ಆಪರೇಷನ್ ಟೈಗರ್ ಸಕ್ಸಸ್ ಆಗಿ ಅಧಿಕಾರಿಗಳೂ, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ರೆ ಈಗ ಮತ್ತೊಮ್ಮೆ ಜನರಲ್ಲಿ ಭಯ ಮನೆ ಮಾಡಿದೆ. ಇದೀಗ ಹುಂಡೀಪುರದಲ್ಲಿ ಚಿರತೆ ಹೆಜ್ಜೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಚಾಮರಾಜನಗರ(ಅ.19): ಗುಂಡ್ಲುಪೇಟೆ ಬಂಡೀಪುರ ಕಾಡಂಚಿನ ಹುಂಡೀಪುರದಲ್ಲಿ ಹುಲಿ ಕಾಟ ತಪ್ಪಿದ ಬೆನ್ನಲ್ಲೆ ಚಿರತೆಯ ಕಾಟ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಶುರು ಮಾಡಿದೆ.
ಹುಂಡೀಪುರ ಗ್ರಾಮದ ಎಚ್.ಪಿ.ಮಹೇಂದ್ರಗೆ ಸೇರಿದ ಜಮೀನಿನಲ್ಲಿ ಚಿರತೆ ನಡೆದು ಹೋಗಿರುವ ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಜಮೀನಿನಿಂದ ನೇರವಾಗಿ ಕಾಡಿನತ್ತ ಹೋಗಿದೆ ಎನ್ನಲಾಗಿದೆ.
ತುಮಕೂರು: ಚಿರತೆ ದಾಳಿಗೆ ವೃದ್ಧೆ ಬಲಿ...
ಈ ಸಂಬಂಧ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ಹೆಜ್ಜೆ ಗುರುತು ಹುಲಿಯದ್ದಲ್ಲ. ಚಿರತೆಯ ಹೆಜ್ಜೆ ಗುರುತು ಎಂದು ಹೇಳಿದ್ದಾರೆ.
ಹುಲಿಕಾಟದಿಂದ ಹುಂಡೀಪುರ ಗ್ರಾಮಸ್ಥರು ತತ್ತರಿದ್ದ ಸಮಯದಲ್ಲಿ ಹುಲಿ ಸೆರೆಯಾಗಿದೆ. ಈಗ ಚಿರತೆಯೆ ಕಾಣಿಸಿಕೊಂಡಿರುವುದು ನಿಜಕ್ಕೂ ಗ್ರಾಮಸ್ಥರಲ್ಲಿ ಆತಂಕ ತಂದಿದೆ.
ನಾಡಿಗೆ ನುಗ್ಗುತ್ತಿರುವ ಕಾಡು ಪ್ರಾಣಿಗಳು! ಜನರಲ್ಲಿ ಹೆಚ್ಚಿದ ಆತಂಕ