SCI Recruitment 2022: BE, B Tech ಆದವರಿಗೆ ಮ್ಯಾರಿನ್ ಎಂಜಿನಿಯರ್ ಕೆಲಸ, 2 ಲಕ್ಷಕ್ಕೂ ಅಧಿಕ ವೇತನ

By Suvarna News  |  First Published Jan 2, 2022, 1:04 PM IST

ಶಿಪ್ಪಿಂಗ್​ ಕಾರ್ಪೊರೇಷನ್​ ಆಫ್​ ಇಂಡಿಯಾ  ಖಾಲಿ ಇರುವ ಮಾಸ್ಟರ್ ಮತ್ತು ಮ್ಯಾರಿನ್ ಎಂಜಿನಿಯರ್ ಹುದ್ದೆಗಳಿಗೆ ಬಿಇ, ಬಿ.ಟೆಕ್​, ಪದವಿ ಪೂರ್ಣಗೊಳಿಸಿರುವ ಅನುಭವಸ್ಥರಿಗೆ ಅವಕಾಶ ನೀಡುತ್ತಿದೆ.


ಬೆಂಗಳೂರು: ಶಿಪ್ಪಿಂಗ್​ ಕಾರ್ಪೊರೇಷನ್​ ಆಫ್​ ಇಂಡಿಯಾ (Shipping Corporation of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮಾಸ್ಟರ್ (Master), ಮ್ಯಾರಿನ್ ಎಂಜಿನಿಯರ್ (Marine Engineer)ಸೇರಿ  ಒಟ್ಟು 16  ಹುದ್ದೆಗಳು ಖಾಲಿ ಇದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಬಿಇ, ಬಿ.ಟೆಕ್​, ಪದವಿ ಪೂರ್ಣಗೊಳಿಸಿರಬೇಕು. ಈಗಾಗಲೇ  ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತರು  ಆನ್​ಲೈನ್​ ಇಲ್ಲವೇ  ಆಫ್‌ಲೈನ್  ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.  ಜನವರಿ 16, 2022 ಅರ್ಜಿ ಸಲ್ಲಿಸಲಿ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ www.shipindia.com ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಒಟ್ಟು 16 ಹುದ್ದೆಗಳ ಮಾಹಿತಿ ಇಂತಿದೆ:
ಮಾಸ್ಟರ್- 9 ಹುದ್ದೆಗಳು
ಮ್ಯಾರಿನ್ ಎಂಜಿನಿಯರ್- 7 ಹುದ್ದೆಗಳು

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ:  ಶಿಪ್ಪಿಂಗ್​ ಕಾರ್ಪೊರೇಷನ್​ ಆಫ್​ ಇಂಡಿಯಾ ರೋಸ್ಟರ್‌ನಲ್ಲಿ ನಿಯಮಿತ SCI ಅಧಿಕಾರಿಗಳಾಗಿರಬೇಕು. ಸ್ನಾತಕೋತ್ತರ FG COC/MEO ವರ್ಗ I COC ಪಡೆದ ನಂತರ ಕನಿಷ್ಠ 3 ವರ್ಷಗಳ ಸಮುದ್ರ ಸಮಯವನ್ನು(Sea Time) ಪೂರ್ಣಗೊಳಿಸಿರಬೇಕು, ಅದರಲ್ಲಿ ಕನಿಷ್ಠ 2 ವರ್ಷಗಳ ಸಮುದ್ರ ಸಮಯ(Sea Time)ವು ಮಾಸ್ಟರ್ ಅಥವಾ ಮುಖ್ಯ ಇಂಜಿನಿಯರ್‌ನ ಸಬ್‌ಸ್ಟಾಂಟಿವ್ ಶ್ರೇಣಿಯಲ್ಲಿರಬೇಕು. ನೌಕಾಯಾನ ಮಾಡಿರಬಾರದು/ ಬೇರೆ ಯಾವುದೇ ಶಿಪ್ಪಿಂಗ್ ಕಂಪನಿಯೊಂದಿಗೆ ಕೆಲಸ ಮಾಡಬಾರದು.

