
ವರದಿ: ಪುಟ್ಟರಾಜು. ಆರ್. ಏಷ್ಯಾನೆಟದ ಸುವರ್ಣ ನ್ಯೂಸ್
ಚಾಮರಾಜನಗರ: ಗಡಿ ನಾಡ ಜನರಿಗೆ ಈಗ ಹೊಸತೊಂದು ಸಮಸ್ಯೆ ಎದುರಾಗಿದೆ. ಬೈಕ್ ನಲ್ಲಿ ತೆರಳುವಾಗ ಮಕ್ಕಳನ್ನ ಆಚೆ ಕರೆದು ಕೊಂಡು ಹೋಗುವಾಗ ಹತ್ತು ಬಾರಿ ಯೋಚಿಸುವಂತಾಗಿದೆ. ಅರೆ ಇದ್ದಕ್ಕಿದ್ದಂತೆ ಏನಾಯ್ತು ಅಂತೀರಾ ಈ ರಿಪೋರ್ಟ್ ನೋಡಿ.
ಕಣ್ಣಾಡಿಸಿದ ಕಡೆಯಲ್ಲ ಬೀದಿ ನಾಯಿಗಳು. ಗುಂಪು ಕಟ್ಟಿಕೊಂಡು ತಿರುಗಾಡುತ್ತಿರುವ ಶ್ವಾನಗಳು.. ಒಂಬಟ್ಟಿಯಾಗಿ ಬೈಕ್ ನಲ್ಲಿ ಓಡಾಡಲು ಅಂಜುತ್ತಿರುವ ಜನರು. ಮಕ್ಕಳನ್ನ ಆಚೆ ಬಿಡಲು ಬೆದರುತ್ತಿರುವ ಪೋಷಕರು. ಇದಕ್ಕೆಲ್ಲ ಕಾರಣ ಬಿಡಾಡಿ ಬೀದಿ ನಾಯಿಗಳ ಉಪಟಳ. ಹೌದು ಬೌ ಬೌ ಗ್ಯಾಂಗ್ ನ ಹಾವಳಿಗೆ ಗಡಿ ನಾಡ ಜನತೆ ರೋಸಿ ಹೋಗಿದ್ದಾರೆ. ಬೀದಿ ನಾಯಿಗಳಿಂದ ದಿನ ನಿತ್ಯ ಒಂದಲ್ಲ ಒಂದು ರೀತಿ ಸಮಸ್ಯೆಯನ್ನ ಅನುಭವಿಸತ್ತಲೇ ಇದ್ಧಾರೆ. ಕಳೆದ 5 ತಿಂಗಳಿಂದ ಚಾಮರಾಜನಗರ ಜಿಲ್ಲೆಯಾದ್ಯಂತ ಬರೋಬ್ಬರಿ 1411 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ನಡೆದು ಕೊಂಡು ಹೋಗುವ ಮಕ್ಕಳು. ಬೈಕ್ ನಲ್ಲಿ ತೆರಳುವ ಬೈಕ್ ಸವಾರರು. ಅಂಗಡಿ ಮುಂಗಟ್ಟಿಗೆ ಹೋಗುವ ಮಹಿಳೆಯರಿಗೆ ದಿನ ನಿತ್ಯ ಈ ಶ್ವಾನಗಳು ಅಟ್ಯಾಕ್ ಮಾಡ್ತಾಯಿದ್ದು ಬೀದಿ ನಾಯಿಗಳ ಈ ಕಾಟಕ್ಕೆ ಚಾಮರಾಜನಗರದ ಜನತೆಯೆ ಬೆಚ್ಚಿ ಬಿದ್ಧಿದ್ದಾರೆ.
ಇನ್ನು ಚಾಮರಾಜನಗರದ ಕೋಳಿ ಅಂಗಡಿಗಳ ತ್ಯಾಜ್ಯವನ್ನ ಬೇಕಾ ಬಿಟ್ಟಿಯಾಗಿ ಎಲ್ಲಂದರಲ್ಲಿ ಎಸೆಯಲಾಗುತ್ತೆ. ಕೋಳಿಯ ಹಸಿ ತ್ಯಾಜ್ಯದ ರುಚಿ ನೋಡಿದ ಬೀದಿ ನಾಯಿಗಳು ಈಗ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿವೆ ಇಂದು ಕೂಡ ಗಾಳಿಪುರದಲ್ಲಿ ಮೇಕೆಯೊಂದರ ಮೇಲೆ ಏಳೆಂಟು ಶ್ವಾನಗಳು ದಾಳಿ ನಡೆಸಿದ್ದು, ಕತ್ತು ಎದೆ ಹಾಗೂ ತೊಡೆ ಭಾಗಕ್ಕೆ ಕಚ್ಚಿ ಗಾಯ ಗೊಳಿಸಿವೆ. ಚಿಕ್ಕ ಮಕ್ಕಳನ್ನ ಆಚೆ ಬಿಡುವುದಕ್ಕೂ ಈಗ ಪೋಷಕರು ಬೆಚ್ಚಿ ಬೀಳ್ತಾಯಿದ್ದಾರೆ. ಬೈಕ್ ನಲ್ಲಿ ತೆರಳುವಾಗ ಹಿಂಬದಿಯಿಂದ ಶ್ವಾನಗಳು ಅಟ್ಟಾಡಿಸಿಕೊಂಡು ಬರ್ತಾಯಿವೆ. ನಾಯಿಗಳಿಂದ ಬಚಾವಾಗಲು ಹೋಗಿ ಎಷ್ಟೊ ಜನ ಬಿದ್ದು ಗಾಯಾ ಮಾಡಿಕೊಂಡ ನಿದರ್ಶನಗಳು ಸಹ ಇವೆ.
ಇಷ್ಟೆಲ್ಲಾ ಘಟನೆ ನಡೆಯುತ್ತಾಯಿದ್ರು ನಗರಸಭೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಲಕ್ಷಾಂತರ ರೂಪಾಯಿ ಶ್ವಾನಗಳ ಸಂತಾನಹರಣ ಚಿಕಿತ್ಸೆಗಾಗಿ ಸರ್ಕಾರ ಹಣ ನೀಡಿದ್ರು ಬಂದ ಹಣವನ್ನೆಲ್ಲಾ ನಗರಸಭೆಯ ಅಧಿಕಾರಿಗಳು ನುಂಗಿ ಹಾಕಿ ಯಾವ ಕೆಲಕನು ಮಾಡದೆ ಇರುವುದು ನಿಜಕ್ಕು ದುರಂತವೇ ಸರಿ.