ಈ ಗ್ರಾಮದಲ್ಲಿ ಬೀದಿ ನಾಯಿಗಳಿಗಿಂತಲೂ ಕುಡುಕರ ಹಾವಳಿಯೇ ಹೆಚ್ಚು..!

Published : Oct 20, 2019, 03:16 PM IST
ಈ  ಗ್ರಾಮದಲ್ಲಿ ಬೀದಿ ನಾಯಿಗಳಿಗಿಂತಲೂ ಕುಡುಕರ ಹಾವಳಿಯೇ ಹೆಚ್ಚು..!

ಸಾರಾಂಶ

ಹಲವು ಕಡೆ ಹಲವು ಸಮಸ್ಯೆ. ತ್ಯಾಜ್ಯ ಸಮಸ್ಯೆ, ರಸ್ತೆ ಸಮಸ್ಯೆ ಹೀಗೆ ಹಲವು. ಆದರೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಬೀದಿ ನಾಯಿ ಹಾವಳಿಗಿಂತಲೂ ಕುಡುಕರ ಹಾವಳಿ ಮಿತಿ ಮೀರಿದೆ. ಕಂಡ ಕಂಡಲ್ಲಿ ಕುಡಿದು ಎಲ್ಲೆಂದರಲ್ಲಿ ಬಿದ್ದಿರುವ ದೃಶ್ಯ ಕಾಣಸಿಗುತ್ತಿರುವುದು ವಿಪರ್ಯಾಸ.

ಚಾಮರಾಜನಗರ(ಅ.20): ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ಕುಡುಕರ ಹಾವಳಿ ಹೆಚ್ಚಿದ್ದು, ಕಂಡ ಕಂಡಲ್ಲಿ ಕುಡಿದು ಎಲ್ಲೆಂದರಲ್ಲಿ ಬಿದ್ದಿರುವ ದೃಶ್ಯ ಕಾಣಸಿಗುತ್ತಿವೆ.

ಮೈಸೂರು-ಊಟಿ ಹೆದ್ದಾರಿ ಹಾದು ಹೋಗುವ ರಸ್ತೆಯ ಬದಿಯಲ್ಲಿ ಕುಡಿದು ಮತ್ತಿನಲ್ಲಿ ಕುಡುಕರ ಗ್ರಾಮದ ರಸ್ತೆ ಬದಿ, ಬಸ್‌ ನಿಲ್ದಾಣ, ಹೋಟೆಲ್‌ ಮುಂದೆ ಮಲಗುತ್ತಾರೆ. ಬೇಗೂರು ಗ್ರಾಮದಲ್ಲಿ ಪೊಲೀಸ್‌ ಠಾಣೆಯಿದ್ದರೂ ಕುಡುಕರ ಹಾವಳಿಗೆ ಬ್ರೇಕ್‌ ಹಾಕುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

'ಗುಂಡೂರಾವ್ KPCC ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಸತ್ತೋಯ್ತು'..!

ಕುಡಿದ ಮತ್ತಿನಲ್ಲಿ ಬೈದು ತಿರುಗಾಡುವ ದೃಶ್ಯ ಸಂಜೆ ವೇಳೆ ಸಿಗುತ್ತದೆ. ಬೇಗೂರು ಗ್ರಾಮದ ಹೆದ್ದಾರಿಯಲ್ಲಿಯೇ ವೈನ್‌ಶಾಪ್‌ ಮಧ್ಯೆ ಚಿಲ್ಲರೆ ವ್ಯಾಪಾರ ನಡೆಯುತ್ತಿವೆ. ಇದು ಕುಡುಕರ ಹಾವಳಿಗೆ ಪ್ರಮುಖ ಕಾರಣ ಎಂದು ಸಾರ್ವಜನಿಕರ ದೂರಾಗಿದೆ.

ಸ್ಥಳೀಯ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಅಕ್ರಮವಾಗಿ ಮದ್ಯ ಚಿಲ್ಲರೆ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಹೇಳಿದರೂ ಏನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸರು ನಿಲ್ಲುತ್ತಿಲ್ಲ:

ಬೇಗೂರು ಗ್ರಾಮದಲ್ಲಿ ಪೊಲೀಸ್‌ ಠಾಣೆಯಿದ್ದರೂ ಬಸ್‌ ನಿಲ್ದಾಣದ ಮುಂದೆ ಪೊಲೀಸರು ನಿಲ್ಲುವುದಿಲ್ಲ. ಸಂಜೆಯ ವೇಳೆಯೂ ನಿಲ್ಲದ ಮೇಲೆ ಪೊಲೀಸ್‌ ಠಾಣೆ ಬೇಕಿತ್ತೇ ಎಂಬ ಪ್ರಶ್ನೆ ಏಳುತ್ತಿದೆ.

ಬೇಗೂರು ಶಾಲಾ, ಕಾಲೇಜುಗಳ ಸಮಯದಲ್ಲಿ ಕೆಲ ಯುವಕರು ಬೈಕ್‌ನಲ್ಲಿ ಯರ್ರಾಬಿರ್ರಿ ಓಡಾಟ ನಡೆಸುತ್ತಾರೆ. ಅಲ್ಲದೆ ಸಂಜೆಯ ವೇಳೆ ಬಸ್‌ ನಿಲ್ದಾಣದಲ್ಲಿ ಚೇಷ್ಟೆಮಾಡುತ್ತಾರೆ ಎಂದು ಸಾರ್ವಜನಿಕರ ದೂರು ಕೇಳಿ ಬಂದಿದೆ.

ಜನ ಸೇವೆ ಮಾಡೋಕಾಗಲ್ಲಾಂದ್ರೆ ಜಾಗ ಖಾಲಿ ಮಾಡಿ ಎಂದ ಸಂಸದ

ಬೇಗೂರು ಗ್ರಾಮದಲ್ಲಿ ರಾಜರೋಷವಾಗಿ ಮದ್ಯ ಚಿಲ್ಲರೆ ವ್ಯಾಪಾರ ತಡೆಗಟ್ಟಬೇಕು ಹಾಗೂ ಪೊಲೀಸರು ಬಸ್‌ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಬೇಕು. ​​​​ಮಾತೆತ್ತಿದರೆ ಹೋರಾಟ, ಪ್ರತಿಭಟನೆ ಎನ್ನುವ ಗ್ರಾಮದ ಕನ್ನಡಪರ ಸಂಘಟನೆಗಳು ವೈನ್‌ಶಾಪ್‌ನಲ್ಲಿ ಚಿಲ್ಲರೆ ವ್ಯಾಪಾರದ ಬಗ್ಗೆ ಮೌನವಾಗಿವೆ. ಈ ವಿಚಾರದಲ್ಲಿ ಪ್ರತಿಭಟನೆ ನಡೆಸಲಿ ಎಂದು ಬೇಗೂರಿನ ನಿವಾಸಿ ಮಹೇಶ್ ಹೇಳುತ್ತಾರೆ.

PREV
click me!

Recommended Stories

30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು
ಚಾಮರಾಜನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಹಣ ನೀಡದ ರಾಜ್ಯಸರ್ಕಾರ, ಕೌಲಂದೆ ನಿಲ್ದಾಣದಲ್ಲಿ ಕ್ರಾಸಿಂಗ್‌ಗೆ ಒತ್ತಾಯ