BECIL Recruitment 2022: ಪತ್ರಿಕೋದ್ಯಮ ಪದವಿಯಾದವರಿಗೆ ಸುವರ್ಣವಕಾಶ

ವಯೋಮಿತಿ : ಮಾಸ್ಟರ್, ಮ್ಯಾರಿನ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 1, 2021 ರ ಅನ್ವಯ 45 ವರ್ಷ ಮೀರಿರಬಾರದು. ಒಬಿಚ ಕೆಟಗರಿಯವರಿಗೆ 3 ವರ್ಷ ಮತ್ತು SC/ST ಅವರಿಗೆ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಅಪ್ರೈಸಲ್​ ರಿಪೋರ್ಟ್ಸ್​, ಕೆಲಸದ ಅನುಭವ, ಸಂದರ್ಶನ ಮತ್ತು ಇತರೆ ಅರ್ಹತೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ  80,000-2,20,000 ರೂ ವೇತನ ಸಿಗಲಿದೆ.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವಿಳಾಸ ಈ ಕೆಳಗಿನಂತಿದೆ: 
ಆನ್‌ಲೈನ್ ಮೂಲಕ  m.kapil@sci.co.in ಈ  ಐಡಿಗೆ ಕೇಳಿರುವ ದಾಖಲೆಗಳನ್ನು ಭರ್ತಿ ಮಾಡಿ ಮೇಲ್ ಕಳುಹಿಸಬಹುದು
ಆಫ್‌ಲೈನ್ ಮೂಲಕವಾದರೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
Mr. Kapil Mirkur
SM Fleet personnel Dept.
The Shipping Corporation Of India Ltd.
“Shipping House”
3rd Floor
245 Madam Cama Road
Mumbai 400021

ಅಧಿಸೂಚನೆ ಓದಲು ಈ ಲಿಂಕ್ ಕ್ಲಿಕ್ ಮಾಡಿ: https://www.shipindia.com/upload/Adv/Fleet_Circular_-_Absorption_ashore_MS_CEO_2021_final_complete.pdf

ಮೈಸೂರಿನಲ್ಲಿ ಜನವರಿ 4 ರಿಂದ ಉದ್ಯೋಗ ಮೇಳ: ಮೈಸೂರಿನಲ್ಲಿ ಬೃಹತ್ ಉದ್ಯೋಗ ಮತ್ತು ಕೌಶಲ್ಯ ಮೇಳ ಆಯೋಜನೆ ಮಾಡಲಾಗಿದೆ. ಜನವರಿ 4 ರಿಂದ 8ರ ತನಕ ವಿವಿಧ ಸ್ಥಳಗಳಲ್ಲಿ ಮೇಳ ನಡೆಯಲಿದೆ. ಕೆ. ಆರ್. ಕ್ಷೇತ್ರದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ ಎಂದು ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಶಾಸಕರು ಜನವರಿ 4ರಿಂದ ನಡೆಯುವ ಉದ್ಯೋಗ ಮತ್ತು ಕೌಶಲ್ಯ ನೋಂದಣಿ ಕಾರ್ಯಕ್ರಮದ ಪೂರ್ವ ಸಿದ್ಧತೆಯಾಗಿ ವಿವಿಧ ಅಧಿಕಾರಿಗಳ ಜತೆ ಸಭೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಜನವರಿ 4 ರಿಂದ 8ರ ತನಕ ಮಂಗಳವಾರದಿಂದ ಶನಿವಾರದ ತನಕ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ.

Land Surveyor Recruitment 2022: 3000 ಪರವಾನಗಿ ಭೂಮಾಪಕರ ನೇಮಕಾತಿಗೆ ಮತ್ತೆ ಅಧಿಸೂಚನೆ ಹೊರಡಿಸಿದ ಇಲಾಖೆ

ಜನವರಿ 4, 2022ರಂದು ವಿದ್ಯಾಶಂಕರ ಕಲ್ಯಾಣ ಮಂಟಪ, ಗನ್ ಹೌಸ್ ವೃತ್ತದ ಬಳಿ. ಜನವರಿ 5ರಂದು ಒಕ್ಕಲಿಗರ ಹಾಸ್ಟೆಲ್, 2ನೇ ಮೇನ್, ವಿದ್ಯಾರಣ್ಯಪುರಂನಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಜನವರಿ 6ರಂದು ನಿತ್ಯಾನಂದ ಕಲ್ಯಾಣ ಮಂಟಪ, ಸ್ಟರ್ಲಿಂಗ್ ಟಾಕೀಸ್ ಬಳಿ. ಜನವರಿ 7ರಂದು ಭ್ರಮರಾಂಭ ಕಲ್ಯಾಣ ಮಂಟಪ ಶ್ರೀರಾಂಪುರ 2ನೇ ಹಂತ ಮತ್ತು ಜನವರಿ 8ರಂದು ಸಾಮ್ರಾಟ್ ಕಲ್ಯಾಣ ಮಂಟಪ, ಉದಯರವಿ ರಸ್ತೆ, ಕುವೆಂಪು ನಗರ ಇಲ್ಲಿ ಉದ್ಯೋಗ ಮೇಳ ನಡೆಯಲಿದೆ.

click me!