KVS Recruitment 2022: ವಿವಿಧ 13,404 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ ಕೇಂದ್ರೀಯ ವಿದ್ಯಾಲಯ

Published : Dec 01, 2022, 05:06 PM IST
KVS Recruitment 2022: ವಿವಿಧ 13,404 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ ಕೇಂದ್ರೀಯ ವಿದ್ಯಾಲಯ

ಸಾರಾಂಶ

ಕೇಂದ್ರೀಯ ವಿದ್ಯಾಲಯ ಸಂಘಟನೆ  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 13,404 ಹುದ್ದೆಗಳು ಖಾಲಿ ಇದೆ.   ಅರ್ಜಿ ಸಲ್ಲಿಸಲು ಡಿಸೆಂಬರ್ 25 ಕೊನೆಯ ದಿನಾಂಕವಾಗಿದೆ.

ನವದೆಹಲಿ (ನ.5): ಕೇಂದ್ರೀಯ ವಿದ್ಯಾಲಯ ಸಂಘಟನೆ  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 13,404 ಹುದ್ದೆಗಳು ಖಾಲಿ ಇದೆ.  ಬಹು ನಿರೀಕ್ಷಿತ ಕೆವಿಎಸ್ ಹುದ್ದೆಯನ್ನು ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಪ್ರಕಟಿಸಲಾಗಿದೆ. ಈ ವರ್ಷ, ಟಿಜಿಟಿ, ಪಿಜಿಟಿ, ಪಿಆರ್‌ಟಿ, ಪ್ರಿನ್ಸಿಪಾಲ್, ವೈಸ್ ಪ್ರಿನ್ಸಿಪಾಲ್, ಸಂಗೀತ ಶಿಕ್ಷಕರು, ಲೈಬ್ರರಿಯನ್, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ 13,404 ಹುದ್ದೆಗಳನ್ನು ಪ್ರಕಟಿಸಲಾಗಿದೆ. ಡಿಪಾರ್ಟ್‌ಮೆಂಟ್ ಸ್ಪರ್ಧಾತ್ಮಕ ಪರೀಕ್ಷೆ (ಎಲ್‌ಡಿಸಿಇ) 2022 ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಡಿಸೆಂಬರ್ 25 ಕೊನೆಯ ದಿನಾಂಕವಾಗಿದೆ. KVS ಖಾಲಿ ಹುದ್ದೆಯ 2022 ರ ಸಂಪೂರ್ಣ ವಿವರಗಳನ್ನು  ಇಲ್ಲಿ  ಚರ್ಚಿಸಲಾಗಿದೆ. KVS ನೇಮಕಾತಿ 2022 ಗಾಗಿ ಆಸಕ್ತಿ ಹೊಂದಿರುವ ಪದವೀಧರ ಅಭ್ಯರ್ಥಿಗಳು ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ನೇಮಕಾತಿ ಅಧಿಸೂಚನೆಯಲ್ಲಿ ಪ್ರತಿ ಹುದ್ದೆಗೆ ಅರ್ಹತಾ ಮಾನದಂಡಗಳನ್ನು ಕೂಡ ನೀಡಲಾಗಿದ್ದು ಅದನ್ನು ತಿಳಿದುಕೊಳ್ಳಬೇಕು. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಓದಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆಯನ್ನು ಸ್ಪಷ್ಟವಾಗಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ https://kvsangathan.nic.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. 

ನೇಮಕಾತಿ ಅಭಿಯಾನವು ಒಟ್ಟು13,404  ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ, ಹುದ್ದೆಗಳ ವಿವರಣೆ ಮತ್ತು ಖಾಲಿ ಇರುವ ಹುದ್ದೆಗಳ ಮಾಹಿತಿ ಇಲ್ಲಿದೆ.
ಸ್ನಾತಕೋತ್ತರ ಶಿಕ್ಷಕರು (PGT): 1409 ಹುದ್ದೆಗಳು
ತರಬೇತಿ ಪಡೆದ ಪದವೀಧರ ಶಿಕ್ಷಕರು (TGT): 3176 ಹುದ್ದೆಗಳು
ಪ್ರಾಥಮಿಕ ಶಿಕ್ಷಕರು (PRT): 6414 ಹುದ್ದೆಗಳು
PRT (ಸಂಗೀತ): 303 ಹುದ್ದೆಗಳು
ಸಹಾಯಕ ಆಯುಕ್ತರು: 52 ಹುದ್ದೆಗಳು
ಪ್ರಿನ್ಸಿಪಾಲ್: 239 ಹುದ್ದೆಗಳು
ಉಪ ಪ್ರಾಂಶುಪಾಲರು: 203 ಹುದ್ದೆಗಳು
ಗ್ರಂಥಪಾಲಕ: 355 ಹುದ್ದೆಗಳು
ಹಣಕಾಸು ಅಧಿಕಾರಿ : 6 ಹುದ್ದೆಗಳು
ಸಹಾಯಕ ಇಂಜಿನಿಯರ್ (ಸಿವಿಲ್): 2 ಹುದ್ದೆಗಳು
ಸಹಾಯಕ ವಿಭಾಗ ಅಧಿಕಾರಿ (ASO): 156 ಹುದ್ದೆಗಳು
ಹಿರಿಯ ಸೆಕ್ರೆಟರಿಯೇಟ್ ಸಹಾಯಕ (UDC): 322 ಹುದ್ದೆಗಳು
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (LDC): 702 ಹುದ್ದೆಗಳು
ಹಿಂದಿ ಅನುವಾದಕ: 11 ಹುದ್ದೆಗಳು
ಸ್ಟೆನೋಗ್ರಾಫರ್ ಗ್ರೇಡ್-II: 54 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರೀಯ ವಿದ್ಯಾಲಯ  ಸಂಘಟನೆಯಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ  ಹುದ್ದೆಗೆ ಅನುಸಾರವಾಗಿ ಸ್ನಾತಕೋತ್ತರ ಪದವಿ ಮಾಡಿರಬೇಕು. 

