ರೈಲ್ವೆ ನೇಮಕಾತಿ ವಿಭಾಗ (ಆರ್ ಆರ್ ಸಿ)2023-24 ವೆಸ್ಟ್ ಸೆಂಟ್ರಲ್ ರೇಲ್ವೆ ಘಟಕಗಳು/ವರ್ಕ್ ಶಾಪ್ ಗಳಲ್ಲಿ ಗೊತ್ತುಪಡಿಸಿದ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್ ಕಾಯ್ದೆ1961ರ ಅಡಿಯಲ್ಲಿ ತರಬೇತಿಗಾಗಿ ಖಾಲಿ ಇರುವ 3015 ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ನವದೆಹಲಿ(ಜ.11) ರೈಲ್ವೆ ನೇಮಕಾತಿ ವಿಭಾಗ (ಆರ್ ಆರ್ ಸಿ) 2023-24 ವೆಸ್ಟ್ ಸೆಂಟ್ರಲ್ ರೇಲ್ವೆ ಘಟಕಗಳು/ವರ್ಕ್ ಶಾಪ್ ಗಳಲ್ಲಿ ಗೊತ್ತುಪಡಿಸಿದ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್ ಕಾಯ್ದೆ 1961ರ ಅಡಿಯಲ್ಲಿ ತರಬೇತಿಗಾಗಿ ಕಾಲಿ ಇರುವ 3015 ಅಪ್ರೆಂಟಿಸ್ ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರಗಳು: ಒಟ್ಟು 3015 ಹುದ್ದೆಗಳು (ಇವುಗಳ ವಿಭಾಗವಾರು ವರ್ಗೀಕರಣ ಇಂತಿದೆ.)
undefined
1.ಜೆಬಿಎಲ್ ವಿಭಾಗ -1164 ಹುದ್ದೆ
2. ಬಿಪಿಎಲ್ ವಿಭಾಗ -603ಹುದ್ದೆ
3.ಕೋಟಾ ವಿಭಾಗ – 853ಹುದ್ದೆ
4. ಸಿಆರ್ ಡಬ್ಲ್ಯೂಎಸ್ –ಬಿಪಿಎಲ್ ವಿಭಾಗ – 170ಹುದ್ದೆ
5. ಡಬ್ಲ್ಯೂಆರ್ ಎಸ್ -ಕೋಟಾ ವಿಭಾಗ-196ಹುದ್ದೆ
6. ಹೆಚ್ ಕ್ಯೂ/ಜೆಬಿಎಲ್ ವಿಭಾಗ – 29 ಹುದ್ದೆ
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 504 ಹುದ್ದೆಗಳ ಭರ್ತಿಗೆ ಸರ್ಕಾರ ಒಪ್ಪಿಗೆ, ಕೆಎಎಸ್ ಅಧಿಕಾರಿಗಳ ನೇಮಕಾತಿ ಹೇಗೆ?
