ಗುಂಡ್ಲುಪೇಟೆ ಬಳಿ ಬೈಕ್‌ಗೆ ಕಾರು ಡಿಕ್ಕಿ: ಪತಿ-ಪತ್ನಿ ಸಾವು

Published : Oct 14, 2019, 01:07 PM IST
ಗುಂಡ್ಲುಪೇಟೆ ಬಳಿ ಬೈಕ್‌ಗೆ ಕಾರು ಡಿಕ್ಕಿ: ಪತಿ-ಪತ್ನಿ ಸಾವು

ಸಾರಾಂಶ

ಕೇರಳದ ಪ್ರವಾಸಿಗರ ಕಾರು ಬೈಕ್ ಗೆ ಡಿಕ್ಕಿ|  ಗಂಡ-ಹೆಂಡತಿ ಇಬ್ಬರೂ ಸಾವು| ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗೇಟ್ ಬಳಿ ನಡೆದ ಅಪಘಾತ| ಇಬ್ಬರೂ ಗ್ರಾಮದಿಂದ ಗುಂಡ್ಲುಪೇಟೆಗೆ ತೆರಳುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ| ಸ್ಥಳದಲ್ಲೇ ಪಾಪಣ್ಣ ಮೃತಪಟ್ಟರೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಪತ್ನಿ ಪುಟ್ಟಸಿದ್ದಮ್ಮ ಅಸುನೀಗಿದ್ದಾರೆ| ಅಪಘಾತ ಬಳಿಕ ಕಾರಿನ ಚಾಲಕ ಪರಾರಿ| 

ಚಾಮರಾಜನಗರ(ಅ.14): ಕೇರಳದ ಪ್ರವಾಸಿಗರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗೇಟ್ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. 

ಮೃತರನ್ನು ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದ ಪಾಪಣ್ಣ(55) ಹಾಗೂ ಪತ್ನಿ ಪುಟ್ಟಸಿದ್ದಮ್ಮ ಎಂದು ಗುರುತಿಸಲಾಗಿದೆ. ರಾಘವಪುರ ಗ್ರಾಮದ ಪಾಪಣ್ಣ ಹಾಗೂ ಪತ್ನಿ ಪುಟ್ಟಸಿದ್ದಮ್ಮ ಅವರು ಗ್ರಾಮದಿಂದ ಗುಂಡ್ಲುಪೇಟೆಗೆ ತೆರಳುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳದಲ್ಲೇ ಪಾಪಣ್ಣ ಮೃತಪಟ್ಟರೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಪತ್ನಿ ಪುಟ್ಟಸಿದ್ದಮ್ಮ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನೆ ನಡೆಯುತ್ತಿದ್ದಂತೆ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ
ಚಾಮುಂಡಿ ದೇವಾಲಯಕ್ಕೆ ಕನ್ನ: ದೇವಿ ಮೇಲಿನ ಚಿನ್ನದ ತಾಳಿಯನ್ನೂ ಬಿಡಲಿಲ್ಲ!