ಪೂರ್ವ ರೈಲ್ವೆ (Eastern Railway)ಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳನ್ನು ರೇಲ್ವೆ ನೇಮಕಾತಿ ಸೆಲ್ (RRC) ನೇಮಕಾತಿ ಮಾಡಿಕೊಳ್ಳಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ 3 ಕೊನೆಯ ದಿನವಾಗಿದೆ. ಅರ್ಜಿ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ರೈಲ್ವೆ ನೇಮಕಾತಿ ಸೆಲ್ (RRC)ಯು, ಪೂರ್ವ ರೈಲ್ವೆ (EASTERN RAILWAY) ವಲಯದಲ್ಲಿ ಖಾಲಿ ಇರುವ 3ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು RRC ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅಕ್ಟೋಬರ್ 4 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆರ್‌ಆರ್‌ಸಿ(RRC) ನೇಮಕಾತಿಗೆ ಅರ್ಜಿ ಸಲ್ಲಿಸಲು ನವೆಂಬರ್ 3ರವರೆಗೆ ಕಾಲಾವಕಾಶವಿದೆ. ಅಧಿಸೂಚನೆ ಬಗ್ಗೆ ತಿಳಿಯಲು
ರೇಲ್ವೆ ನೇಮಕಾತಿ: 3093 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
undefined
ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ 18 ರಂದು ರೈಲ್ವೆ ನೇಮಕಾತಿ ಸೆಲ್ (RRC) ಬಿಡುಗಡೆ ಮಾಡಲಿದೆ. ಹೌರಾ (Howrah)ದಲ್ಲಿ 659 ಹುದ್ದೆ, ಸೀಲ್ ದಹ್ (Sealdah)- 1123, ಅನಸೋಲ್ (Anasol)- 167, ಮಾಲ್ಡಾ (Malda)- 43, ಕಂಚ್ರಪರ (Kanchrapur) -190, ಲಿಲುಹ್ (Liluh)- 85, ಜಮ್ಲಾಪುರ್ (Jamlapur)- 678 ಅಪ್ರೆಂಟಿಸ್ ಹುದ್ದೆಗಳನ್ನು ಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ. 100 ಪಾವತಿಸಬೇಕು. ಇನ್ನು SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವುದು ಕಡ್ಡಾಯ. ಇತರ ಯಾವುದೇ ವಿಧಾನಗಳಲ್ಲಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅಭ್ಯರ್ಥಿಯು ಅಪ್ರೆಂಟಿಸ್ ಆಕ್ಟ್, 1961 ಮತ್ತು ಅಪ್ರೆಂಟಿಸ್‌ಶಿಪ್ ನಿಯಮಗಳು, 1992 ರ ಅಡಿಯಲ್ಲಿ ತರಬೇತಿ ಪಡೆಯಲು ವೈದ್ಯಕೀಯವಾಗಿ ಫಿಟ್ ಆಗಿರಬೇಕು. ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪೂರ್ವ ರೈಲ್ವೆಯ (Eastern Railway) ಯಾವುದೇ ಘಟಕಗಳಿಗೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ,ಅರ್ಹತೆಯ ಸ್ಥಾನದ ಆಧಾರದ ಮೇಲೆ ಮತ್ತು ಎಲ್ಲಾ ಕಡ್ಡಾಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಮೇಲೆ, ಅರ್ಹತೆ ಮಾನದಂಡಗಳನ್ನು ಪೂರೈಸುವ ಕುರಿತು ತರಬೇತಿಗೆ ನಿಯೋಜಿಸಲಾಗುತ್ತದೆ.
ಎಸ್‌ಬಿಐ ಎಸ್‌ಸಿಒ ನೇಮಕಾತಿ: 606 ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 15 ರಿಂದ 24 ವರ್ಷದೊಳಗಿರಬೇಕು. ಅಭ್ಯರ್ಥಿಯು 10 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮಾನ್ಯತೆ ಪಡೆದ ತತ್ಸಮಾನ (10+2 ಪರೀಕ್ಷಾ ವ್ಯವಸ್ಥೆಯ ಅಡಿಯಲ್ಲಿ) ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಒಟ್ಟಾರೆಯಾಗಿ, ಸರ್ಕಾರಿ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ NCVT/SCVTಯಿಂದ ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು .ಆದಾಗ್ಯೂ, ಇನ್ನು ಕೆಲವು ಹುದ್ದೆಗಳಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿದ್ರೂ ಅರ್ಜಿ ಸಲ್ಲಿಸಬಹುದು. ವೆಲ್ಡರ್ (Gas and Electric), ಶೀಟ್ ಮೆಟಲ್ ವರ್ಕರ್ ( Sheet Metal Worker), ಲೈನ್ ಮನ್
(Lineman ), ವೈರ್ ಮನ್ (Wireman), ಕಾರ್ಪೆಂಟರ್ (Carpenter), ಪೇಂಟರ್ (Painter) ಹುದ್ದೆಗಳಿಗೆ ಮಾನ್ಯತೆ ಪಡೆದ ಶಾಲೆಯಲ್ಲಿ 8ನೇ ತರಗತಿ ಉತ್ತೀರ್ಣವಾಗಿದ್ದು, NCVT/SCVTಯಿಂದ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ ಪಡೆದಿರಬೇಕು.
ಪೂರ್ವ ರೈಲ್ವೆ ವಲಯಕ್ಕೆ ಸೇರಲು ಬಯಸುವ ಆಕಾಂಕ್ಷಿಗಳು ಕನಿಷ್ಠ 15 ವರ್ಷ ವಯಸ್ಸಿನವರಾಗಿರಬೇಕು. ಎಸ್‌ಸಿ/ಎಸ್‌ಟಿ (SC, ST) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಸಡಿಲಿಕೆ ಐದು ವರ್ಷ ಇರುತ್ತದೆ. ಹಾಗೇ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಸಡಿಲಿಕೆ ಇರುತ್ತದೆ. ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ (ಪಿಡಬ್ಲ್ಯೂಬಿಡಿ), 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಭಾರತೀಯ ರೈಲ್ವೆ (Indian Railway)ಯು ಜಗತ್ತಿನಲ್ಲೇ ಅತಿದೊಡ್ಡ ಜಾಲವನ್ನು ಹೊಂದಿದೆ. ಹಾಗೆಯೇ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ನೀಡಿದ ಹೆಗ್ಗಳಿಗೆ ನಮ್ಮ ಭಾರತೀಯ ರೈಲ್ವೆಗೆ ಇದೆ. ಪ್ರಯಾಣಿಕರು ಹಾಗೂ ಗೂಡ್ಸ್ ಸೇವೆಯನ್ನ ಸಾಕಷ್ಟು ಆದಾಯವನ್ನು ರೈಲ್ವೆ ಗಳಿಸುತ್ತದೆ.
ಇನ್ನು ಕನ್ನಡದಲ್ಲೇ ಬರೆಯಬಹುದು ಬ್ಯಾಂಕಿಂಗ್ ಪರೀಕ್ಷೆ