ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕಾದ್ಯಂತ 800 ವಿವಿಧ ಹುದ್ದೆಗೆ ನಡೆಯುವ ನೇಮಕಾತಿ ನಡೆಯಲಿದಗ್ದು ಅರ್ಜಿ ಸಲ್ಲಿಸಲು ಡಿಸೆಂಬರ್ 11ರಂದು ಕೊನೆಯ ದಿನವಾಗಿದೆ.
ಬೆಂಗಳೂರು (ನ.24): ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ (ಪಿಜಿಸಿಐಎಎಲ್) ವತಿಯಿಂದ ಈ ಬಾರಿ 800 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಹ ವಿದ್ಯಾರ್ಹತೆ ಇರುವ ಆಸಕ್ತರೂ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 11ರಂದು ಕೊನೆಯ ದಿನವಾಗಿದೆ. ನೇಮಕಾತಿ ವಿವರಗಳಾದ ವೇತನ ಶ್ರೇಣಿಯ ಬಗ್ಗೆ, ಅರ್ಜಿ ಸಲ್ಲಿಸುವ ವಿಧಾನ ಹೇಗೆ, ಅಭ್ಯರ್ಥಿಯ ಆಯ್ಕೆ ಹೇಗೆ ಮಾಡಲಾಗುತ್ತದೆ? ವಯೋಮಿತಿ ಜೊತೆಗೆ ವಿದ್ಯಾರ್ಹತೆ ಕುರಿತು ಇಲ್ಲಿ ಮಾಹಿತಿಗಳನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ https://www.powergrid.in/ ಗೆ ಭೇಟಿ ನೀಡಲು ಕೋರಲಾಗಿದೆ.
ಹುದ್ದೆಗಳ ಕುರಿತು ಮಾಹಿತಿ: ಪಿಜಿಸಿಐಎಎಲ್ ಸಂಸ್ಥೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಒಟ್ಟು 800 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಪೈಕಿ ಎಲೆಕ್ಟ್ರಿಕಲ್ ವಿಭಾಗದ ಫೀಲ್ಡ್ ಇಂಜಿನಿಯರ್ 50 ಹುದ್ದೆಗಳು, ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಷನ್ ವಿಭಾಗದ ಫೀಲ್ಡ್ ಇಂಜಿನಿಯರ್ 15 ಹುದ್ದೆ, ಐಟಿ ವಿಭಾಗದಲ್ಲಿ ಫೀಲ್ಡ್ ಇಂಜಿನಿಯರ್ 15 ಹುದ್ದೆ, ವಿದ್ಯುತ್ ನಿರ್ವಹಣೆ ವಿಭಾಗದ ಕ್ಷೇತ್ರ ಮೇಲ್ವಿಚಾರಕ 480 ಹುದ್ದೆ, ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಷನ್ ವಿಭಾಗದ ಕ್ಷೇತ್ರ ಮೇಲ್ವಿಚಾರಕ 240 ಹುದ್ದೆಗಳು ಖಾಲಿ ಇದೆ.
undefined
ವಯೋಮಿತಿ : ಪಿಜಿಸಿಐಎಎಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗೆ ವಯೋಮಿತಿ ಮಾನದಂಡದ ಪ್ರಕಾರ ಕನಿಷ್ಠ 18 ವರ್ಷವಂತೂ ಆಗಿರಬೇಕಿದ್ದು, ಗರಿಷ್ಠ ಮಿತಿಯು ಸಂಸ್ಥೆಯ ಮಾನದಂಡದ ಪ್ರಕಾರ 29 ವರ್ಷದ ಒಳಗಿರಬೇಕು.
ಶೈಕ್ಷಣಿಕ ವಿದ್ಯಾರ್ಹತೆ: ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಕಂಪ್ಯೂಟರ್ ವಿಚಾರದಲ್ಲಿ ಬಿ.ಎಸ್ಸಿ/ ಡಿಪ್ಲೊಮಾ/ ಇಂಜಿನಿಯರಿಂಗ್ ನಲ್ಲಿ B.E/B.Tech/ B.Sc ಇಲೆಕ್ಟ್ರಿಕಲ್ ವಿಚಾರದಲ್ಲಿ ಇಂಜಿನಿಯರಿಂಗ್ ಸಹಿತ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪಡೆದಿರಬೇಕು.
ಅರ್ಜಿ ಶುಲ್ಕ: ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಫೀಲ್ಡ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 400 ರೂ ಅರ್ಜಿ ಶುಲ್ಕ ಪಾವತಿಸಬೇಕು. ಫೀಲ್ಡ್ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 300 ರೂ ಅರ್ಜಿ ಶುಲ್ಕ ಪಾವತಿಸಬೇಕು.
UPSC Recruitment 2022: ಉಪನ್ಯಾಸಕ ಮತ್ತು ಇತರ ಹುದ್ದೆಗಳಿಗೆ ನೇಮಕಾತಿ
ಅರ್ಜಿ ಸಲ್ಲಿಕೆ: ಆಯ್ಕೆಯಾದ ಅಭ್ಯರ್ಥಿಗೆ ಪಿಜಿಸಿಐಎಎಲ್ ಅಧಿನಿಯಮದ ಪ್ರಕಾರ ವೇತನವನ್ನು ನೀಡಲಾಗುತ್ತದೆ. ಮೊದಲು ಪವರ್‌ಗ್ರಿಡ್‌ಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ದೊರೆಯುವ ಅರ್ಜಿ ನಮೂನೆಯನ್ನು ಸರಿಯಾದ ಮಾಹಿತಿಗಳಿಂದ ಭರ್ತಿಗೊಳಿಸಬೇಕು. ಯಾವುದಾದರೂ ಗುರುತಿನ ಚೀಟಿ (ಆಧಾರ್‌ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್/ ಪ್ಯಾನ್‌ಕಾರ್ಡ್), ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿಗಳು, ಪ್ರಮಾಣಪತ್ರ, ಜಾತಿ/ಮೀಸಲಾತಿ ಪ್ರಮಾಣಪತ್ರ ಹಾಗೂ ಇತರೆ ದಾಖಲೆಗಳನ್ನು (ಇದ್ದರೆ ಮಾತ್ರ) ನಕಲು ಪ್ರತಿಗಳನ್ನಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿಯಾದ ಬಳಿಕ ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ವೇತನದ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
850 ಕಂಪನಿಯಿಂದ 1.36 ಲಕ್ಷ ಉದ್ಯೋಗಿಗಳ ವಜಾ, ಇದೀಗ ಗೂಗಲ್ 10,000 ನೌಕರರ ಕಡಿತ
*ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಡಿಸೆಂಬರ್ 11ರಂದು ಕೊನೆಯ ದಿನ
*ಫೀಲ್ಡ್ ಇಂಜಿನಿಯರ್ ಹಾಗೂ ಫೀಲ್ಡ್ ಸೂಪರ್‌ವೈಸರ್ ಹುದ್ದೆ
* ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://www.powergrid.in/ ಗೆ ಭೇಟಿ ನೀಡಬಹುದು.