VSSC Recruitment 2022: 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ವಾಕ್‌ ಇನ್ ಸಂದರ್ಶನ

By Gowthami K  |  First Published Nov 6, 2022, 3:59 PM IST

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ವಿವಿಧ ಟ್ರೇಡ್‌ಗಳಲ್ಲಿ 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 12 ರಂದು ನಡೆಯಲಿರುವ ವಾಕ್‌ ಇನ್ ಇಂಟರ್ವ್ಯೂನಲ್ಲಿ ಭಾಗವಹಿಸಬೇಕು.


ಬೆಂಗಳೂರು (ನ.6): ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ಏರೋನಾಟಿಕಲ್/ಏರೋಸ್ಪೇಸ್ ಇಂಜಿನ್, ಕಂಪ್ಯೂಟರ್ ಸೈನ್ಸ್/ ಎಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್, ಪ್ರೊಡಕ್ಷನ್ ಇಂಜಿನಿಯರ್ ಸೇರಿದಂತೆ ವಿವಿಧ ಟ್ರೇಡ್‌ಗಳಲ್ಲಿ 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್ 12 ರಂದು ನಡೆಯಲಿರುವ ವಾಕ್‌ ಇನ್ ಇಂಟರ್ವ್ಯೂನಲ್ಲಿ ಭಾಗವಹಿಸಬೇಕು.  ಹೆಚ್ಚಿನ ಮಾಹಿತಿಗೆ ಆಸಕ್ತರು ಅಧಿಕೃತ ವೆಬ್‌ತಾಣ https://vssc.gov.in/SPL/login.html ಗೆ ಭೇಟಿ ನೀಡಲು ಕೋರಲಾಗಿದೆ.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪ್ರಥಮ ದರ್ಜೆ ಇಂಜಿನಿಯರಿಂಗ್ ಮಾಡಿರಬೇಕು.  ಅಧಿಸೂಚನೆಯಲ್ಲಿ ತಿಳಿಸಿರುವಂತೆ ಹೆಚ್ಚುವರಿ ಅರ್ಹತೆಯೊಂದಿಗೆ ಪದವಿ ಮಾಡಿರಬೇಕು. 

ಒಟ್ಟು 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ಮಾಹಿತಿ ಇಂತಿದೆ:
ಏರೋನಾಟಿಕಲ್/ಏರೋಸ್ಪೇಸ್ ಇಂಜಿನ್: 15 ಹುದ್ದೆಗಳು
ಕಂಪ್ಯೂಟರ್ ಸೈನ್ಸ್/ಇಂಗ್ಲೆಂಡ್: 20 ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್: 43 ಹುದ್ದೆಗಳು 
ಲೋಹಶಾಸ್ತ್ರ (Metallurgy): 06 ಹುದ್ದೆಗಳು
ಪ್ರೊಡಕ್ಷನ್ ಎಂಜಿನಿಯರ್: 04 ಹುದ್ದೆಗಳು 
ಅಗ್ನಿಶಾಮಕ ಮತ್ತು ಸುರಕ್ಷತೆ ಇಂಜಿನ್: 02 ಹುದ್ದೆಗಳು 
ಹೋಟೆಲ್ ನಿರ್ವಹಣೆ/ಕೇಟರಿಂಗ್ ತಂತ್ರಜ್ಞಾನ: 04 ಹುದ್ದೆಗಳು
ಬಿ.ಕಾಂ(ಹಣಕಾಸು ಮತ್ತು ತೆರಿಗೆ): 25 ಹುದ್ದೆಗಳು 
ಬಿ.ಕಾಂ(ಕಂಪ್ಯೂಟರ್ ಅಪ್ಲಿಕೇಶನ್): 75 ಹುದ್ದೆಗಳು 

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಪ್ರಥಮ ದರ್ಜೆ ಇಂಜಿನಿಯರಿಂಗ್ ಮಾಡಿರಬೇಕು. 65% ಕ್ಕಿಂತ ಕಡಿಮೆ ಇರದಂತೆ  ಪದವಿ, ಬಿ.ಇ/ಬಿ.ಟೆಕ್ ಮತ್ತು ಬಿ.ಕಾಂ  ಮಾಡಿರಬೇಕು.

ವಯೋಮಿತಿ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 30 ವರ್ಷ ದಾಟಿರಬಾರದು, SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು  PWBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. 

IISC Recruitment 2022: ಬೆಂಗಳೂರಿನಲ್ಲಿ ಬಂಪರ್ ಆಫರ್

ಆಯ್ಕೆ ಪ್ರಕ್ರಿಯೆ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ, ತಿರುವನಂತಪುರಂ-695022 ಇಲ್ಲಿ ವಾಕ್‌ ಇನ್ ಇಂಟರ್ವ್ಯೂ ನಡೆಯಲಿದೆ.

KVS Teacher recruitment 2022 : ಬರೋಬ್ಬರಿ 4000 ಕ್ಕೂ ಹೆಚ್ಚು ಹುದ್ದೆಗಳಿಗೆ ಅಧಿಸೂಚನೆ!

ವೇತನ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 9000 ರೂ ಸ್ಟೈಪೆಂಡ್ ನೀಡಲಾಗುವುದು.

click me!