IAS Officer Salary: UPSC ಪರೀಕ್ಷೆ ಬರೆದು IAS ಅಧಿಕಾರಿಯಾಗುವವರಿಗೆ ವೇತನವೆಷ್ಟು?

By Suvarna News  |  First Published Mar 31, 2022, 3:48 PM IST

UPSC ಪರೀಕ್ಷೆ ಬರೆದು IAS ಅಧಿಕಾರಿಯಾಗುವವರು ಮಾಸಿಕ ಎಷ್ಟು ವೇತನ ಪಡೆಯುತ್ತಾರೆ? ಸರಕಾರದ ಯಾವೆಲ್ಲ ಸವಲತ್ತುಗಳು ಸಿಗಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.


ಬೆಂಗಳೂರು(ಮಾ.31): ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC)  ಪರೀಕ್ಷೆಯನ್ನು ಭೇದಿಸಿ IAS ಅಧಿಕಾರಿಯಾಗುವುದು ತುಂಬಾ ಕಷ್ಟ. ಮಾತ್ರವಲ್ಲ ಅದೊಂದು ಬಹುದೊಡ್ಡ ಸಾಧನೆ ಕೂಡ ಹೌದು. ಹಲವು ಮಂದಿಗೆ ಇದೊಂದು ಕನಸು ಕೂಡ ಆಗಿರುತ್ತದೆ.   UPSC ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಶ್ರೇಣಿಯ ಆಧಾರದ ಮೇಲೆ IAS, IPS (Indian Police Service), IES (Indian Engineering Services), ಅಥವಾ IFS (Indian Foreign Service) ಅಧಿಕಾರಿಯ ಹುದ್ದೆ ದೊರೆಯುತ್ತದೆ.

ರಾಜ್ಯದಲ್ಲಿ ಕೆಎಎಸ್ (KAS) ಪರೀಕ್ಷೆಯಂತೆ ದೇಶದಲ್ಲಿ ಐಎಎಸ್ ಪರೀಕ್ಷೆಗಳು ನಡೆಯುತ್ತವೆ. ಇದಕ್ಕಾಗಿ ದೇಶದ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಪರೀಕ್ಷೆ (Exam) ಬರೆಯುತ್ತಾರೆ. ಈ ಹುದ್ದೆಗಳು ಯಾರ ಶಿಫಾರಸ್ಸು ಇಲ್ಲದೆ ಯಾವ ಲಂಚವೂ ಇಲ್ಲದೆ ಆಯ್ಕೆಯಾಗುವ ಅತ್ಯುನ್ನತ ಹುದ್ದೆಗಳಾಗಿವೆ. ಪ್ರತೀ ವರ್ಷವೂ UPSC ಪರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಆದರೆ ಕೆಲವೇ ಕೆಲವು  ವಿದ್ಯಾರ್ಥಿಗಳು ಇದರಲ್ಲಿ ತೇರ್ಗಡೆಯಾಗುತ್ತಾರೆ. 

Tap to resize

Latest Videos

ದೇಶದಾದ್ಯಂತ ಲಕ್ಷಾಂತರ ಐಎಎಸ್, ಐಪಿಎಸ್‌ ಆಕಾಂಕ್ಷಿಗಳು ವರ್ಷಾನುಗಟ್ಟಲೇ ಈ ಪರೀಕ್ಷೆಗಳಿಗೆ ತಯಾರಿ ನಡೆಸಿ, ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದು  UPSC ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿದ ನಂತರ IAS ಅಧಿಕಾರಿಗಳು ಎಷ್ಟು ಸಂಬಳ ಪಡೆಯುತ್ತಾರೆ ಮತ್ತು ಅವರ ಪಾತ್ರಗಳೇನು ಎಂಬುದನ್ನು ತಿಳಿಯೋಣ.

ಸ್ತ್ರೀರೋಗ ತಜ್ಞೆ Dr Archana Sharma ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ, ರಾಜಕಾರಣಿಗಳಿಗೆ ನಂಟು!

