West Central Railway Recruitment 2022: ಪಶ್ಚಿಮ ಕೇಂದ್ರ ರೈಲ್ವೆಯಲ್ಲಿ 2,521 ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಆಹ್ವಾನ

By Gowthami K  |  First Published Dec 2, 2022, 5:14 PM IST

ರೈಲ್ವೆ ಇಲಾಖೆಯ ಪಶ್ಚಿಮ ಕೇಂದ್ರ ವಿಭಾಗವು ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ನಡೆಸಲಿದ್ದು, ಈಗಾಗಲೇ ನೇಮಕಾತಿ ಅಧಿಸೂಚನೆಯನ್ನು ಕೂಡ ಹೊರಡಿಸಿದೆ. ನೇಮಕಾತಿ ವಿವರಗಳನ್ನು ಕೆಳಗಡೆ ನೀಡಲಾಗಿದೆ. ಒಟ್ಟು ಹುದ್ದೆಗಳು 2,521 ಇದ್ದು, ಆರ್ಜಿ ಸಲ್ಲಿಕೆಗೆ ಡಿ.17 ಕೊನೆಯ ದಿನವಾಗಿದೆ


ರೈಲ್ವೆ ಇಲಾಖೆಯ ಪಶ್ಚಿಮ ಕೇಂದ್ರ ವಿಭಾಗವು ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ನಡೆಸಲಿದ್ದು, ಈಗಾಗಲೇ ನೇಮಕಾತಿ ಅಧಿಸೂಚನೆಯನ್ನು ಕೂಡ ಹೊರಡಿಸಿದೆ. ನೇಮಕಾತಿ ವಿವರಗಳನ್ನು ಕೆಳಗಡೆ ನೀಡಲಾಗಿದೆ. ಒಟ್ಟು ಹುದ್ದೆಗಳು 2,521 ಇದ್ದು, ಅಪ್ರೆಂಟಿಸ್‌ ಹುದ್ದೆಗಳಾಗಿವೆ. ಈ ಪೈಕಿ ಎಲೆಕ್ಟ್ರಿಷಿಯನ್‌ 458 ಹುದ್ದೆಗಳು, ಫಿಟ್ಟರ್‌ 651 ಹುದ್ದೆ, ಡೀಸೆಲ್‌ ಮೆಕ್ಯಾನಿಕ್‌ 24 ಹುದ್ದೆ, ವೆಲ್ಡರ್‌ (ಗ್ಯಾಸ್‌ ಹಾಗೂ ಎಲೆಕ್ಟ್ರಿಕ್‌) 236 ಹುದ್ದೆ, ಯಂತ್ರಶಾಸ್ತ್ರಜ್ಞ 42 ಹುದ್ದೆ, ಟರ್ನರ್‌ 20 ಹುದ್ದೆ, ವೈರ್‌ಮ್ಯಾನ್‌ 55 ಹುದ್ದೆ, ಮೇಸನ್‌ (ಕಟ್ಟಡ ಮತ್ತು ನಿರ್ಮಾಣಕಾರ) 120 ಹುದ್ದೆ, ಬಡಗಿ 137 ಹುದ್ದೆ,ಪೇಂಟರ್‌ (ಸಾಮಾನ್ಯ) 124 ಹುದ್ದೆ, ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್‌ 141 ಹುದ್ದೆ, ಕಮ್ಮಾರ 90 ಹುದ್ದೆ, ಎಸಿ ಮೆಕ್ಯಾನಿಕ್‌ 7 ಹುದ್ದೆ, ಸಿವಿಲ್‌ ಡ್ರಾಫ್‌್ಟಮನ್‌ 15 ಹುದ್ದೆ, ಇಂಗ್ಲಿಷ್‌ ಸ್ಟೆನೋಗ್ರಾಫ​ರ್‍ಸ್ 21 ಹುದ್ದೆ, ಕಂಪ್ಯೂಟರ್‌ ಆಪರೇಟರ್‌ ಹಾಗೂ ಪ್ರೋಗ್ರಾಮಿಂಗ್‌ ಸಹಾಯಕ 141 ಹುದ್ದೆ ಇವೆ.

