ಚಾಮರಾಜನಗರ: ಪಂಜಿನ ಹಬ್ಬದ ಮೇಲೆ ಬಿತ್ತು ಕರಿನೆರಳು!

Published : Oct 23, 2019, 11:58 AM IST
ಚಾಮರಾಜನಗರ: ಪಂಜಿನ ಹಬ್ಬದ ಮೇಲೆ ಬಿತ್ತು ಕರಿನೆರಳು!

ಸಾರಾಂಶ

ಬೆಟ್ಟದಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಪಂಜಿನ ಮೆರವಣಿಗೆ ಹಬ್ಬದ ಮೇಲೆ ಕರಿನೆರಳು ಬಿದ್ದಿದೆ. ದೇವರನ್ನು ಹೋರುವ ಉಪ್ಪಾರ ಜನಾಂಗದ ಬೇಡಿಕೆ ಈಡೇರದ ಹಿನ್ನೆಲೆ ದೇವರನ್ನು ಹೊರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಚಾಮರಾಜನಗರ(ಅ.23): ಬೆಟ್ಟದಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಪಂಜಿನ ಮೆರವಣಿಗೆ ದೀಪಾವಳಿ ಹಬ್ಬದ ವಿಶೇಷ ಹಾಗೂ ನಾಡಿನ ಏಕೈಕ ಪಂಜಿನ ಹಬ್ಬವೆಂದೇ ಪ್ರಸಿದ್ಧಿ ಪಡೆದಿರುವ ಹಬ್ಬದ ಮೇಲೆ ಕರಿನೆರಳು.

ದೇವರನ್ನು ಹೋರುವ ಉಪ್ಪಾರ ಜನಾಂಗದ ಬೇಡಿಕೆ ಈಡೇರದ ಹಿನ್ನೆಲೆ ದೇವರನ್ನು ಹೊರುವ ನಮಗೆ ಸರ್ಕಾರದಿಂದ ಸುಮಾರು 10 ವರ್ಷಗಳಿಂದ ಬೇಡಿಕೆಯನ್ನು ಇಟ್ಟಿದ್ದು, ಇದುವರೆಗೂ ಬೇಡಿಕೆ ಈಡೇರಿಲ್ಲ ಎಂದು ಸರ್ಕಾರಕ್ಕೆ ಅವರು ಮನವಿ ಸಲ್ಲಿಸಿದ್ದು, ದೇವರ ಉತ್ಸವ ಮಾಡುವ ಮುನ್ನ ನಮ್ಮ ಬೇಡಿಕೆ ಈಡೇರಿಸಿದರೆ ದೇವರನ್ನು ಹೊರುತ್ತೇವೆಂದು ತಾಲೂಕು ಆಡಳಿತಕ್ಕೆ ತಿಳಿಸಿದ್ದಾರೆ.

ತಹಸೀಲ್ದಾರ ಸಭೆ:

ತಹಸೀಲ್ದಾರ್‌ ಅವರು ಗ್ರಾಮದ ಮುಖಂಡರು ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಆದರೆ, ಈ ಸಭೆಗೆ ಯಾರೂ ಮುಖಂಡರು ಹಾಜರಾಗದ ಹಿನ್ನೆಲೆ ಸಭೆ ಮುಂದೂಡಲಾಯಿತು. ಆದ್ದರಿಂದ ಬೆಟ್ಟದಪುರದ ದೀಪಾವಳಿ ಹಬ್ಬದ ಉತ್ಸವ ಯಾವ ರೀತಿ ಬರುತ್ತದೆ ಎಂಬುದರ ಬಗ್ಗೆ ಅಧಿಕಾರಿಗಳಾಗಲಿ ಜನರಿಗೆ ಸರಿಯಾದ ಮಾಹಿತಿ ಕೊಡದೆ ಜನರಿಗೆ ಇನ್ನೂ ತಮ್ಮ ತಮ್ಮ ಮನೆಗಳ ಮುಂದೆ ಚಪ್ಪರವನ್ನು ಹಾಕಬೇಕೋ ಬೇಡವೂ ಎಂಬ ಗೊಂದಲದಲ್ಲಿದ್ದಾರೆ.

ಉಪ ಚುನಾವಣೆ : ಹುಣಸೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಫಿಕ್ಸ್?.

