ಉಚ್ಛಾಟಿತ ಶಾಸಕನ ಕ್ಷೇತ್ರದಲ್ಲಿ ಇತ್ತೀಚೆಗೆ ಪಕ್ಷ ಸೇರಿದ ಮುಖಂಡಗೆ ಟಿಕೆಟ್..!

By Kannadaprabha News  |  First Published Oct 15, 2019, 2:57 PM IST

ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಗೆದ್ದು ಶಾಸಕರಾಗಿರುವ ಎನ್‌. ಮಹೇಶ್‌ ಅವರನ್ನು ಪಕ್ಷ ಉಚ್ಛಾಟಿಸಿರುವ ಬೆನ್ನಲ್ಲೆ ಕ್ಷೇತ್ರಕ್ಕೆ ಪ್ರಬಲ ಹಾಗೂ ಸಮರ್ಥ ಅಭ್ಯರ್ಥಿ ತರಲು ಹೈಕಮಾಂಡ್‌ ಮುಂದಾಗಿದ್ದು, ಇತ್ತೀಚೆಗೆ ಪಕ್ಷ ಸೇರ್ಪಡೆಗೊಂಡಿರುವ ರಾಜ್ಯ ಸಂಯೋಜಕ ಜಯಚಂದ್ರ ಹಾಗೂ ಮಾಜಿ ಶಾಸಕ ಬಾಲರಾಜು ಸೇರಿದಂತೆ ಕೆಲ ಹೆಸರುಗಳು ಪಕ್ಷದ ಮೇಲ್ಮಟ್ಟದಲ್ಲಿ ಚರ್ಚೆಯಾಗುತ್ತಿವೆ.


ಕೊಳ್ಳೇಗಾಲ (ಅ.15): ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಗೆದ್ದು ಶಾಸಕರಾಗಿರುವ ಎನ್‌. ಮಹೇಶ್‌ ಅವರನ್ನು ಪಕ್ಷ ಉಚ್ಛಾಟಿಸಿರುವ ಬೆನ್ನಲ್ಲೆ ಕ್ಷೇತ್ರಕ್ಕೆ ಪ್ರಬಲ ಹಾಗೂ ಸಮರ್ಥ ಅಭ್ಯರ್ಥಿ ತರಲು ಹೈಕಮಾಂಡ್‌ ಮುಂದಾಗಿದ್ದು, ಇತ್ತೀಚೆಗೆ ಪಕ್ಷ ಸೇರ್ಪಡೆಗೊಂಡಿರುವ ರಾಜ್ಯ ಸಂಯೋಜಕ ಜಯಚಂದ್ರ ಹಾಗೂ ಮಾಜಿ ಶಾಸಕ ಬಾಲರಾಜು ಸೇರಿದಂತೆ ಕೆಲ ಹೆಸರುಗಳು ಪಕ್ಷದ ಮೇಲ್ಮಟ್ಟದಲ್ಲಿ ಚರ್ಚೆಯಾಗುತ್ತಿವೆ.

ಆಹ್ವಾನದ ಬಗ್ಗೆ ಚರ್ಚೆ:

Latest Videos

undefined

ಈಗಾಗಲೇ ಚೆಸ್ಕಾಂ ಅಧಿಕಾರಿಯಾಗಿರುವ ಬೆಂಗಳೂರಿನ ಜಯಚಂದ್ರ ಅವರು ಬಿಎಸ್ಪಿ ಸೇರ್ಪಡೆಗೊಂಡಿದ್ದು, ಅವರಿಗೆ ರಾಜ್ಯ ಸಂಯೋಜಕ ಹುದ್ದೆ ಸಹ ನೀಡಲಾಗಿದೆ. ಏತನ್ಮಧ್ಯೆ ಬಿಎಸ್ಪಿಯ ಕೆಲ ಕಾರ್ಯಕರ್ತರು ಸಹ ಜಯಚಂದ್ರ ಅವರನ್ನೇ ಕೊಳ್ಳೇಗಾಲ ಕ್ಷೇತ್ರಕ್ಕೆ ಕಳುಹಿಸಿ, ಅಭ್ಯರ್ಥಿಯನ್ನಾಗಿಸಿ ಎಂದು ಪಕ್ಷದ ವರಿಷ್ಠೆ ಮಾಯಾವತಿಯವರಿಗೆ ಕೆಲ ಕಾರ್ಯಕರ್ತರು ಪತ್ರ ಬರೆದಿದ್ದಾರೆ. ಅಲ್ಲದೆ ಕೆಲವರು ಖುದ್ದು ಕ್ಷೇತ್ರಕ್ಕೆ ಬನ್ನಿ ಎಂದು ಸಹ ಆಹ್ವಾನ ನೀಡಿರುವ ವಿಚಾರ ಈಗ ಸಾಕಷ್ಚು ಚರ್ಚೆಯನ್ನೆ ಹುಟ್ಟುಹಾಕಿದೆ.

ಬಾಲರಾಜು ನಿರಾಕರಣೆ:

ಈ ನಡುವೆ ಸ್ವತಃ ಜಯಚಂದ್ರ ಅವರೇ ವರಿಷ್ಟರಾದ ಮಾಯಾವತಿಯವರು ಸಿಗ್ನಲ… ನೀಡುತ್ತಿದ್ದಂತೆ ಕೊಳ್ಳೇಗಾಲಕ್ಕೆ ಬರುವೆ ಎಂದು ಸಹಾ ಕೆಲ ಆಪ್ತರಲ್ಲಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದು-ಪ್ರಸಾದ್ ಮುಖಾಮುಖಿ: ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು! ಮುಂದೇನಾಯ್ತು?

