TISS Faculty Recruitment 2022: ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ

By Suvarna News  |  First Published Jan 15, 2022, 10:01 PM IST

ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್‌ನಲ್ಲಿ ಮೂಲಕ  ಅರ್ಜಿ ಸಲ್ಲಿಸಲು ಜನವರಿ 30, 2022  ಕೊನೆಯ ದಿನವಾಗಿದೆ. 


ಬೆಂಗಳೂರು(ಜ.15): ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆ (Tata Institute of Social Sciences) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಪ್ರಾಧ್ಯಾಪಕ (Professor), ಸಹಾಯಕ ಪ್ರಾಧ್ಯಾಪಕ (Assistant Professor) , ಅಸೋಸಿಯೇಟ್ ಪ್ರಾಧ್ಯಾಪಕ (Associate Professor) ಹುದ್ದೆ ಸೇರಿ ಒಟ್ಟು 23 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಮೂಲಕ  ಅರ್ಜಿ ಸಲ್ಲಿಸಲು ಜನವರಿ 30, 2022  ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ https://www.tiss.edu/ ಗೆ ಭೇಟಿ ನೀಡಿ.

ಒಟ್ಟು 23 ಹುದ್ದೆಗಳ ಮಾಹಿತಿ:
ಪ್ರಾಧ್ಯಾಪಕ : 10 ಹುದ್ದೆಗಳು
ಸಹಾಯಕ ಪ್ರಾಧ್ಯಾಪಕ : 8 ಹುದ್ದೆಗಳು
ಅಸೋಸಿಯೇಟ್ ಪ್ರಾಧ್ಯಾಪಕ : 5 ಹುದ್ದೆಗಳು

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆಯಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ಸ್ನಾತಕೋತ್ತರ ಪದವಿ ಮಾಡಿರಬೇಕು.

ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಲೆ, ಹ್ಯುಮಾನಿಟಿಸ್, ಶಿಕ್ಷಣ, ಕಾನೂನು, ಸಮಾಜ ವಿಜ್ಞಾನಗಳಲ್ಲಿ ಸ್ನಾತಕೋತ್ತರ ಪದವಿ (ಮನೋವಿಜ್ಞಾನ, ಮಾನವಶಾಸ್ತ್ರ, ಸಮಾಜಕಾರ್ಯ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ) ಮತ್ತು ಪಿಎಚ್‌ಡಿ ಯಲ್ಲಿ ಕನಿಷ್ಠ 55%  ಜೊತೆಗೆ 10 ವರ್ಷಗಳ ಕೆಲಸದ ಅನುಭವ ಇರಬೇಕು.

ಅಸೋಸಿಯೇಟ್ ಪ್ರಾಧ್ಯಾಪಕ ಹುದ್ದೆಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  ಕಲೆ, ಹ್ಯುಮಾನಿಟಿಸ್, ಶಿಕ್ಷಣ, ಕಾನೂನು, ಸಮಾಜ ವಿಜ್ಞಾನಗಳಲ್ಲಿ ಸ್ನಾತಕೋತ್ತರ ಪದವಿ (ಮನೋವಿಜ್ಞಾನ, ಮಾನವಶಾಸ್ತ್ರ, ಸಾಮಾಜಿಕ ಕೆಲಸ, ಅರ್ಥಶಾಸ್ತ್ರ, ಭೂಗೋಳ, ಸಮಾಜಶಾಸ್ತ್ರ) ಮತ್ತು ಪಿಎಚ್‌ಡಿ ಮಾಡಿರಬೇಕು ಜೊತೆಗೆ 8 ವರ್ಷಗಳ ಕೆಲಸದ ಅನುಭವ ಇರಬೇಕು.

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  ಕಲೆ, ಹ್ಯುಮಾನಿಟಿಸ್, ಶಿಕ್ಷಣ, ಕಾನೂನು, ಸಮಾಜ ವಿಜ್ಞಾನಗಳಲ್ಲಿ ಸ್ನಾತಕೋತ್ತರ ಪದವಿ (ಮನೋವಿಜ್ಞಾನ, ಮಾನವಶಾಸ್ತ್ರ, ಸಾಮಾಜಿಕ ಕೆಲಸ, ಅರ್ಥಶಾಸ್ತ್ರ, ಭೂಗೋಳ, ಸಮಾಜಶಾಸ್ತ್ರ) ನೆಟ್(NET) ಪರೀಕ್ಷೆ ಪಾಸಾಗಿರಬೇಕು. ಮತ್ತು ಪಿಎಚ್‌.ಡಿಗೆ ಹೆಸರು ನೋಂದಾಯಿಸಿರಬೇಕು.

NVS RECRUITMENT 2022: ಬರೋಬ್ಬರಿ 1925 ಹುದ್ದೆಗಳ ಭರ್ತಿಗೆ ಮುಂದಾದ ನವೋದಯ ವಿದ್ಯಾಲಯ ಸಮಿತಿ

ವೇತನ ವಿವರ: ಟಿಐಎಸ್‌ಎಸ್‌ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ಸಿಗಲಿದೆ.
ಪ್ರಾಧ್ಯಾಪಕ ಹುದ್ದೆಗೆ 1,44,200 ರೂ.ನಿಂದ  2,18,200 ರೂ.
ಅಸೋಸಿಯೇಟ್ ಪ್ರಾಧ್ಯಾಪಕ ಹುದ್ದೆಗೆ  1,31,400 ರೂ ನಿಂದ  2,17,100 ರೂ.
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 57,700 ರೂ ನಿಂದ 1,82,400 ರೂ.

IGNOU Online Journalism Courses: ಆನ್‌ಲೈನ್ ಪತ್ರಿಕೋದ್ಯಮ ಕೋರ್ಸ್ ಆರಂಭಿಸಿದ ಇಗ್ನೋ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಹಿಂದಿನ ದಾಖಲೆ ಮತ್ತು ಸಂದರ್ಶನದಲ್ಲಿ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ. ವಿಶ್ವವಿದ್ಯಾನಿಲಯವು ಸೆಮಿನಾರ್ / ಕೊಲೊಕ್ವಿಯಮ್ / ಉಪನ್ಯಾಸ ಮತ್ತು/ಅಥವಾ ಯಾವುದೇ ಇತರ ವಿಧಾನವನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಪೂರಕ ವಿಧಾನವಾಗಿ ಬಳಸಿಕೊಳ್ಳಬಹುದು.

ಅರ್ಜಿ ಶುಲ್ಕ: ಸಾಮಾನ್ಯ, OBC, EWS ವರ್ಗಕ್ಕೆ ₹2,000/- ಮತ್ತು SC/ST/PwD ಅಭ್ಯರ್ಥಿಗಳಿಗೆ ₹500/- ಆಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಮೂಲಕ ಮಾತ್ರ ಶುಲ್ಕ  ಪಾವತಿಸಬೇಕು.

CIMAP Recruitment 2022: ಬೆಂಗಳೂರಿನ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್

click me!