ಹೆಣ್ಣು ಮಕ್ಕಳು ಅಳಿಯಂದಿರು ಬರುವ ಹಬ್ಬ:

ಇದರೆಲ್ಲದರ ನಡುವೆ ಅ.28ರಂದು ಸಾವಿರಾರು ಜನರು ಬೆಟ್ಟಹತ್ತುವ ಕಾರ್ಯಕ್ರಮವಿದ್ದು, ಅ.29ರಂದು ಬಲಿಪಾಡ್ಯ ದಿನದಂದು ಭ್ರಮರಾಂಭ ಸಮೇತ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವರ ಪಂಜಿನ ಉತ್ಸವ ಬೆಟ್ಟದಪುರ ದೊಡೇಗೌಡನ ಕೊಪ್ಪಲು ಹರದೂರು ಬೆಟ್ಟದತುಂಗ ಕೆಳಗನ ಕೊಪ್ಪಲು ಮತ್ತು ಮೆಗಲಕೊಪ್ಪಲು ಕುಡಕೂರು, ಬಾರಸೆ, ಕೂರಗಲ್ಲು ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸುತ್ತಾರೆ. ಅಲ್ಲದೇ, ಈ ಗ್ರಾಮಗಳ ಎಲ್ಲ ಹೆಣ್ಣುಮಕ್ಕಳು ಅಳಿಯಂದಿರು ಈ ಹಬ್ಬಕ್ಕೆ ಬರುವುದು ವಿಶೇಷ.

ದೀಪಾವಳಿ ಹಬ್ಬ ನಾಡಿಗೆ ಒಂದು ಪ್ರಮುಖ ವಿಶೇಷ ಹಬ್ಬವೆಂದರೆ ಸುಮಾರು 1 ಲಕ್ಷಕ್ಕೂ ಭಕ್ತರು ಪಂಜನ್ನು ಹಿಡಿದು ಬೆಟ್ಟದ ಸುತ್ತ ಬರುವ ಬೆಟ್ಟದತುಂಗ ಕುಡಕೂರು ಮತ್ತು ಇನ್ನೂ ಹಲಾವರು ಊರುಗಳಲ್ಲಿ ಜಾತ್ರೆಗಳು ನಡೆಯುವುದು ವಿಶೇಷ ಗ್ರಾಮಗಳ ಮನೆಯ ಮುಂದೆ ಹಸಿರು ಚಪ್ಪರವನ್ನು ಹಾಕಿ ಬೆಟ್ಟದಿಂದ ಬರುವ ದೇವರನ್ನು ಹಸಿರು ಮಂಟಪದಲ್ಲಿ ಕೂರಿಸುವುದು ಇಲ್ಲಿನ ವಿಶೇಷ.

20 ಅಡಿಗಳಷ್ಟು ಕುಸಿದ ಚಾಮುಂಡಿ ಬೆಟ್ಟ ರಸ್ತೆ: ಸಂಚಾರ ನಿರ್ಬಂಧ

ಅಲ್ಲದೇ, ಈ ಹಬ್ಬವೆಂದರೆ ಮೈಸೂರು ಜಿಲ್ಲೆಗೆ ದೀಪಾವಳಿ ಹಬ್ಬದ ಸೂಬಗನ್ನು ತೋರುವ ಜಾನಪದ ಶೈಲಿಯ ಹಬ್ಬವಾಗಿದ್ದು, ನಾಡಿನ ಮುಲೆ ಮೂಲೆಗಳಿಂದ ಜನರು ಇಲ್ಲಿಗೆ ಬರುವುದು ವಿಶೇಷ ರಾತ್ರಿ ವೇಳೆಯಲ್ಲಿ ಎಲ್ಲ ಭಕ್ತಾದಿಗಳು ಪಂಜನ್ನು ಹಿಡಿದು ದೇವರ ಮುಂದೆ ಸಾಗುವುದು ಜನರಿಗೆ ಹಬ್ಬದ ರಸದೌತಣವನ್ನು ಭಡಿಸುವ ಏಕೈಕ ಹಬ್ಬವಾಗಿದೆ.

-ಶಿವದೇವ್‌

PREV
click me!

Recommended Stories

ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!