UPSC ಪ್ರಿಲಿಮ್ಸ್ ಪರೀಕ್ಷೆ ಮುಂದೂಡಿಕೆ..!

Published : May 04, 2020, 05:34 PM IST
UPSC ಪ್ರಿಲಿಮ್ಸ್ ಪರೀಕ್ಷೆ ಮುಂದೂಡಿಕೆ..!

ಸಾರಾಂಶ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಈ ವರ್ಷದ ಕೇಂದ್ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮತ್ತೆ ಮುಂದೂಡಿದೆ.

ನವದೆಹಲಿ, (ಮೇ.04): ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್​ಸಿ) ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ಆಯ್ಕೆಗಾಗಿ ನಡೆಸುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಿದೆ. 

ಇಂದು (ಸೋಮವಾರ) ಯುಪಿಎಸ್‌ಸಿ ಅಧ್ಯಕ್ಷ ಅರವಿಂದ ಸಕ್ಸೇನಾ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 

ಲಾಕ್‌ಡೌನ್‌: UPSC ಪರೀಕ್ಷೆ ನಡೆಸಲು ಸಿದ್ಧತೆ, ಅಭ್ಯರ್ಥಿಗಳೇ ರೆಡಿಯಾಗಿರಿ..! 

ಮೇ 17ರವರೆಗೆ ಮತ್ತೊಂದು ಸುತ್ತಿನ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 31ರಿಂದ ನಡೆಯಬೇಕಿದ್ದ  ನಾಗರಿಕ ಸೇವಾ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಅನಿದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಯುಪಿಎಸ್​ ತಿಳಿಸಿದೆ. 

ಮೇ 20 ನಂತರ ಮತ್ತೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸಿ ಹೊಸ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಯುಪಿಎಸ್​ಸಿ ಪ್ರಕಟಿಸಿದೆ.

PREV
click me!

Recommended Stories

ಬ್ಯಾಂಕ್ ಆಫ್ ಬರೋಡಾ ಅಧಿಕಾರಿಯ ಮೊದಲ ಪೇ ಸ್ಲಿಪ್‌ ವೈರಲ್: ಕೈಗೆ ಬರುವ ಹಣ ಎಷ್ಟು? ಸೌಲಭ್ಯಗಳ ಪಟ್ಟಿ ಕೇಳಿದ್ರೆ ಬೆರಗಾಗ್ತೀರಿ!
ಬಿಪಿಸಿಎಲ್ ನೇಮಕಾತಿ: ಆಯ್ಕೆಯಾದವರಿಗೆ ಭರ್ಜರಿ ಜಾಕ್‌ಪಾಟ್‌ , ತಿಂಗಳಿಗೆ ₹1.40 ಲಕ್ಷ ಸಂಬಳ!