ಬಿಇಎಲ್‌ನಲ್ಲಿ ಟ್ರೈನಿ ಎಂಜಿನಿಯರ್‌ಗಳ ನೇಮಕಾತಿ, ಅರ್ಜಿ ಹಾಕಿ

By Suvarna News  |  First Published Aug 28, 2021, 4:59 PM IST

ಸರ್ಕಾರಿ ಸ್ವಾಮ್ಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಟ್(ಬಿಇಎಲ್) ಟ್ರೈನಿ ಎಂಜಿನಿಯರ್‌ಗಳ ನೇಮಕಾತಿಯನ್ನು ಆರಂಭಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳವರೆಗೆ 50 ಸಾವಿರ ರೂ.ವರೆಗೂ ಸಂಬಳ ಸಿಗಲಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 8 ಕೊನೆಯ ದಿನವಾಗಿದೆ.


ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಲ್ಲಿ ನೌಕರಿ ಮಾಡಲು ಬಯಸುವವರಿಗೆ ಗುಡ್ ನ್ಯೂಸ್ ವೊಂದು ಇಲ್ಲಿದೆ. ಅದರಲ್ಲೂ ಕರ್ನಾಟಕದವರಿಗೆ ತಮ್ಮದೇ ನಾಡಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುವ ಸುಯೋಗ ಸಿಗಲಿದೆ. ಆಗ್ರಾ ಹಾಗೂ ಬೆಂಗಳೂರು ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಬಿಇಎಲ್ ತೀರ್ಮಾನಿಸಿದೆ. ಟ್ರೈನಿ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಬಿಇಎಲ್, ಆಗ್ರಾದ ಸ್ಮಾರ್ಟ್ ಸಿಟಿ ಹೆಲ್ಪ್ ಡೆಸ್ಕ್ (ಹೋಮ್ ಲ್ಯಾಂಡ್ ಸೆಕ್ಯುರಿಟಿ) ಮತ್ತು ಬೆಂಗಳೂರು ಕಾಂಪ್ಲೆಕ್ಸ್ ನ ಸ್ಮಾರ್ಟ್ ಸಿಟಿ ಬ್ಯುಸಿನೆಸ್ ಎಸ್‌ಬಿಯುಗೆ ಟ್ರೈನಿ ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲಿದೆ. ಸದ್ಯ ಖಾಲಿ ಇರುವ ೧೪ ಟ್ರೈನಿ ಹಾಗೂ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆಯಾದವರಿಗೆ ಅವರ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಮಾಸಿಕ 25,000 ರಿಂದ 50,000 ವೇತನವನ್ನು ದೊರೆಯಲಿದೆ.

Tap to resize

Latest Videos

undefined

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಈಗಾಗಲೇ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 8 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಬಿಇಎಲ್ ಅಧಿಕೃತ ವೆಬ್‌ಸೈಟ್‌ನಲ್ಲಿ www.bel-india.in ಪೋಸ್ಟ್ ಮಾಡಿರುವ ವಿವರವಾದ ಜಾಹೀರಾತನ್ನು ಪರಿಶೀಲಿಸಬೇಕು. ಒಟ್ಟು 14 ಖಾಲಿ ಹುದ್ದೆಗಳಲ್ಲಿ 10 ಟ್ರೈನಿ ಎಂಜಿನಿಯರ್‌ಗಳು ಮತ್ತು 4 ಪ್ರಾಜೆಕ್ಟ್ ಎಂಜಿನಿಯರ್‌ಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅಂದ ಹಾಗೇ ಬಿಇಎಲ್ ನಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಯಾವುದೇ ಶಾಖೆಯಲ್ಲಿ ಕೆಲಸ ಮಾಡಲು ಸ್ಥಳಾಂತರಕ್ಕೆ  ಸಿದ್ಧರಿರಬೇಕು.

