South Western Railway Recruitment 2022: ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಸುವರ್ಣವಕಾಶ

By Suvarna News  |  First Published Jan 30, 2022, 3:48 PM IST

ನೈರುತ್ಯ ರೈಲ್ವೆ- ಬೆಂಗಳೂರು ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಫೆಬ್ರವರಿ 5ರಂದು ನೇರ ಸಂದರ್ಶನ ನಡೆಯಲಿದೆ.


ಬೆಂಗಳೂರು: ನೈರುತ್ಯ ರೈಲ್ವೆ- ಬೆಂಗಳೂರು (SWR Recruitment- Bengaluru) ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಾಕ್ಟರ್ಸ್​, ಸ್ಟಾಫ್​ ನರ್ಸ್​​ ಹುದ್ದೆಗಳು ಸೇರಿ ಒಟ್ಟು 18 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 5ರಂದು ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ swr.indianrailways.gov.in ಗೆ ಭೇಟಿ ನೀಡಬಹುದು.

ಒಟ್ಟು 18  ಹುದ್ದೆಯ ಮಾಹಿತಿ:
ಡಾಕ್ಟರ್ಸ್​(ಪಿಜಿಸಿಯನ್)- 1
ಡಾಕ್ಟರ್ಸ್​(GDMO)-6
ಸ್ಟಾಫ್ ನರ್ಸ್​-8
ಲ್ಯಾಬ್​ ಟೆಕ್ನಿಷಿಯನ್-2
ಫಾರ್ಮಾಸಿಸ್ಟ್​-1

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರ ವಿದ್ಯಾರ್ಹತೆ ಪಡೆದಿರಬೇಕು.
ಡಾಕ್ಟರ್ಸ್​(ಪಿಜಿಸಿಯನ್)- ಎಂ.ಡಿ, ಎಂಬಿಬಿಎಸ್
ಡಾಕ್ಟರ್ಸ್​(GDMO)-ಎಂಬಿಬಿಎಸ್
ಸ್ಟಾಫ್ ನರ್ಸ್​-ಬಿಎಸ್ಸಿ ನರ್ಸಿಂಗ್
ಲ್ಯಾಬ್​ ಟೆಕ್ನಿಷಿಯನ್-ಪಿಯುಸಿ, DMLT
ಫಾರ್ಮಾಸಿಸ್ಟ್​-ಪಿಯುಸಿ, ಡಿಪ್ಲೋಮಾ, ಫಾರ್ಮಸಿಯಲ್ಲಿ ಪದವಿ, ಬಿ.ಫಾರ್ಮಾ

IOCL Recruitment 2022: ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೆಲಸದ ಅನುಭವ:
ಲ್ಯಾಬ್​ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಲ್ಯಾಬ್​ ಅಸಿಸ್ಟೆಂಟ್/ ಲ್ಯಾಬ್​ ಟೆಕ್ನಿಷಿಯನ್​ ಆಗಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ವಯೋಮಿತಿ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಪಡಿಸಲಾಗಿದೆ. ಜೊತೆಗೆ  ಆಯಾಯ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಡಾಕ್ಟರ್ಸ್​(ಪಿಜಿಸಿಯನ್)- 50 ವರ್ಷ
ಡಾಕ್ಟರ್ಸ್​(GDMO)-50-65 ವರ್ಷ
ಸ್ಟಾಫ್ ನರ್ಸ್​-20-40 ವರ್ಷ
ಲ್ಯಾಬ್​ ಟೆಕ್ನಿಷಿಯನ್- 19-33 ವರ್ಷ
ಫಾರ್ಮಾಸಿಸ್ಟ್​- 20-40 ವರ್ಷ

ವೇತನ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕಯಾದ ಅಭ್ಯರ್ಥಿಗಳಿಗೆ  ಹುದ್ದೆಗೆ ಅನುಸಾರ  ವೇತನ ಸಿಗಲಿದೆ.
ಡಾಕ್ಟರ್ಸ್​(ಪಿಜಿಸಿಯನ್)- ಮಾಸಿಕ  95,000 ರೂ
ಡಾಕ್ಟರ್ಸ್​(GDMO)- ಮಾಸಿಕ 46,000-75,000 ರೂ
ಸ್ಟಾಫ್ ನರ್ಸ್​- ಮಾಸಿಕ  44,900 ರೂ
ಲ್ಯಾಬ್​ ಟೆಕ್ನಿಷಿಯನ್-ಮಾಸಿಕ  29,200 ರೂ
ಫಾರ್ಮಾಸಿಸ್ಟ್​-ಮಾಸಿಕ  29,200 ರೂ

ಆಯ್ಕೆ ಪ್ರಕ್ರಿಯೆ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ:
ಮುಖ್ಯ ವೈದ್ಯಕೀಯ ಅಧೀಕ್ಷಕರು
ರೈಲ್ವೆ ಆಸ್ಪತ್ರೆ, ಎಂಜಿ ರೈಲ್ವೇ ಕಾಲೋನಿ
ಓಕಳಿಪುರಂ
ಬೆಂಗಳೂರು - 560021

UCIL Recruitment 2022: CA, ICWA, ಪದವೀಧರರಿಗೆ UCIL ನಲ್ಲಿ ಉದ್ಯೋಗವಕಾಶ

ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗೆ ನೇರ ನೇಮಕಾತಿ: ಭಾರತೀಯ ಉಕ್ಕು ಪ್ರಾಧಿಕಾರ (Steel Authority of India- SAIL) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .  ಸ್ಪೆಷಲಿಸ್ಟ್​ ಮತ್ತು ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಸೇರಿ ಒಟ್ಟು 24 ಹುದ್ದೆಗಳು  ಖಾಲಿ ಇದ್ದು, ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 9 ರಿಂದ 11 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ (Walk-in-Interview)ಭಾಗವಹಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಸಂದರ್ಶನ ನಡೆಯುವ ಸ್ಥಳ:
ED ಕಚೇರಿ (M&HS)
DSP ಮುಖ್ಯ ಆಸ್ಪತ್ರೆ ದುರ್ಗಾಪುರ- 713205
ಪಶ್ಚಿಮ್ ಬರ್ಧಮಾನ್

click me!