ಈ ಮೇಲಿನ ಪ್ರತಿಯೊಂದು ವಿಭಾಗದಲ್ಲೂ ಎಸಿ ಮೆಕ್ಯಾನಿಕ್, ಸಹಾಯಕ ಕಚೇರಿ ವ್ಯವಸ್ಥಾಪಕ, ಕಮ್ಮಾರ (ಫೌಂಡ್ರಿಮ್ಯಾನ್), ಬುಕ್ ಬೈಂಡರ್, ಕೇಬಲ್ ಜಾಯಿಂಟರ್, ಕಾರ್ಪೆಂಟರ್, ಕಂಪ್ಯೂಟರ್ ಮತ್ತು ಪೆರಿಫೆರಲ್ಸ್ ಹಾರ್ಡ್‌ವೇರ್ ರಿಪೇರಿ ಮತ್ತು ಮೆಂಟೆನೆನ್ಸ್ ಮೆಕ್ಯಾನಿಕ್, ಕಂಪ್ಯೂಟರಿಂಗ್ ಮೆಕ್ಯಾನಿಕ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ, ಡೆಂಟಲ್ ಲ್ಯಾಬರೋಟರಿ ತಜ್ಞ, ಡಿಸೆಲ್ ಮೆಕ್ಯಾನಿಕಲ್, ಡಿಜಿಟಲ್ ಫೋಟೊಗ್ರಾಫರ್, ಡ್ರಾಟ್ಸ್ಮನ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಫ್ಲೋರಿಸ್ಟ್ ಮತ್ತು ಲ್ಯಾಂಡ್‌ಸ್ಕೇಪಿಂಗ್, ಹ್ಯಾಂಡ್ಲಿಂಗ್ ಎಕ್ವಿಪ್ಮೆಂಟ್ ಮೆಕ್ಯಾನಿಕ್ ಆಪರೇಟರ್, ಮೆಕ್ಯಾನಿಕ್-ಕಮ್-ಆಪರೇಟರ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಸಿಸ್ಟಮ್, ಪೇಂಟರ್, ಪ್ಲಂಬರ್ , ಪಂಪ್ ಆಪರೇಟರ್ ಮೆಕ್ಯಾನಿಕ್, ಸ್ಟೆನೋಗ್ರಾಫರ್, ಸ್ಟೆನೋಗ್ರಾಫರ್ ಮತ್ತು ಎಲೆಕ್ಟ್ರಿಕ್, ವೈರ್‌ಮ್ಯಾನ್ ಗಳಿಗೆ ಸಂಬಂಧಿಸಿದಂತೆ ಹುದ್ದೆಗಳು ಹಂಚಿಕೆಯಾಗಿರುತ್ತದೆ.
ಪ್ರಮುಖ ದಿನಾಂಕ:
ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕಪಾವತಿ: 15-12-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ:14-01-2024
ಅರ್ಜಿ ಶುಲ್ಕ:
ಎಲ್ಲಾ ಇತರ ವರ್ಗದ ಅಭ್ಯರ್ಥಿಗಳಿಗೆ: 136 ರು.
ಎಸ್ ಸಿ/ ಎಸ್ ಟಿ/ ಪಿಡ್ಬ್ಲೂಡಿ/ಮಹಿಳಾ ಅಭ್ಯರ್ಥಿಗಳಿಗೆ: 36 ರು. (ಸಂಸ್ಕರಣಾ ಶುಲ್ಕವಾಗಿ ಮಾತ್ರ)
ವಯಸ್ಸಿನ ಮಿತಿ (14-12-2023 ರಂತೆ):
ಕನಿಷ್ಠ ವಯಸ್ಸು: 15 ವರ್ಷಗಳು
ಗರಿಷ್ಠ ವಯಸ್ಸು: 24 ವರ್ಷಗಳು
ಶೈಕ್ಷಣಿಕ ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಹಾಗೂ ಎನ್ ಸಿವಿಟಿ/ ಎಸ್ ಸಿವಿಟಿಯಿಂದ ಮಾನ್ಯತೆ ಪಡೆದ ಐಟಿಐನಿಂದ ಅಧಿಸೂಚಿತ ಟ್ರೇಡ್‌ನಲ್ಲಿ ನೀಡಲಾದ ವಿಭಾಗದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.
ಕೆಲಸ ಯಾವಾಗ ಹೋಗ್ಬಿಡುತ್ತೋ ಅನ್ನೋ ಭಯದಿಂದ ದೂರ ಬಿಟ್ಬಿಡಿ, ಸ್ಕಿಲ್ ಮುಖ್ಯ ನೆನಪಿರಲಿ
ಆಯ್ಕೆಯವಿಧಾನ:
1.ಅಭ್ಯರ್ಥಿಗಳು 10 ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಸರಾಸರಿ ಅಂಕಗಳು ಅಥವಾ ಜೊತೆಗೆ ಸಂಬಂಧಿಸಿದ ಐಟಿಐ ಟ್ರೇಡ್ ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.
