ಸೇನೆಯಲ್ಲಿ NCCಗೆ ಅವಕಾಶ: ಆಯ್ಕೆಯಾದವರಿಗೆ 1.77 ಲಕ್ಷ ರೂ.ವರೆಗೆ ಸಂಬಳ

By Suvarna News  |  First Published Oct 8, 2021, 4:28 PM IST

ಭಾರತೀಯ ಸೇನೆಯು(The Indian Army) ವಿಶೇಷ ನೇಮಕಾತಿ ಪ್ರವೇಶ ಪ್ರಕ್ರಿಯೆ ಮೂಲಕ NCC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾಸಿದೆ. ಕಿರು ಸೇವಾ ಆಯೋಗ(Short Service Commission) ಅನುದಾನದಡಿ 55 ಹುದ್ದೆಗಳನ್ನು ಭರ್ತಿಗಳನ್ನು ಮಾಡಿಕೊಳ್ಳುತ್ತಿದೆ. ಅರ್ಜಿ ಸಲ್ಲಿಕು ನವೆಂಬರ್ 3 ಕೊನೆಯ ದಿನವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.


ನೀವೇನಾದ್ರೂ ಕಾಲೇಜಿನಲ್ಲಿದ್ದಾಗ ಎನ್ ಸಿಸಿ (NCC) ಕೆಡೆಟ್ ಆಗಿದ್ರಾ? ಶಿಸ್ತು ಸಂಯಮ ರೂಢಿಸಿಕೊಂಡು ಸೇವಾ (Service) ಪ್ರದರ್ಶನ ಮಾಡಿದ್ರಾ? ಮುಂದೆ ಸೇನೆ ಸೇರುವ, ಯೋಧರಾಗುವ ಕನಸು ಕಂಡಿದ್ರಾ?ಅಂಥವರಿಗೀಗ ಬಂಪರ್ ಅವಕಾಶವೊಂದು ಒಲಿದು ಬಂದಿದೆ. ಹೌದು.. ಸೇನೆಯು ವಿಶೇಷ ನೇಮಕಾತಿ ಪ್ರವೇಶ (special entry scheme) ಮೂಲಕ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಭಾರತೀಯ ಸೇನೆಯಲ್ಲಿ NCC ಕೋಟಾದಡಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಈಸ್ಟರ್ನ್ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Tap to resize

Latest Videos

undefined

ಭಾರತೀಯ ಸೇನೆಯು(The Indian Army) ಕಿರು ಸೇವಾ ಆಯೋಗ(Short Service Commission) ಅನುದಾನದಡಿ 55 ಹುದ್ದೆಗಳನ್ನು ಭರ್ತಿಗೆ ಅರ್ಹ  ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ 55 ಹುದ್ದೆಗಳ ನೇಮಕಾತಿ ಪೈಕಿ 50 ಹುದ್ದೆಗಳು NCC ಪುರುಷರಿಗೆ ಮತ್ತು 5 ಹುದ್ದೆಗಳು NCC ಮಹಿಳೆಯರಿಗೆ ಸೇರಿವೆ. ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಕಿರು ಸೇವಾ ಆಯೋಗ (Short Service Commission) ಅನುದಾನಕ್ಕಾಗಿ ಸೇನೆಯು ಎನ್ ಸಿಸಿ ಅಭ್ಯರ್ಥಿಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.  ಅವಿವಾಹಿತ ಪುರುಷರು ಮತ್ತು ಅವಿವಾಹಿತ ಮಹಿಳೆಯರಿಂದ  ಅರ್ಜಿಗಳನ್ನು ಆಹ್ವಾನಿಸಿದೆ. ಎನ್‌ಸಿಸಿ ಪುರುಷರು - 50 (ಸಾಮಾನ್ಯ ವರ್ಗಕ್ಕೆ 45 ಮತ್ತು ಸೇನಾ ಸಿಬ್ಬಂದಿಯ ಯುದ್ಧದ ವಾರ್ಡ್‌ಗಳಿಗೆ 05 ಮಾತ್ರ). ಎನ್‌ಸಿಸಿ(NCC) ಮಹಿಳೆಯರು - 05 (ಸಾಮಾನ್ಯ ವರ್ಗಕ್ಕೆ 04 ಮತ್ತು ಸೈನಿಕರ ಸಾವು ನೋವುಗಳಿಗೆ ಸಂಬಂಧಿಸಿದಂತೆ ಒಂದು ಹುದ್ದೆ ಮಾತ್ರ)ಮೀಸಲಿಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
 

 

