ನೈರುತ್ಯ ರೈಲ್ವೆಯಲ್ಲಿ 904 ಅಪ್ರೆಂಟಿಸ್‌‌ಗೆ ಅರ್ಜಿ ಆಹ್ವಾನ : ರಾಜ್ಯದಲ್ಲೇ ಕೆಲಸ ಮಾಡುವ ಅವಕಾಶ

By Suvarna News  |  First Published Oct 8, 2021, 1:29 PM IST

ಹುಬ್ಬಳ್ಳಿ ಕೇಂದ್ರೀತವಾಗಿರುವ ನೈರುತ್ಯ ರೇಲ್ವೆಯು (Southern Western Railway) 904 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ. ಈಗಾಗಲೇ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಆರಂಭವಾಗಿದೆ. ನವೆಂಬರ್ 3 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದವರಿಗೆ ರಾಜ್ಯದ ಬೆಂಗಳೂರು (Bengaluru), ಹುಬ್ಬಳ್ಳಿ (Hubballi) ಮತ್ತು ಮೈಸೂರು (Mysuru) ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ.


ಇತ್ತೀಚೆಗಷ್ಟೇ ಪೂರ್ವ ರೈಲ್ವೆ (Eastern Railway) ವಲಯವು ಖಾಲಿ ಇರುವ 2945 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿತ್ತು. ಇದೀಗ ನೈರುತ್ಯ ರೈಲ್ವೆ (Southern Western Railway)  ವಿಭಾಗವು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.  ನೈರುತ್ಯ ರೈಲ್ವೆಯ ವಿಭಾಗಗಳು, ಕಾರ್ಯಾಗಾರಗಳು, ಘಟಕಗಳಲ್ಲಿ ಗೊತ್ತುಪಡಿಸಿದ ಟ್ರೇಡ್‌ಗಳಲ್ಲಿ 904 ಹುದ್ದೆಗಳಿಗೆ ಅಪ್ರೆಂಟಿಸ್ ಆಕ್ಟ್ 1961 ರ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ.

ರೈಲ್ವೇ ನೇಮಕಾತಿ ಸೆಲ್(RRC), ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ 904 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದೆ. ಈಗಾಗಲೇ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಶುರು ವಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 3 ಕೊನೆಯ ದಿನಾಂಕವಾಗಿದೆ. 

Latest Videos

undefined

ಈಸ್ಟರ್ನ್ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೈರುತ್ಯ ರೇಲ್ವೆಯಲ್ಲಿ ಎಲೆಕ್ಟ್ರಿಷಿಯನ್ (Electrician), ವೆಲ್ಡರ್ (Welder), ಫಿಟ್ಟರ್ (Fitter), ಕಾರ್ಪೆಂಟರ್ (Carpenter) ಸೇರಿದಂತೆ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.  ಅಭ್ಯರ್ಥಿಗಳು ನವೆಂಬರ್ 3 ರೊಳಗೆ ಅಧಿಕೃತ ವೆಬ್‌ಸೈಟ್ rrchubli.in ನಲ್ಲಿ ಆನ್‌ಲೈನ್ ಅರ್ಜಿ (Online Application) ಯನ್ನು ಸಲ್ಲಿಸಬಹುದು.

ಈ ನೇಮಕಾತಿ ಡ್ರೈವ್ ಮೂಲಕ ದಕ್ಷಿಣ ಪಶ್ಚಿಮ ರೈಲ್ವೆಯಲ್ಲಿ ಹುಬ್ಬಳ್ಳಿ ಡಿವಿಷನ್ (Hubballi Division)-237 ಹುದ್ದೆಗಳು, ಕ್ಯಾರಿಯೇಜ್ ರಿಪೇರ್ ವರ್ಕ್ ಶಾಪ್, ಹುಬ್ಬಳ್ಳಿ (Hubballi) – 217 ಹುದ್ದೆಗಳು, ಬೆಂಗಳೂರು ಡಿವಿಷನ್ (Bengaluru) – 230 ಹುದ್ದೆಗಳು, ಮೈಸೂರು ಡಿವಿಷನ್ (Mysuru) – 177 ಹುದ್ದೆಗಳು, ಸೆಂಟ್ರಲ್ ವರ್ಕ್ ಶಾಪ್, ಮೈಸೂರು – 43 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ ಅಭ್ಯರ್ಥಿಗಳು  ಕನಿಷ್ಟ15 ವರ್ಷ ಹಾಗೂ ಗರಿಷ್ಟ 24 ವರ್ಷದೊಳಗೆ ಇರಬೇಕು. ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳನ್ನು ಮೆಟ್ರಿಕ್ಯುಲೇಷನ್ (Matriculation)  ಮತ್ತು ಐಟಿಐ (ITI) ಅಂಕಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯಾ ಟ್ರೇಡ್‌ನಲ್ಲಿ ಆಯ್ಕೆ ಮಾಡಲಾಗುತ್ತದೆ.