ಬಿಇ/ಬಿ.ಟೆಕ್ ಇನ್ ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್/ ಟೆಲಿಕಮ್ಯುನಿಕೇಷನ್/ಕಮ್ಯುನಿಕೇಶನ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳು ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗರಿಷ್ಟ ವಯೋಮಿತಿ 25 ವರ್ಷಗಳಾಗಿರಬೇಕು.

ಕ್ರೀಡಾಪಟುಗಳಿಗೆ ರೇಲ್ವೆಯಲ್ಲಿ ಉದ್ಯೋಗ, 92,300 ರೂ.ವರೆಗೂ ಮಾಸಿಕ ವೇತನ

ಇನ್ನು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬಿಇ/ಬಿ.ಟೆಕ್ ಇನ್ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದಿರಬೇಕು. ಗರಿಷ್ಟ ವಯೋಮಿತಿ 28 ವರ್ಷಗಳಾಗಿರಬೇಕು.
 

ಬಿಇಎಲ್ ಉದ್ಯೋಗಿಗಳಿಗೆ ಉತ್ತಮ ಸಂಭಾವನೆ ಸಿಗಲಿದೆ. ಟ್ರೈನಿ ಇಂಜಿನಿಯರ್ ಗಳಿಗೆ ಮೊದಲನೇ ವರ್ಷ ತಿಂಗಳಿಗೆ ₹ 25,000 ವೇತನ ದೊರೆಯಲಿದೆ. ಹಾಗೇ 2 ನೇ ವರ್ಷಕ್ಕೆ ತಿಂಗಳಿಗೆ ₹ 28,000 ಮತ್ತು 3 ನೇ ವರ್ಷಕ್ಕೆ ಕ್ರಮವಾಗಿ ₹ 31,000 ಒಟ್ಟು ಒಳಗೊಂಡ ಸಂಭಾವನೆ ಸಿಗಲಿದೆ.

ಇನ್ನು ಪ್ರಾಜೆಕ್ಟ್ ಇಂಜಿನಿಯರ್ ಆದವರಿಗೆ ಮೊದಲ ವರ್ಷ ತಿಂಗಳಿಗೆ ₹ 35,000 ಸಂಭಾವನೆ ಸಿಗಲಿದೆ. ಹಾಗೇ 2 ನೇ ವರ್ಷಕ್ಕೆ ತಿಂಗಳಿಗೆ ₹40,000, 3ನೇ ವರ್ಷಕ್ಕೆ ತಿಂಗಳಿಗೆ ರೂ 45,000 ಮತ್ತು 4ನೇ ವರ್ಷ ತಿಂಗಳಿಗೆ ₹ 50,000 ವೇತನ  ದೊರೆಯಲಿದೆ.

ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳು 1 ವರ್ಷ ಸಂಬಂಧಿತ ಕೈಗಾರಿಕಾ ಅನುಭವವನ್ನು ಹೊಂದಿರಬೇಕು‌. ಹಾಗೇ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳು 2 ವರ್ಷಗಳ ಅನುಭವವನ್ನು ಹೊಂದಿರಬೇಕು. ಹುದ್ದೆಗಳಿಗೆ ಆಯ್ಕೆಯಾದವರು ಆಗ್ರಾ ದಲ್ಲಿಯೂ ಕೆಲಸ ಮಾಡಬೇಕಾಗುತ್ತದೆ.

ಬಿಎಸ್‌ಎಫ್‌ನಲ್ಲಿ 269 ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಶುರು

ಅರ್ಜಿದಾರರು  ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ 500ರೂ. ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ  200 ರೂ.  ಆನ್ ಲೈನ್ ಅರ್ಜಿ ಶುಲ್ಕ ಪಾವತಿಸಬೇಕು. ಆದಾಗ್ಯೂ, ಪಿಡಬ್ಲ್ಯೂಡಿ, ಎಸ್ಸಿ ಮತ್ತು ಎಸ್ಟಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

click me!