ಕೇಂದ್ರೀಯ ವಿದ್ಯಾಲಯ ಸಂಘಟನೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 4014 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆಯ ದಿನವಾಗಿದೆ.
ನವದೆಹಲಿ (ನ.5): ಕೇಂದ್ರೀಯ ವಿದ್ಯಾಲಯ ಸಂಘಟನೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಟಿಜಿಟಿಗಳು, ಪಿಜಿಟಿಗಳು, ಹೆಡ್ ಮಾಸ್ಟರ್‌ಗಳು, ಸೆಕ್ಷನ್ ಆಫೀಸರ್‌ಗಳು, ಪ್ರಾಂಶುಪಾಲರು ಮತ್ತು ಇತರ ಹುದ್ದೆಗಳು ಖಾಲಿ ಇದ್ದು, ಡಿಪಾರ್ಟ್‌ಮೆಂಟ್ ಸ್ಪರ್ಧಾತ್ಮಕ ಪರೀಕ್ಷೆ (ಎಲ್‌ಡಿಸಿಇ) 2022 ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಅರ್ಹ ನತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ನವೆಂಬರ್ 16 ಕೊನೆಯ ದಿನಾಂಕವಾಗಿದ್ದು, ನೋಡಲ್ ಅಧಿಕಾರಿ ಅರ್ಜಿಯನ್ನು ಪರಿಶೀಲಿಸಲು ನವೆಂಬರ್ 23 ಕೊನೆಯ ದಿನಾಂಕವಾಗಿದೆ. ಪರೀಕ್ಷೆಯ ದಿನಾಂಕವನ್ನು ಅಧಿಕಾರಿಗಳು ಸರಿಯಾದ ಸಮಯದಲ್ಲಿ ಅರ್ಜಿ ಸಲ್ಲಿಸಿದ ಆಸಕ್ತ ಅಭ್ಯರ್ಥಿಗಳಿಗೆ ತಿಳಿಸಲಿದ್ದಾರೆ. LDCE ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯ ಯೋಜನೆ ಮತ್ತು ಪಠ್ಯಕ್ರಮವು KVS ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. KVS ನೇಮಕಾತಿ ಅಧಿಸೂಚನೆಯಲ್ಲಿ ಪ್ರತಿ ಹುದ್ದೆಗೆ ಅರ್ಹತಾ ಮಾನದಂಡಗಳನ್ನು ಕೂಡ ನೀಡಲಾಗಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಓದಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.
KVS 2018 ರಿಂದ 2023 ರವರೆಗೆ DOPT ಯ ಪ್ರಕಾರ ಅರ್ಹತೆಯ ನಿರ್ಣಾಯಕ ದಿನಾಂಕಗಳನ್ನು ಅರ್ಹತೆಯ ದಿನಾಂಕಗಳೊಂದಿಗೆ ಉಲ್ಲೇಖಿಸಿದೆ. ಹೆಚ್ಚಿನ ಮಾಹಿತಿಗೆ https://kvsangathan.nic.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
undefined
ನೇಮಕಾತಿ ಅಭಿಯಾನವು ಒಟ್ಟು 4014 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ, ಅದರಲ್ಲಿ 278 ಹುದ್ದೆಗಳು ಪ್ರಾಂಶುಪಾಲರ ಹುದ್ದೆಗೆ, 116 ವೈಸ್ ಪ್ರಿನ್ಸಿಪಾಲ್, 07 ಹಣಕಾಸು ಅಧಿಕಾರಿ, 22 ಸೆಕ್ಷನ್ ಆಫೀಸರ್, 1200 ಪಿಜಿಟಿ, 2154 ಟಿಜಿಟಿ, ಮತ್ತು 237 ಹೆಡ್ ಮಾಸ್ಟರ್ ಹುದ್ದೆಯಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಸ್ನಾತಕೋತ್ತರ ಪದವಿ ಮಾಡಿರಬೇಕು.
ವಯೋಮಿತಿ: ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 21 ರಿಂದ 40ವರ್ಷದ ಒಳಗಿರಬೇಕು.
India Post Office Recruitment: ಬರೋಬ್ಬರಿ 98083 ಹುದ್ದೆಗಳ ಭರ್ತಿಗೆ ಅಧಿಸೂಚನೆ
ಆಯ್ಕೆ ಪ್ರಕ್ರಿಯೆ: ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹೊಸೂರು ಐಫೋನ್ ಕಾರ್ಖಾನೆಯಲ್ಲಿ 45 ಸಾವಿರ ಕಾರ್ಮಿಕರ ನೇಮಕಕ್ಕೆ TATA GROUP ತಯಾರಿ
ವೇತನ: ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ಮಾಸಿಕ 35,400 ರೂ ನಿಂದ ವೇತನ ಆರಂಭವಾಗಲಿದೆ