ಭಾರತೀಯ ಆಡಳಿತಾತ್ಮಕ ಸೇವೆ 
UPSC ಬರೆದು ಪಾಸಾದ ಬಳಿಕ, ಭಾರತೀಯ ಆಡಳಿತಾತ್ಮಕ ಸೇವೆಯ (Indian Administrative Service - IAS)  ಮೂಲಕ ಆಯ್ಕೆಯಾದ ಅಧಿಕಾರಿಗಳು ಭಾರತದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶವನ್ನು ಪಡೆಯುತ್ತಾರೆ. ಗಮನಾರ್ಹವಾಗಿ, IAS ಅಧಿಕಾರಿಗಳು  ಸರಕಾರದ ಹಲವು ವಿಭಿನ್ನ ಸಚಿವಾಲಯಗಳು, ಆಡಳಿತ ಇಲಾಖೆಗಳಲ್ಲಿ ಕೆಲಸ ಮಾಡುತ್ತಾರೆ. ಐಎಎಸ್ ಅಧಿಕಾರಿಗಳಲ್ಲಿ ಅತ್ಯಂತ ಉನ್ನತ ಸ್ಥಾನವೆಂದರೆ ಕ್ಯಾಬಿನೆಟ್ ಕಾರ್ಯದರ್ಶಿ.

ಐಎಎಸ್ ಅಧಿಕಾರಿ (IAS Officer) ಎಷ್ಟು ಸಂಬಳ ಪಡೆಯುತ್ತಾರೆ?
UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಮತ್ತು ಭಾರತದಲ್ಲಿ IAS ಅಧಿಕಾರಿಯಾಗುವ ಅಭ್ಯರ್ಥಿಗಳು ಉತ್ತಮ ಸಂಬಳವನ್ನು (Salary) ಪಡೆಯುವ ಜೊತೆಗೆ ವಿವಿಧ ಸವಲತ್ತುಗಳನ್ನು (Perks) ಕೂಡ ಪಡೆಯುತ್ತಾರೆ. 7ನೇ ವೇತನ ಆಯೋಗದ ಪ್ರಕಾರ ಐಎಎಸ್ ಅಧಿಕಾರಿಯ ಮೂಲ ವೇತನ 56,100 ರೂ. ಸಂಬಳದ ಜೊತೆಗೆ ಐಎಎಸ್ ಅಧಿಕಾರಿಗೆ ಪ್ರಯಾಣ ಭತ್ಯೆ ಮತ್ತು ತುಟ್ಟಿಭತ್ಯೆ ಸೇರಿದಂತೆ ಹಲವಾರು ಭತ್ಯೆಗಳನ್ನು ಸಹ ನೀಡಲಾಗುತ್ತದೆ. ಐಎಎಸ್ ಅಧಿಕಾರಿಯ ಒಟ್ಟು ವೇತನವು ತಿಂಗಳಿಗೆ 1 ಲಕ್ಷ ರೂ.ಗಿಂತ ಹೆಚ್ಚಾಗಿರುತ್ತದೆ.

INDIAN NAVY RECRUITMENT 2022: ಅಪ್ರೆಂಟಿಸ್ ಮತ್ತು SSR ಬ್ಯಾಚ್‌ ಗೆ ಅರ್ಜಿ ಆಹ್ವಾನ

ಯಾವೆಲ್ಲ ಭತ್ಯೆಗಳು ಸಿಗಲಿದೆ  ಇಲ್ಲಿದೆ ವಿವರ
ತುಟ್ಟಿ ಭತ್ಯೆ (Dearness Allowance)
ಮನೆ ಬಾಡಿಗೆ ಭತ್ಯೆ (House Rent Allowance)
ಪ್ರಯಾಣ ಭತ್ಯೆ (Travel Allowance)
ಸಾರಿಗೆ ಭತ್ಯೆ (Transport Allowance)
ವೈದ್ಯಕೀಯ ಭತ್ಯೆ (Medical Allowance)

ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಐಎಎಸ್ ಅಧಿಕಾರಿಯು ಕ್ಯಾಬಿನೆಟ್ ಕಾರ್ಯದರ್ಶಿಯ (cabinet secretary) ಉನ್ನತ ಶ್ರೇಣಿಯನ್ನು ತಲುಪಿದರೆ ಅವರ ವೇತನವು ತಿಂಗಳಿಗೆ 2,50,000 ರೂಪಾಯಿಗಳನ್ನು ತಲುಪುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ನಿಯೋಜನೆಗೊಂಡ ಅಧಿಕಾರಿಯು ಎಲ್ಲಾ ಐಎಎಸ್ ಅಧಿಕಾರಿಗಿಂತ ಅತ್ಯಧಿಕ ವೇತನವನ್ನು ಪಡೆಯುತ್ತಾರೆ. ಜೊತೆಗೆ ವಿವಿಧ ವಿಶೇಷ ಭತ್ಯೆಗಳು ಕೂಡ ಅವರಿಗೆ ದೊರೆಯಲಿದೆ. 

click me!