71 ಹುದ್ದೆಗೆ ಐಒಸಿಎಲ್‌ ನೇಮಕಾತಿ: ಸಖತ್ ಸಂಬಳ, ಅರ್ಜಿ ಸಲ್ಲಿಕೆ ಆರಂಭ

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌  Www.rrchubli.in ಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಬಹುದು. ಕೆಲಸಕ್ಕೆ ನೋಂದಾಯಿಸಿಕೊಳ್ಳುವಾಗ ಆನ್‌ಲೈನ್‌ನಲ್ಲಿ 100 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. SC/ ST/ PWBD/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆ ಬಳಿಕ ಮುಂದಿನ ಭವಿಷ್ಯದ ದೃಷ್ಟಿಯಿಂದ ಹಾರ್ಡ್ ಕಾಪಿಯನ್ನು ನಿಮ್ಮ ಬಳಿ ಇರವಿವರಗಳನ್ನು ವೆಬ್  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಹತಾ ಮಾನದಂಡ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು.
 

ರೈಲ್ವೆ ಸಿದ್ಧಪಡಿಸಿದ ಮೆರಿಟ್ ಪಟ್ಟಿಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎರಡನೆಯದಾಗಿ, ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ಮೆರಿಟ್ ಪಟ್ಟಿಯಲ್ಲಿ 10 ನೇ ತರಗತಿಯ  ಫಲಿತಾಂಶದಿಂದ 50% ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಉಳಿದ  50% ಅನ್ನು ಆಯಾ ಟ್ರೇಡ್‌ನಲ್ಲಿ ಐಟಿಐ ಅಭ್ಯರ್ಥಿಗಳು ಪಡೆದ ಅಂಕಗಳಿಗೆ ನೀಡಲಾಗುತ್ತದೆ.

ಪ್ರತಿ ವಿಭಾಗ, ಕಾರ್ಯಾಗಾರ ಮತ್ತು ಘಟಕಕ್ಕೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ವೃತ್ತಿಪರ ತರಬೇತಿಗಾಗಿ ರಾಷ್ಟ್ರೀಯ ಕೌನ್ಸಿಲ್ ಅಥವಾ ವೃತ್ತಿಪರ ತರಬೇತಿಗಾಗಿ ರಾಷ್ಟ್ರೀಯ ಕೌನ್ಸಿಲ್/ವೃತ್ತಿಪರ ತರಬೇತಿಗಾಗಿ ರಾಜ್ಯ ಕೌನ್ಸಿಲ್ (NCVT/SCVT) ನಿಂದ ನೀಡಲ್ಪಟ್ಟ ಪ್ರಮಾಣಪತ್ರ ಹೊಂದಿರಬೇಕು. ಅರ್ಜಿಯ ಯಾವುದೇ ಭೌತಿಕ ಪ್ರತಿಯನ್ನು ಆರ್‌ಆರ್‌ಸಿ/ಹುಬ್ಬಳ್ಳಿಗೆ ಕಳುಹಿಸುವ ಅಗತ್ಯವಿಲ್ಲ. ಅದನ್ನು ಸ್ವೀಕರಿಸಿದರೂ, ಯಾವುದೇ ಪ್ರತಿಕ್ರಿಯೆ ನೀಡವುದಿಲ್ಲ.

SBIನಿಂದ ಪ್ರೊಬೆಷನರಿ ಆಫೀಸರ್ ಹುದ್ದೆಗಳ ನೇಮಕಾತಿ ಶುರು

ರಾಜ್ಯದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಲ್ಲೆ ಕೆಲಸ ಮಾಡಲು ಅವಕಾಶ ದೊರೆಯಲಿದೆ. ಹಾಗಾಗಿ, ಅರ್ಹ ಐಟಿಐ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

click me!