ಆಯ್ಕೆಯಾದ ಅಭ್ಯರ್ಥಿಗಳಿಗೆ 49 ವಾರಗಳ ತರಬೇತಿ (Training) ನೀಡಲಾಗುತ್ತದೆ.  ಚೆನ್ನೈನ ಒಟಿಎ (Officers Training Academy) ನಲ್ಲಿ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ತರಬೇತಿ ಕೊಡಲಾಗುತ್ತದೆ. ಈ ತರಬೇತಿಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಇನ್ನು ತರಬೇತಿಯ ಸಂಪೂರ್ಣ ಅವಧಿಯಲ್ಲಿ ಕೆಡೆಟ್‌ಗಳಿಗೆ 56,100 ರೂ. ಸ್ಟೈಫಂಡ್ (Stipend) ನೀಡಲಾಗುತ್ತದೆ. ವೇತನ ಶ್ರೇಣಿ 56,100 ರಿಂದ 1,77,500 ರೂ. ವರೆಗೂ ಸಿಗಲಿದೆ. ಅದರಲ್ಲಿ ಇತರ ಭತ್ಯೆಗಳು ಮತ್ತು ಪ್ರಯೋಜನಗಳು ಸೇರಿರುತ್ತವೆ.

71 ಹುದ್ದೆಗೆ ಐಒಸಿಎಲ್‌ ನೇಮಕಾತಿ: ಸಖತ್ ಸಂಬಳ, ಅರ್ಜಿ ಸಲ್ಲಿಕೆ ಆರಂಭ

ಈ ಕಿರು ಸೇವಾ ಯೋಜನೆ ವಿಶೇಷವಾಗಿ ಎನ್‌ಸಿಸಿ ಅಭ್ಯರ್ಥಿಗಳು ಮತ್ತು ಯುದ್ಧದಲ್ಲಿ (War) ಗಾಯಗೊಂಡ ಮಕ್ಕಳಿಗೆ ಮಾತ್ರ ಅನ್ವಯವಾಗಲಿದೆ. ಈಗಾಗಲೇ ಅಕ್ಟೋಬರ್ 5 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ 3 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ joinindianarmy.nic.in ನಲ್ಲಿ ನವೆಂಬರ್ 3ರೊಳಗೆ ಅರ್ಜಿ ಸಲ್ಲಿಸಬೇಕು. 

NCC ಅಭ್ಯರ್ಥಿಗಳ ವಯೋಮಿತಿ ಜನವರಿ 1, 2021ಕ್ಕೆ ಅನ್ವಯಿಸುವಂತೆ 19 ರಿಂದ 25 ವರ್ಷಗಳ ಒಳಗೆ ಇರಬೇಕು. NCC 'C' ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳು, ತಮ್ಮ ಪದವಿಯ ಎಲ್ಲಾ ವರ್ಷಗಳ ಅಂಕಗಳನ್ನು ಪರಿಗಣಿಸಿ ಒಟ್ಟು ಕನಿಷ್ಠ 50% ಅಂಕ ಗಳಿಸಿರಬೇಕು. ಇನ್ನು ಅಂತಿಮ ವರ್ಷದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶವಿದೆ. ಆದ್ರೆ ಅವರು ಕ್ರಮವಾಗಿ ಮೂರು/ನಾಲ್ಕು ವರ್ಷಗಳ ಪದವಿ ಕೋರ್ಸ್‌ನ ಮೊದಲ ಎರಡು/ಮೂರು ವರ್ಷಗಳಲ್ಲಿ ಕನಿಷ್ಠ 50% ಒಟ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ ಅಭ್ಯರ್ಥಿಗಳು NCC ಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಿರಬೇಕು.  NCC ಯ ಹಿರಿಯ ವಿಭಾಗ/ವಿಂಗ್ ನಲ್ಲಿ ಕನಿಷ್ಠ ಎರಡು/ಮೂರು ವರ್ಷಗಳವರೆಗೆ  ಸೇವೆ ಸಲ್ಲಿಸಿರಬೇಕು.

NCC ಯ ಗ್ರೇಡಿಂಗ್ ಪ್ರಮಾಣಪತ್ರ ಪರೀಕ್ಷೆಯಲ್ಲಿ ಕನಿಷ್ಠ 'B' ಗ್ರೇಡ್ ಪಡೆದಿರಬೇಕು. ಅರ್ಜಿಯ ದಿನಾಂಕದ ಒಳಗೆ NCC 'C' ಪ್ರಮಾಣಪತ್ರವನ್ನು ಹೊಂದಿರದ ಅರ್ಜಿದಾರರು ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕೂಡಲೇ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಹುದಾಗಿದೆ.

SBIನಿಂದ ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿ ಶುರು

click me!