ವಿದ್ಯಾರ್ಹತೆ ಹಾಗೂ ವಯೋಮಿತಿ: ರೈಲ್ವೆ ನೇಮಕಾತಿ ಮಾನದಂಡದ ಪ್ರಕಾರ, ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಪೂರ್ಣಗೊಳಿಸಿರಬೇಕಿದ್ದು, ಐಟಿಐ ಪೂರ್ಣಗೊಳಿಸಿರಬೇಕು. ಅದರೊಂದಿಗೆ 2022ರ ನವೆಂಬರ್‌ 17ರ ವೇಳೆಗೆ ಕನಿಷ್ಠ 15 ವರ್ಷ ಪೂರೈಸಿರಬೇಕಿದ್ದು, ಗರಿಷ್ಠ ಎಂದರೆ 24 ಅಥವಾ ಅದಕ್ಕಿಂತ ಒಳಗಿರಬೇಕು. ಒಬಿಸಿ ಅಭ್ಯರ್ಥಿಗೆ 3 ವರ್ಷ, ಎಸ್‌ಸಿ/ಎಸ್ಟಿಅಭ್ಯರ್ಥಿಗೆ 5 ವರ್ಷ, ಪಿಡಬ್ಲ್ಯುಡಿ (ಸಾಮಾನ್ಯ)ಅಭ್ಯರ್ಥಿಗೆ 10 ವರ್ಷ, ಪಿಡಬ್ಲ್ಯುಡಿ (ಒಬಿಸಿ)ಅಭ್ಯರ್ಥಿಗೆ 13 ವರ್ಷ, ಪಿಡಬ್ಲ್ಯುಡಿ (ಎಸ್‌ಸಿ/ಎಸ್‌ಟಿ) 15 ವರ್ಷ ವಿನಾಯಿತಿ ದೊರೆಯಲಿದೆ.

Latest Videos

undefined

ಅರ್ಜಿ ಶುಲ್ಕ, ಅಭ್ಯರ್ಥಿಯ ಆಯ್ಕೆ: ಇಲಾಖೆ ನಿಗದಿ ಮಾಡಿದಂತೆ ಸಾಮಾನ್ಯ ಅಭ್ಯರ್ಥಿಯು ಅರ್ಜಿ ಶುಲ್ಕವಾಗಿ 100 ರುಪಾಯಿ ಪಾವತಿಸಬೇಕಿದೆ. ಎಸ್‌ಸಿ/ಎಸ್‌ಟಿ, ಪಿಡಬ್ಲ್ಯುಡಿ ಅಭ್ಯರ್ಥಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕಿದೆ. ಅಭ್ಯರ್ಥಿಯನ್ನು ಮೆರಿಟ್‌ ಹಾಗೂ ಸಂದರ್ಶನ ಸಹಿತ ವಿವಿಧ ರೀತಿಯ ಮಾನದಂಡಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜ ಜೊತೆಗೆ ಯಾವುದಾದರು ಗುರುತಿನ ಚೀಟಿ (ಆಧಾರ್‌ಕಾರ್ಡ್‌, ಪ್ಯಾನ್‌ಕಾರ್ಡ್‌, ವೋಟರ್‌ ಐಡಿ ಇತ್ಯಾದಿ) ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ ಪ್ರಮಾಣ ಪತ್ರ/ಅಂಕಪಟ್ಟಿಗಳು, ಮೀಸಲಾತಿ/ ಜಾತಿ ಪ್ರಮಾಣ ಪತ್ರ, ಇತರ ಪ್ರಮುಖ ದಾಖಲೆಗಳೆಲ್ಲವೂ ಸೇರಿದಂತೆ ನಕಲು ಪ್ರತಿಗಳನ್ನು ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಯ ವೇತನ ಮಾಹಿತಿಯನ್ನು ಸಂದರ್ಶನದಲ್ಲಿ ತಿಳಿಸಲಾಗುತ್ತದೆ.

*ಆರ್ಜಿ ಸಲ್ಲಿಕೆಗೆ ಡಿಸೆಂಬರ್‌ 17ರಂದು ಕೊನೆಯ ದಿನವಾಗಿದೆ.

* ವಿದ್ಯಾರ್ಹತೆ 10ನೇ ಹಾಗೂ ಐಟಿಐ ಪೂರ್ಣವಾಗಿರಬೇಕು.

