿ ತಿಳಿಸಿದ ಬಳಿಕ ಸೋಲಿಗರು ಸ್ಥಳಕ್ಕಾಗಮಿಸಿ ಹುಲಿ ಹೆಜ್ಜೆ ಗುರುತು ಹಿಂಬಾಲಿಸಿದ್ದಾರೆ. ಅದೇ ಸ್ಥಳದಲ್ಲಿ ಹುಲಿ ಕಾಡಿನ ಒಳಗೆ ಅಥವಾ ಹೊರಗೆ ಹೋಗಿರುವ ಗುರುತು ಸಿಗದ ಕಾರಣ ಸೋಲಿಗರು ಮರವೇರಿ ಕುಳಿತು ಹುಲಿ ಇರುವುದನ್ನು ಗುರುತಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚಾಮರಾಜನಗರ: ಹುಲಿ ಹಿಡಿಯಲು ಸೋಲಿಗರ ಮೊರೆ
ಕಾರ್ಯಾಚರಣೆಯಲ್ಲಿ ಆನೆ, ಮಾವುತ, ಕಾವಾಡಿ, ಸೋಲಿಗರು, ಇಲಾಖೆಯ ಸಿಬ್ಬಂದಿ ಜೀವದ ಹಂಗು ತೊರೆದು ಹುಲಿ ಸೆರೆ ಹಿಡಿಯಲು ಶ್ರಮಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಸನ್ಮಾನಿಸಿದ ಗ್ರಾಮಸ್ಥರು:
ಹುಲಿಸೆರೆ ಕಾರ್ಯಾಚರಣೆಯಲ್ಲಿ ಶ್ರಮಿಸಿ ಈ ಭಾಗದ ರೈತರಿದ್ದ ಆತಂಕ ದೂರ ಮಾಡಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಅರಣ್ಯಾಧಿಕಾರಿಗಳಾದ ಎನ್.ಪಿ.ನವೀನ್‌ಕುಮಾರ್, ಮಂಜುನಾಥಪ್ರಸಾದ್, ಶ್ರೀನಿವಾಸನಾಯಕರಿಗೆ ಹುಂಡೀಪುರ ಗ್ರಾಮದ ಮುಖಂಡ ಎಚ್.ಪಿ.ಮಹೇಂದ್ರ ಈ ಭಾಗದ ರೈತರ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.
ಆಪರೇಷನ್ ಟೈಗರ್ ಸಕ್ಸಸ್ ಹಿಂದೆ ಮಾಳಿಗಮ್ಮನ ಮಹಿಮೆ..!