ಈ ನಡುವೆ ಮಾಜಿ ಶಾಸಕ ಎಸ್‌. ಬಾಲರಾಜು ಹೆಸರು ಹಾಗೂ ಪೊಲೀಸ್‌ ಅಧಿಕಾರಿ ಮಹಾನಂದ ಸೇರಿದಂತೆ ಐದಾರು ಮಂದಿ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ಇದನ್ನು ಎಸ್‌. ಬಾಲರಾಜು ನಿರಾಕರಿಸಿದ್ದಾರೆ. ಬಿಎಸ್ಪಿ ಪಕ್ಷ ನನನ್ನು ಆಹ್ವಾನಿಸಿಲ್ಲ, ಚರ್ಚೆಯಾಗುತ್ತಿರಬುಹದು. ಆದರೆ ಇದಕ್ಕೆ ನನ್ನ ಸಹಮತವಿಲ್ಲ ಎಂದು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

ಬೆಳವಣಿಗೆ ಬಲ್ಲೋರಾರ‍ಯರು:

ಸದ್ಯಕ್ಕೆ ಜಯಚಂದ್ರ ಹೆಸರು ಕ್ಷೇತ್ರಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಹೈಕಮಾಂಡ್‌ ಸೂಚನೆ ಮೇರೆಗೆ ಶೀಘ್ರದಲ್ಲೆ ಕೊಳ್ಳೇಗಾಲಕ್ಕೆ ಸಮಾಜ ಸೇವೆ ಮೂಲಕ ಅವರನ್ನು ಕರೆತರಲು ಪಕ್ಷದ ಕೆಲ ಮುಖಂಡರು ಈಗಾಗಲೇ ಚಿಂತನೆ ನಡೆಸಿದ್ದಾರೆ. ಎಂದೇ ಬಲ್ಲ ಮೂಲಗಳು ಖಚಿತಪಡಿಸಿದ್ದು, ಮುಂದಾಗುವ ಬೆಳವಣಿಗೆ ಕಾದು ನೋಡಬೇಕಿದೆ.

ಆನೆ ಬಲ ವೃದ್ಧಿಸಲು ಹೈಕಮಾಂಡ್‌ ಚಿಂತನೆ

ಈಗಾಗಲೇ ಆನೆ ಬಲದೊಂದಿಗೆ 71 ಸಾವಿರಕ್ಕೂ ಅಧಿಕ ಮತ ಗಳಿಸಿ ಗೆದ್ದ ಶಾಸಕ ಮಹೇಶ್‌ ಅವರನ್ನು ಬಹುಮತ ಸಾಬೀತು ವೇಳೆ ಗೈರಾದ ಹಿನ್ನೆಲೆ ಉಚ್ಛಾಟಿಸಲಾಗಿದೆ.

ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕಷ್ಟಸಾಧ್ಯ ಎಂದೇ ಹೇಳಲಾಗುತ್ತಿವೆ. ಏತನ್ಮಧೆæ್ಯ ಮಹೇಶ್‌ ಅವರು ಸಹ ಬಿಜೆಪಿ ಪರ ವಾಲುತ್ತಿದ್ದಾರೆ. ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಬಹುದು. ಇಲ್ಲವೆ ಅವರು ಕಣದಿಂದ ದೂರ ಸರಿದು ತಮ್ಮ ಬೆಂಬಲಿಗರೊಬ್ಬರಿಗೆ ಬಿಜೆಪಿ ಟಿಕೆಟ್‌ ನೀಡಿ ಎಂದು ಹೇಳಬಹುದು ಎಂದು ಪಕ್ಷದಲ್ಲಿ ಚರ್ಚೆಯಾಗುತ್ತಿದೆ.

ಹುಲಿ ಸೆರೆಗೆ ಹರಕೆ ಹೊತ್ತಿತ್ತಾ ಅರಣ್ಯ ಇಲಾಖೆ..?

ಅದೇನೆ ಇರಲಿ ಸದ್ಯಕ್ಕೆ ಕ್ಷೇತ್ರದಲ್ಲಿ ಶಾಸಕರಿಗೆ ಆನೆ ಬಲ ಕುಗ್ಗಿದೆ. ಈ ಹಿಂದೆ ಇದ್ದ ಬಿಎಸ್ಪಿಯ ಆನೆ ಬಲ ಮತ್ತೆ ಗಟ್ಟಿಗೊಳಿಸಿ ಪಕ್ಷ ಸಂಘಟನೆಗೆ ಮುಂದಾಗಿ ಕೊಳ್ಳೇಗಾಲದಲ್ಲಿ ಆನೆ ನಡೆಸಿ ದೋರಾಗುವಂತೆ ಮಾಡುವುದೇ ಪಕ್ಷದ ವರಿಷ್ಟೆಮಾಯಾವತಿ ಅವರ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಕೊಳ್ಳೇಗಾಲ ಕ್ಷೇತ್ರದತ್ತ ಅವರು ತಮ್ಮ ಚಿತ್ತ ಬೀರಿದ್ದು ಯಾವ ರೀತಿ ಪುನಃ ಎರಡು ಹೋಳಾಗಿರುವ ಬಿಎಸ್ಪಿಯನ್ನು ಸಂಘಟಿಸಲಿದ್ದಾರೆ ಎಂಬುದು ಸಹ ಯಕ್ಷ ಪ್ರಶ್ನೆಯಾಗಿದ್ದು, ಪಕ್ಷದ ಮುಂದಿನ ನಡೆ ಬಗ್ಗೆ ಕಾದು ನೋಡಬೇಕಿದೆ.

-ಎನ್‌. ನಾಗೇಂದ್ರಸ್ವಾಮಿ

click me!