RRB NTPC Result Announced: ರೈಲ್ವೆ ನೇಮಕಾತಿಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಪ್ರಕಟ

By Suvarna News  |  First Published Jan 15, 2022, 2:03 PM IST

ರೈಲ್ವೆ ನೇಮಕಾತಿ ಮಂಡಳಿ 2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಹುದ್ದೆಗಳ ಅಧಿಸೂಚನೆಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಮತ್ತು ಸಿಬಿಟಿ 2 ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ರಿಜಿಸ್ಟರ್‌ ನಂಬರ್‌  ಅನ್ನು ಬಿಡುಗಡೆ ಮಾಡಿದೆ.


ನವದೆಹಲಿ(ಜ.15): ರೈಲ್ವೆ ನೇಮಕಾತಿ ಮಂಡಳಿ (Railway Recruitment Board) 2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ( NTPC) ಹುದ್ದೆಗಳ ಅಧಿಸೂಚನೆಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶವನ್ನು  ಇಂದು ಬಿಡುಗಡೆ ಮಾಡಿದೆ. ಜೊತೆಗೆ  ಈ ಪರೀಕ್ಷೆ ಬರೆದು ಸಿಬಿಟಿ 2 ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ರಿಜಿಸ್ಟರ್‌ ನಂಬರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಕೆಟಗರಿ ಮತ್ತು Level-Wise ಶಾರ್ಟ್‌ಲಿಸ್ಟ್ ಆದವರ ರಿಜಿಸ್ಟರ್‌ ನಂಬರ್ ಹಾಗೂ ಕಟ್‌ ಆಫ್‌ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ.  ಮುಂದಿನ ಹಂತದ ಪರೀಕ್ಷೆಗೆ ಶೀಘ್ರದಲ್ಲೇ ನೋಟಿಸ್ ಬಿಡುಗಡೆ ಮಾಡಲಿದ್ದು, ನಿಗದಿತ ವೇಳಾಪಟ್ಟಿಯಂದು ಅಭ್ಯರ್ಥಿಗಳು ಸಿಬಿಟಿ 2 ಪರೀಕ್ಷೆಗೆ ಹಾಜರಾಗಬೇಕು.

ಸುಮಾರು 1 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿಯ ಲಿಖಿತ ಪರೀಕ್ಷೆಯನ್ನು  (ಕಂಪ್ಯೂಟರ್ ಆಧಾರಿತ ಪರೀಕ್ಷೆ ಸ್ಟೇಜ್‌-1) ಡಿಸೆಂಬರ್ 28, 2020 ರಿಂದ ಜುಲೈ 31, 2021 ರವರೆಗೆ ಬರೆದಿದ್ದರು.  ಹೆಚ್ಚಿನ ಮಾಹಿತಿಗೆ https://www.rrbbnc.gov.in/ ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.

Tap to resize

Latest Videos

undefined

ಆರ್‌ಆರ್‌ಬಿ ಎನ್‌ಟಿಪಿಸಿ ಸಿಬಿಟಿ-1 ಪರೀಕ್ಷೆ ಬರೆದ ಕರ್ನಾಟಕ ವಲಯದ ಅಭ್ಯರ್ಥಿಗಳು ಫಲಿತಾಂಶವನ್ನು  ಅಧಿಕೃತ ವೆಬ್‌ಸೈಟ್‌ https://www.rrbbnc.gov.in/ ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.

CIMAP RECRUITMENT 2022: ಬೆಂಗಳೂರಿನ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್ ನಲ್ಲಿ ಉದ್ಯೋಗ ನೇಮಕಾತಿ

ರೈಲ್ವೆ ನೇಮಕಾತಿ ಮಂಡಳಿಯು 2019 ರಲ್ಲಿ 35,281 ಎನ್‌ಟಿಪಿಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಟೈಮ್‌ಕೀಪರ್, ಟ್ರೈನ್ ಕ್ಲರ್ಕ್, ಟಿಕೆಟ್ ಕ್ಲರ್ಕ್, ಕ್ಲರ್ಕ್-ಕಮ್-ಟೈಪಿಸ್ಟ್ ಮುಂತಾದ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ 7 ಹಂತಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.  RRB NTPC ಪರೀಕ್ಷೆಯನ್ನು ಡಿಸೆಂಬರ್ 28, 2020 ರಿಂದ ಜುಲೈ 31, 2021 ರವರೆಗೆ ಏಳು ಹಂತಗಳಲ್ಲಿ ನಡೆಸಲಾಯಿತು. ಅಭ್ಯರ್ಥಿಗಳು ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕವನ್ನು ನಮೂದಿಸಿ ತಮ್ಮ ಫಲಿತಾಂಶ ಚೆಕ್‌ ಮಾಡಿಕೊಳ್ಳಬಹುದು.

RRB NTPC CBT-1 ಪರೀಕ್ಷೆ ಫಲಿತಾಂಶ ಬಿಡುಗಡೆ ನಂತರದಲ್ಲಿ, CBT-2 ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. CBT-1 ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.  

UAS Dharwad Recruitment 2022: ಕೃಷಿ ವಿಶ್ವವಿದ್ಯಾಲಯದ Senior Research Fellow ಹುದ್ದೆಗೆ ಅರ್ಜಿ

ಆರ್‌ಆರ್‌ಬಿ'ಯು ಈ ನೇಮಕಾತಿ ಪ್ರಕ್ರಿಯೆ ಮೂಲಕ ಸುಮಾರು 32 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಿದೆ. ಮುಂದಿನ ಹಂತದ ಪರೀಕ್ಷೆಗೆ ಶೀಘ್ರದಲ್ಲೇ ನೋಟಿಸ್ ಬಿಡುಗಡೆ ಮಾಡಲಿದೆ. CBT-1 ನಲ್ಲಿ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ 2 ನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-2) ಪರೀಕ್ಷೆಯನ್ನು ತಾತ್ಕಾಲಿಕವಾಗಿ ಫೆಬ್ರವರಿ 14-18, 2022 ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಇದು ಚಾಲ್ತಿಯಲ್ಲಿರುವ ಷರತ್ತುಗಳು ಮತ್ತು ಕಾಲಕಾಲಕ್ಕೆ ಹೊರಡಿಸಲಾದ ಸರ್ಕಾರದ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ.

ಫಲಿತಾಂಶ ಚೆಕ್ ಮಾಡುವ ವಿಧಾನ ಹೇಗೆ?: ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್‌ https://rrbbnc.gov.in/ ಗೆ ಭೇಟಿ ನೀಡಿ. ಓಪನ್‌ ಆದ ಪೇಜ್‌ ನಲ್ಲಿ CEN 01/2019 (NTPC)- CBT-I Results ಎಂದಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ CBT-2 ಪರೀಕ್ಷೆಗೆ ಆಯ್ಕೆಯಾಗಿರುವವರ ನಂಬರ್ ನೀಡಲಾಗಿದೆ.  ಲೆವೆಲ್‌ 2 ರಿಂದ 6 ವರೆಗೆ ಕೆಟಗರಿವಾರು ಕಟ್‌ ಆಫ್‌ ಅಂಕಗಳನ್ನು ಚೆಕ್‌ ಮಾಡಲು ಲಿಂಕ್‌ಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಪರಿಶೀಲನೆ ಮಾಡಿಕೊಳ್ಳಬಹುದು.

click me!