ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯಲ್ಲಿ 400 ಹುದ್ದೆಗಳಿಗೆ ನೇಮಕಾತಿ

By Kannadaprabha News  |  First Published Jan 2, 2024, 10:30 AM IST

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ , ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಯಲ್ಲಿ 400 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.


ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ , ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಯಲ್ಲಿ 400 ಹುದ್ದೆಗೆ ಅರ್ಜಿ ಕರೆಯಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯಲ್ಲಿ ಖಾಲಿ ಇರುವ 400 ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ:

Latest Videos

undefined

1.ರಾಷ್ಟ್ರೀಯ ರಕ್ಷಣಾ ಅಕಾಡೆಮಿ: 370 ಹುದ್ದೆ (ವಿಭಾಗವಾರು ಹುದ್ದೆಗಳು ಈ ಕೆಳಗಿನಂತಿವೆ)

* ಸೇನೆ-208 ಹುದ್ದೆ

* ನೌಕಾಪಡೆ-42 ಹುದ್ದೆ

* ವಾಯುಪಡೆ-120 ಹುದ್ದೆ

2. ನೇವಲ್ ಅಕಾಡೆಮಿ : 30 ಹುದ್ದೆ

ಪ್ರಮುಖ ದಿನಾಂಕಗಳು :

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-12-2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 09-01-2024

ಸಲ್ಲಿಸಿದ ಅರ್ಜಿಗಳ ಮಾರ್ಪಾಡು ಮಾಡಲು ನಿಗದಿಪಡಿಸಿರುವ ದಿನಾಂಕ: 10-01-2024 ರಿಂದ 16-01-2024

ಪರೀಕ್ಷೆಯ ದಿನಾಂಕ: 21-04-2024

ಅರ್ಜಿ ಶುಲ್ಕ:

ಇತರರಿಗೆ ಅಭ್ಯರ್ಥಿಗಳಿಗೆ: 100 ರು.

ಮಹಿಳೆ/ ಎಸ್‌ ಸಿ/ ಎಸ್‌ ಟಿ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕವಿಲ್ಲ

ವಯಸ್ಸಿನ ಮಿತಿ:

ಕನಿಷ್ಠ: 02-07-2005 ಕ್ಕಿಂತ ಮುಂಚೆ ಜನಿಸಿರಬಾರದು

ಗರಿಷ್ಠ: 01-07-2008 ಕ್ಕಿಂತ ನಂತರ ಜನಿಸಿರಬಾರದು

ಶೈಕ್ಷಣಿಕ ವಿದ್ಯಾರ್ಹತೆ:

1.ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಆರ್ಮಿ ವಿಂಗ್‌ಗಾಗಿ: ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ತೇರ್ಗಡೆಯಾಗಿರಬೇಕು.

2. ವಾಯುಪಡೆ ಮತ್ತು ರಾಷ್ಟ್ರೀಯ ರಕ್ಷಣಾ ನೌಕಾ ವಿಭಾಗಗಳಿಗೆ ಅಕಾಡೆಮಿ ಮತ್ತು ಇಂಡಿಯನ್‌ ನೇವಲ್ ಅಕಾಡೆಮಿಯಲ್ಲಿ 10+2 ಕೆಡೆಟ್ ಪ್ರವೇಶ ಯೋಜನೆಗಾಗಿ : ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ತೇರ್ಗಡೆಯಾಗಿರಬೇಕು.

ಭೌತಿಕ ಮಾನದಂಡಗಳು:

1.ಅಭ್ಯರ್ಥಿಗಳು ದೈಹಿಕ ಮಾನದಂಡಗಳ ಪ್ರಕಾರ ದೈಹಿಕವಾಗಿ ಸದೃಢರಾಗಿರಬೇಕು ಹಾಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿಗೆ ಪ್ರವೇಶಕ್ಕಾಗಿ ಅನುಬಂಧ-4 ರಲ್ಲಿ ನೀಡಲಾದ ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಪಡೆದಿರಬೇಕು.

