8 ಗಂಟೆ ಬದಲು 12 ಗಂಟೆ ಶಿಫ್ಟ್‌: ಸುಗ್ರೀವಾಜ್ಞೆ ಸಾಧ್ಯತೆ

By Suvarna News  |  First Published Apr 15, 2020, 9:57 AM IST

8 ಗಂಟೆ ಬದಲು 12 ಗಂಟೆ ಶಿಫ್ಟ್‌: ಸುಗ್ರೀವಾಜ್ಞೆ ಸಾಧ್ಯತೆ| ಲಾಕ್‌ಡೌನ್‌ ವೇಳೆ ಕೆಲಸ ಸ್ಥಗಿತ| ಇದನ್ನು ಸರಿದೂಗಿಸಲು ಕೆಲಸದ ಅವಧಿ ಹೆಚ್ಚಳಕ್ಕೆ ಸಿದ್ಧತೆ


ನವದೆಹಲಿ(ಏ.15): ಕೇಂದ್ರ ಸರ್ಕಾರವು ಉದ್ಯೋಗಿಗಳ ಕೆಲಸದ ಅವಧಿಯನ್ನು ನಿತ್ಯದ 8 ಗಂಟೆ ಬದಲು 12 ಗಂಟೆಗೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣ ಈಗ ಸರ್ಕಾರಿ ಹಾಗೂ ಖಾಸಗಿ ವಲಯಗಳ ಕಚೇರಿಗಳು, ಉದ್ದಿಮೆಗಳು ಕೆಲಸ ನಿಲ್ಲಿಸಿವೆ. ಹೀಗಾಗಿ ಅನೇಕ ಕೆಲಸಗಳು ಹಾಗೆಯೇ ಬಾಕಿ ಇವೆ. ಈ ಬಾಕಿ ಕೆಲಸ ಸರಿದೂಗಿಸಿಕೊಳ್ಳಲು ಕೆಲಸದ ಅವಧಿ ಹೆಚ್ಚಿಸುವ ಇರಾದೆ ಸರ್ಕಾರಕ್ಕಿದೆ. ಆ ಕಾರಣಕ್ಕೇ ಕರ್ತವ್ಯದ ಅವಧಿಯನ್ನು ಇನ್ನೂ 4 ತಾಸು ಹೆಚ್ಚಿಸುವ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ನಡೆದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ನಿದ್ರೆ ಕಾಣದ ಕಣ್ಣು, ಚೈತನ್ಯ ಕಳೆದುಕೊಂಡ ದೇಹಗಳು: ಇದು ಪೊಲೀಸರ ಬವಣೆ..!

Tap to resize

Latest Videos

undefined

ಕೆಲಸದ ಅವಧಿ ಹೆಚ್ಚಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಅಂಶ ಸುಗ್ರೀವಾಜ್ಞೆಯಲ್ಲಿರಲಿದೆ ಎಂದು ವರದಿ ಹೇಳಿದೆ.

ಲಾಕ್‌ಡೌನ್‌ ಮುಗಿದ ನಂತರ ಕೆಲಸ ಆರಂಭವಾದರೂ, ಊರಿಗೆ ತೆರಳಿರುವ ಕೆಲಸಗಾರರು ತಕ್ಷಣಕ್ಕೇ ಕರ್ತವ್ಯಕ್ಕೆ ಮರಳುವ ಸಾಧ್ಯತೆ ಇಲ್ಲ. ಹೀಗಾಗಿ ಇದ್ದ ನೌಕರರಿಗೇ ಹೆಚ್ಚು ಕೆಲಸ ನೀಡಿ, ಕೊರತೆ ಸರಿದೂಗಿಸಲು ಅವಕಾಶ ನೀಡಬೇಕು ಎಂದು ಉದ್ದಿಮೆ ರಂಗ ಸರ್ಕಾರಕ್ಕೆ ಕೋರಿತ್ತು.

click me!