ಭಾರತೀಯ ನೌಕಾಸೇನೆ ಖಾಲಿ ಇರುವ ಆರ್ಟಿಫಿಸರ್ ಅಪ್ರೆಂಟಿಸ್ ಮತ್ತು ಹಿರಿಯ ಮಾಧ್ಯಮಿಕ ನೇಮಕಾತಿ ಬ್ಯಾಚ್ ಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಪ್ರಿಲ್ 5ರೊಳಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು(ಮಾ.31): ಭಾರತೀಯ ನೌಕಾಸೇನೆಯಲ್ಲಿ (Indian Navy) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನೌಕಾಸೇನೆಯು ಖಾಲಿ ಇರುವ ಒಟ್ಟು 2500 ಆರ್ಟಿಫಿಸರ್ ಅಪ್ರೆಂಟಿಸ್ (Artificer apprentices) ಮತ್ತು ಹಿರಿಯ ಮಾಧ್ಯಮಿಕ ನೇಮಕಾತಿ (Senior Secondary Recruits) ಬ್ಯಾಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 5 ರೊಳಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್ಸೈಟ್ https://www.indiannavy.nic.in/ ಗೆ ಅಥವಾ https://www.joinindiannavy.gov.in/en ಭೇಟಿ ನೀಡಲು ಕೋರಲಾಗಿದೆ. ಮಾತ್ರವಲ್ಲ ಈ ಅವಕಾಶ ಅವಿವಾಹಿತ ಭಾರತೀಯ ಪುರುಷರಿಗೆ ಮಾತ್ರ ಹುದ್ದೆಗಳು ತೆರೆದಿರುತ್ತವೆ.
ಒಟ್ಟು 2500 ಹುದ್ದೆಗಳ ಮಾಹಿತಿ
ಆರ್ಟಿಫಿಸರ್ ಅಪ್ರೆಂಟಿಸ್ : 500 ಹುದ್ದೆಗಳು
ಹಿರಿಯ ಮಾಧ್ಯಮಿಕ ನೇಮಕಾತಿ: 2000 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ಆರ್ಟಿಫಿಸರ್ ಅಪ್ರೆಂಟಿಸ್ ಮತ್ತು ಹಿರಿಯ ಮಾಧ್ಯಮಿಕ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಪಿಯುಸಿ ಅಥವಾ ಅದಕ್ಕೆ ಸಮನಾದ ವಿಭಾಗದಲ್ಲಿ ಶೇ.60 ಅಂಕಗಳೊಂದಿಗೆ ಗಣಿತ ಮತ್ತು ಭೌತಶಾಸ್ತ್ರ, ಜೊತೆಗೆ ರಸಾಯನಶಾಸ್ತ್ರ/ಜೀವಶಾಸ್ತ್ರ/ಕಂಪ್ಯೂಟರ್ ವಿಜ್ಞಾನ ಯಾವುದಾದರೂ 1 ವಿಷಯ ಓದಿರಬೇಕು. ವಿದ್ಯಾರ್ಹತೆ ಪಡೆದಿರಬೇಕು.
RBI RECRUITMENT 2022 : ಮ್ಯಾನೇಜರ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೇಮಕಾತಿ
ವಯೋಮಿತಿ: ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ಆರ್ಟಿಫಿಸರ್ ಅಪ್ರೆಂಟಿಸ್ ಮತ್ತು ಹಿರಿಯ ಮಾಧ್ಯಮಿಕ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 17 ರಿಂದ 20 ವಚರ್ಷದ ಒಳಗಿರಬೇಕು.
ಆಯ್ಕೆ ಪ್ರಕ್ರಿಯೆ: ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ಆರ್ಟಿಫಿಸರ್ ಅಪ್ರೆಂಟಿಸ್ ಮತ್ತು ಹಿರಿಯ ಮಾಧ್ಯಮಿಕ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಮತ್ತು ಮೆಡಿಕಲ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ: ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ಆರ್ಟಿಫಿಸರ್ ಅಪ್ರೆಂಟಿಸ್ ಮತ್ತು ಹಿರಿಯ ಮಾಧ್ಯಮಿಕ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹21,700 ದಿಂದ ₹69,100 ವೇತನ ದೊರೆಯಲಿದೆ.
KRIDL Recruitment 2022: ವಿವಿಧ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ
ಭಾರತೀಯ ಸೇನೆ ನೇಮಕಾತಿ, ಎರಡೇ ದಿನ ಬಾಕಿ: ಭಾರತೀಯ ಸೇನಾಪಡೆಯು ಆರ್ಮಿ ಪೋಸ್ಟಲ್ ಸರ್ವಿಸ್ ವಿಂಗ್, ಬ್ರಿಗೇಡ್ ಆಫ್ ಗಾರ್ಡ್ಸ್ ನಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಾಶರ್‌ಮ್ಯಾನ್ ಮತ್ತು ಗಾರ್ಡ್‌ನರ್ (ಉದ್ಯಾನಪಾಲಕ) ಹುದ್ದೆಗಳು ಸೇರಿ ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಎಪ್ರಿಲ್ 2 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ joinindianarmy.nic.in ಗೆ ಭೇಟಿ ನೀಡಲು ಕೋರಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಸೇನಾಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಮೆಟ್ರಿಕ್ಯುಲೇಶನ್ ಅಥವಾ 10 ನೇ ತರಗತಿ ಪಾಸ್ ಆಗಿರಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಭಾರತೀಯ ಸೇನಾಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಎಪ್ರಿಲ್ 2 ಕ್ಕೂ ಮುನ್ನ ಈ ವಿಳಾಸಕ್ಕೆ ಕಳುಹಿಸಿ ಕೊಡಿ
Wing Commander
APS Wing
Brigade of The Guards Regimental Centre Kamptee
Dist- Nagpur, MR- 441001