2. ಸಶಸ್ತ್ರ ಪಡೆಗಳ ಯಾವುದೇ ತರಬೇತಿ ಅಕಾಡೆಮಿಗಳಲ್ಲಿ ಅಶಿಸ್ತು ಮತ್ತು ರಾಜೀನಾಮೆ ನೀಡಿದ ಅಥವಾ ಹಿಂತೆಗೆದುಕೊಂಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಆಯ್ಕೆ ಪ್ರಕ್ರಿಯೆ: ಆಯ್ಕೆಯು ಸೈಕಲಾಜಿಕಲ್ ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಇಂಟೆಲಿಜೆನ್ಸ್‌ (ಬುದ್ಧಿಮತ್ತೆ) ಪರೀಕ್ಷೆ ಎಂಬ ಎರಡು ಹಂತದ ಆಯ್ಕೆ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.

1. ಸೈಕಲಾಜಿಕಲ್ ಆಪ್ಟಿಟ್ಯೂಡ್ ಪರೀಕ್ಷೆ: ಗಣಿತ, ಸಾಮಾನ್ಯ ಸಾಮರ್ಥ್ಯ ವಿಷಯಕ್ಕೆ ಸಂಬಂಧಿಸಿದಂತೆ ಆಬ್ಜೆಕ್ಟಿವ್ ಟೈಪ್ ಪ್ರಶ್ನೆಗಳನ್ನು 900 ಅಂಕಗಳಿಗೆ , 5 ಗಂಟೆಗಳ ಅವಧಿಯಲ್ಲಿ ನಡೆಲಾಗುತ್ತದೆ.

2. ಬುದ್ಧಿಮತ್ತೆ ಮತ್ತು ವ್ಯಕ್ತಿತ್ವ ಪರೀಕ್ಷೆ : ಇದು ಹಂತ 1 ಮತ್ತು ಹಂತ 2 ಎಂಬ ಎರಡು ಹಂತದ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿದ್ದು ,ಹಂತ 1 ಅನ್ನು ತೇರ್ಗಡೆಯಾದ ಅಭ್ಯರ್ಥಿಗಳು ಮಾತ್ರ ಹಂತ 2 ಕ್ಕೆ ಮುಂದುವರಿಯಲು ಅವಕಾಶ ನೀಡಲಾಗುತ್ತದೆ.

(ಎ) ಹಂತ 1 ಅಧಿಕಾರಿ ಇಂಟೆಲಿಜೆನ್ಸ್ ರೇಟಿಂಗ್‌ ‌ (ಓಐಆರ್) ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಚಿತ್ರ ಗ್ರಹಿಕೆ , ವಿವರಣೆ ಪರೀಕ್ಷೆಗಳಿದ್ದು ಅಭ್ಯರ್ಥಿಗಳ ಕಾರ್ಯಕ್ಷಮತೆಯ ಸಂಯೋಜನೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುವುದು.

(ಬಿ) ಹಂತ 2 ಸಂದರ್ಶನವನ್ನು ಒಳಗೊಂಡಿರುತ್ತದೆ. ಇಲ್ಲಿ ಗುಂಪು ಪರೀಕ್ಷಾ ಅಧಿಕಾರಿ ಕಾರ್ಯಗಳು, ಮನೋವಿಜ್ಞಾನ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹಾಗೂ ಮೂಲ ದಾಖಲಾತಿಗಳ ಪರಿಶೀಲನೆಯನ್ನು ನಡೆಸಲಾಗುತ್ತದೆ.

ಪರೀಕ್ಷಾ ಕೇಂದ್ರದ ವಿವರ:

ಪರೀಕ್ಷೆಯು ಭಾರತದಾದ್ಯಂತ ಇರುವ ಎಲ್ಲಾ ರಾಜ್ಯಗಳ ಪ್ರಮುಖ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು, ಧಾರವಾಡ, ಮೈಸೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ : https://upsc.gov.in/ ವೀಕ್ಷಿಸಿರಿ

click me!