2. ರೈಲ್ವೆ ನೇಮಕಾತಿ ವಿಭಾಗವು ಸಂಬಂಧಪಟ್ಟ ಟ್ರೇಡ್/ವಿಭಾಗ/ಘಟಕವು ಅರ್ಹತಾ ಪಟ್ಟಿಯ ಪ್ರಕಾರ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ದಾಖಲೆಗಳ ಪರಿಶೀಲನೆಗಾಗಿ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ.
3.ಇಬ್ಬರು ಅಭ್ಯರ್ಥಿಗಳು ಒಂದೇ ಅಂಕಗಳನ್ನು ಹೊಂದಿದ್ದರೆ, ವಯಸ್ಸಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಜನ್ಮ ದಿನಾಂಕಗಳು ಒಂದೇ ಆಗಿದ್ದರೆ, ಮೊದಲು ಮೆಟ್ರಿಕ್ಯುಲೇಷನ್ಸ್ ಪರೀಕ್ಷೆಯಲ್ಲಿ
ಉತ್ತೀರ್ಣರಾದ ಅಭ್ಯರ್ಥಿಯನ್ನು ಮೊದಲು ಪರಿಗಣಿಸಲಾಗುತ್ತದೆ.
4. ಅಂತಿಮ ಮೆರಿಟ್ ಪಟ್ಟಿಯನ್ನು ಟ್ರೇಡ್‌ವಾರು/ವಿಭಾಗ/ಘಟಕವಾರು ಸಿದ್ಧಪಡಿಸಲಾಗುತ್ತದೆ.
ತರಬೇತಿ ಅವಧಿ ಮತ್ತು ಸ್ಟೈಫಂಡ್
1.ಆಯ್ಕೆಯಾದ ಅಭ್ಯರ್ಥಿಯು ಒಂದು ವರ್ಷದ ತರಬೇತಿ ಅವಧಿಗೆ ಒಳಪಟ್ಟಿರುತ್ತಾರೆ.
2.ಅಪ್ರೆಂಟಿಸ್ ಕಾಯಿದೆ 1961ರ ಪ್ರಕಾರ ಸ್ಟೈಫಂಡ್ ಅನ್ನು ಒಂದು ವರ್ಷದ ಅವಧಿಗೆ ನೀಡಲಾಗುತ್ತದೆ.
ವೈದ್ಯಕೀಯ ಫಿಟ್ನೆಸ್ :
ಒಬ್ಬ ವ್ಯಕ್ತಿಯು ಅಪ್ರೆಂಟಿಸ್ ಆ್ಯಕ್ಟ್ 1961 ಮತ್ತು ಅಪ್ರೆಂಟಿಶಿಪ್ ನಿಯಮಗಳು 1992ರ ಅಡಿಯಲ್ಲಿ ತರಬೇತಿ ಪಡೆಯಲು ಕೇಂದ್ರ/ ರಾಜ್ಯ ಆಸ್ಪತ್ರೆಯ ಸಹಾಯಕ ಶಸ್ತ್ರ ಚಿಕಿತ್ಸ ಕರ ಶ್ರೇಣಿಗಿಂತ ಕಡಿಮೆಯಿಲ್ಲದ ಸರ್ಕಾರಿ ಅಧಿಕೃತ ವೈದ್ಯರಿಂದನಿಗದಿತ ನಮೂನೆಯಲ್ಲಿ (ಅನುಬಂಧ ''ಎಫ್'') ವೈದ್ಯಕೀಯ ಪ್ರಮಾಣ ಪತ್ರವನ್ನುಸಲ್ಲಿಸಬೇಕು. ಇದನ್ನು ಡಾಕ್ಯುಮೆಂಟ್ ಪರಿಶೀಲನೆಯ ಸಮಯದಲ್ಲಿ ಸಲ್ಲಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ವೀಕ್ಷಿಸಲು ಕೋರಲಾಗಿದೆ.
ಲೇಖಕರು: ಸುರೇಂದ್ರಪೈ, ಶಿಕ್ಷಕರು, ಎಸ್ ನಿಜಲಿಂಗಪ್ಪ ಅಂತಾರಾಷ್ಟ್ರೀಯ ಶಾಲೆ, ಹೊಸದುರ್ಗ