*ಫಿಟ್ಟರ್‌ ವಿಭಾಗದಲ್ಲಿ ಅತಿ ಹೆಚ್ಚು ಹುದ್ದೆ ಇವೆ

*ಹೆಚ್ಚಿನ  ಮಾಹಿತಿಗಾಗಿ  https://wcr.indianrailways.gov.in/ ಗೆ ಭೇಟಿ ನೀಡಿ

ರೈಲ್ವೆ ನೇಮಕಾತಿ ಪತ್ರಕ್ಕಾಗಿ ಪ್ರತಿಭಟನೆ
ಹುಬ್ಬಳ್ಳಿ: 2018ರಲ್ಲಿ ನೈಋುತ್ಯ ರೈಲ್ವೆ ನಡೆಸಿದ್ದ ರೈಲ್ವೆ ಟೆಕ್ನಿಷಿಯನ್‌ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿ ಅಭ್ಯರ್ಥಿಗಳು ಇಲ್ಲಿಯ ಗದಗ ರಸ್ತೆಯಲ್ಲಿರುವ ರೈಲು ಸೌಧದ ಎದುರು ಪ್ರತಿಭಟನೆ ನಡೆಸಿದರು.

ವಿವಿಧ ಜಿಲ್ಲೆಗಳಿಂದ ಗುರುವಾರ ಆಗಮಿಸಿದ್ದ ಆಯ್ಕೆಯಾದ ಅಭ್ಯರ್ಥಿಗಳು ರೈಲು ಸೌಧದ ಎದುರು ಜಮಾವಣೆಗೊಂಡು ರೈಲ್ವೆ ಇಲಾಖೆಯ ಧೋರಣೆ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೇಮಕಾತಿ ಪತ್ರ ನಾಲ್ಕು ವರ್ಷವಾದರೂ ನೀಡುತ್ತಿಲ್ಲ. ವಿಳಂಬ ಮಾಡುತ್ತಿರುವುದು ಏಕೇ ಎಂದು ಪ್ರಶ್ನಿಸಿದರು.

2018ರಲ್ಲಿ 320 ಲೋಕೋಪೈಲಟ್‌ ಜತೆಗೆ ಟೆಕ್ನಿಷಿಯನ್‌ಗಳ ನೇಮಕಾತಿಗೂ ಪರೀಕ್ಷೆ ನಡೆಸಲಾಗಿತ್ತು. ಈಗಾಗಲೇ ಲೋಕೋಪೈಲಟ್‌ ಹುದ್ದೆಗೆ ನೇಮಕವಾದವರಿಗೆ ನೇಮಕಾತಿ ಪತ್ರ ನೀಡಿ, ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಟೆಕ್ನಿಷಿಯನ್‌ ಅಭ್ಯರ್ಥಿಗಳ ವಿಷಯದಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

KVS RECRUITMENT 2022: ವಿವಿಧ 13,404 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ ಕೇಂದ್ರೀಯ ವಿದ್ಯಾಲಯ

ಕೇಂದ್ರದ ರೈಲ್ವೆ ಇಲಾಖೆಯಿಂದ ಅನುಮತಿ ಬಂದರೆ ಮಾತ್ರ ನೇಮಕಾತಿ ಪತ್ರ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಕೆಲಸ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಂದ ಸಾಧ್ಯ. ಅವರು ನಮಗೆ ಸ್ಪಂದಿಸುತ್ತಿಲ್ಲ ಎಂದು ಅಭ್ಯರ್ಥಿಗಳು ದೂರಿದರು.

TECH COMPANIES LAYING OFF: 20 ಕ್ಕೂ ಹೆಚ್ಚು ಟೆಕ್ ಕಂಪೆನಿಗಳಲ್ಲಿ ಸರಣಿ ಉದ್ಯೋಗ ಕಡಿತ!

ನೈಋುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ನೇಮಕಾತಿಗೆ ಸಂಬಂಧಪಟ್ಟಅಧಿಕಾರಿಗಳು ಸ್ಥಳಕ್ಕೆ ಬರಬೇಕು. ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಬೇಕು. ಅಲ್ಲಿಯವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

click me!