ಲಾಕ್‌ಡೌನ್‌: UPSC ಪರೀಕ್ಷೆ ನಡೆಸಲು ಸಿದ್ಧತೆ, ಅಭ್ಯರ್ಥಿಗಳೇ ರೆಡಿಯಾಗಿರಿ..!

By Suvarna News  |  First Published Apr 21, 2020, 3:35 PM IST

ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳು ರದ್ದಾಗಿವೆ ಎಂಬ ವದಂತಿಗೆ ಆಯೋಗ ಸ್ಪಷ್ಟನೆ  ನೀಡಿದೆ.


ನವದೆಹಲಿ, (ಏ.21): ಕೊರೋನಾ ಲಾಕ್‌ಡೌನ್ ಹಿನ್ನೆಲೆ ಶಾಲೆ ಹಾಗೂ ನೇಮಕಾತಿ ಪರೀಕ್ಷೆಗಳು ಅಲ್ಲೇ ಸ್ಟಾಪ್ ಆಗಿವೆ. ಮತ್ತೊಂದೆಡೆ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳು ರದ್ದಾಗಿವೆ ಎಂಬ ವದಂತಿಗಳು ಹರಡಿದ್ದವು. 

ಆದರೆ, ಸ್ವತಃ ಯುಪಿಎಸ್‌ಸಿಯೇ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಯಾವ ಪರೀಕ್ಷೆಗಳೂ ರದ್ದಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Latest Videos

undefined

ಜಾಬ್ಸ್ ಸುದ್ದಿಗಾಗಿ ಇಲ್ಲಿ  ಕ್ಲಿಕ್ ಮಾಡಿ

ಯುಪಿಎಸ್‌ಸಿ ಪಿಲಿಮ್ಸ್ ಪರೀಕ್ಷೆ ದಿನಾಂಕ ಸದ್ಯಕ್ಕೆ ಪರಿಷ್ಕರಣೆಗೊಂಡಿಲ್ಲ. ಅದು ನಿಗದಿಯಂತೆ ಮೇ 31ಕ್ಕೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಸದ್ಯ ಕೋವಿಡ್ 19 ಹರಡುವಿಕೆ ತಡೆಯಲು ದೇಶಾದ್ಯಂತ ಮೇ 3ರವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕವನ್ನು ಸದ್ಯಕ್ಕೆ ಪರಿಷ್ಕರಣೆಗೊಳಿಸುವ ಅನಿವಾರ್ಯ ಉದ್ಭವಿಸಿಲ್ಲ. ಹಾಗಾಗಿ ಮೇ 31ಕ್ಕೆ ಪರೀಕ್ಷೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ. 

ಸುಮಾರು 10 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 7 ಲಕ್ಷ ಜನರು ಅಂತಿಮವಾಗಿ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಆಯೋಗದ ಸದಸ್ಯ ಬಾಸ್ಸಿ ತಿಳಿಸಿದ್ದಾರೆ.

ಒಂದು ವೇಳೆ ದಿನಾಂಕ ಪರಿಷ್ಕರಿಸುವ ಅನಿವಾರ್ಯತೆ ಸೃಷ್ಟಿಯಾದರೆ, ಪರಿಷ್ಕೃತ ದಿನಾಂಕದ ಬಗ್ಗೆ ಪರೀಕ್ಷಾರ್ಥಿಗಳಿಗೆ ಪೂರ್ವಭಾವಿಯಾಗಿ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

click me!