ಪ್ರಿನ್ಸಿಪಾಲ್ ಸ್ನಾತಕೋತ್ತರ ಪದವಿ ಮತ್ತು 8 ವರ್ಷಗಳ ಅನುಭವದೊಂದಿಗೆ B.Ed ಮಾಡಿರಬೇಕು.  35 ರಿಂದ 50 ವರ್ಷಗಳ ವಯೋಮಿತಿ ಇರಬೇಕು.
ವೈಸ್ ಪ್ರಿನ್ಸಿಪಾಲ್ ಸ್ನಾತಕೋತ್ತರ ಪದವಿ, B.Ed ಜೊತೆಗೆ 5 ವರ್ಷಗಳ ಅನುಭವ 35 ರಿಂದ 45 ವಯೋಮಿತಿ ಇರಬೇಕು.
PGT (ಎಲ್ಲಾ ವಿಷಯಗಳು) ಪದವಿ ಮಟ್ಟದಲ್ಲಿ ಅಗತ್ಯವಿರುವ ವಿಷಯದೊಂದಿಗೆ ಸ್ನಾತಕೋತ್ತರ ಪದವಿ ಮತ್ತು B.Ed ಜೊತೆಗೆ  40 ವರ್ಷ ವಯೋಮಿತಿ ಇರಬೇಕು.
TGT (ಎಲ್ಲಾ ವಿಷಯಗಳು) ಪದವಿ ಮತ್ತು B.Ed ಪದವಿ ಹಂತದಲ್ಲಿ ಅಗತ್ಯವಿರುವ ವಿಷಯದೊಂದಿಗೆ 35 ವರ್ಷ ವಯೋಮಿತಿ ಇರಬೇಕು.
PRT (ಎಲ್ಲಾ ವಿಷಯಗಳು) 12 ನೇ ತೇರ್ಗಡೆ + D.Ed/ JBT/ B.Ed + CTET ಜೊತೆಗೆ 30 ವರ್ಷ ವಯೋಮಿತಿ ಇರಬೇಕು.
ಗ್ರಂಥಪಾಲಕ ಹುದ್ದೆಗೆ ಪದವಿಯಾಗಿರಬೇಕು 35 ವರ್ಷ ವಯೋಮಿತಿ ಇರಬೇಕು.
ವಿಭಾಗ ಅಧಿಕಾರಿ ಹುದ್ದೆಗೆ ಪದವಿ ಮಾಡಿರಬೇಕು.
ಹಣಕಾಸು ಅಧಿಕಾರಿ ಹುದ್ದೆಗೆ ಪದವಿ ಮಾಡಿರಬೇಕು.

13,000 ಶಿಕ್ಷಕರ ನೇಮಕ ಪಟ್ಟಿಗೆ ಹೈಕೋರ್ಟ್‌ ತಡೆ

ಆಯ್ಕೆ ಪ್ರಕ್ರಿಯೆ: ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ  ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ನಮ್ಮ ಕ್ಲಿನಿಕ್‌ಗೆ ವೈದ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ: ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ  ಖಾಲಿ ಇರುವ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ  ವೇತನ ದೊರೆಯಲಿದೆ.
ಪ್ರಿನ್ಸಿಪಾಲ್ 78,800/- ರಿಂದ 2,09,200/-
ವೈಸ್ ಪ್ರಿನ್ಸಿಪಾಲ್ 56,100/- ರಿಂದ 1,77,500/-
ಸ್ನಾತಕೋತ್ತರ ಶಿಕ್ಷಕರು (PGTs) 47,600/- ರಿಂದ 1,51,100/-
ತರಬೇತಿ ಪಡೆದ ಪದವೀಧರ ಶಿಕ್ಷಕರು (TGTs) 44,900/- ರಿಂದ 1,42,400/-
ಗ್ರಂಥಪಾಲಕ 44,900/- ರಿಂದ 1,42,400/-
ಸಹಾಯಕ (ಗುಂಪು-ಬಿ) 44,900/- ರಿಂದ 1,42,400/-
ಪ್ರಾಥಮಿಕ ಶಿಕ್ಷಕರು / ಪ್ರಾಥಮಿಕ ಶಿಕ್ಷಕರು (MUSIC) 35,400/- ರಿಂದ 1,12,400/-

PREV
click me!

Recommended Stories

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹೈಕ್ ನಿರೀಕ್ಷೆ, ಜನವರಿ ಸಂಬಳದಲ್ಲೇ ಸಿಗುತ್ತಾ ಏರಿಕೆ ಸ್ಯಾಲರಿ ?
ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