BSNL Recruitment 2022: ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

By Suvarna News  |  First Published Jan 1, 2022, 3:59 PM IST

BSNL ಜಮ್ಮು, ಶ್ರೀನಗರದಲ್ಲಿ ಒಟ್ಟು 12 ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. 
 


ಬೆಂಗಳೂರು(ಜ.1): ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharath Sanchar Nigam Limited-BSNL), ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. ಒಟ್ಟು 12 ಗ್ರಾಜುಯೇಟ್​ ಅಪ್ರೆಂಟಿಸ್, ಡಿಪ್ಲೋಮಾ ಅಪ್ರೆಂಟಿಸ್ (Diploma Apprentice) ಹುದ್ದೆಗಳು ಖಾಲಿ ಇದ್ದು, ಈ ಅಪ್ರೆಂಟಿಸ್ ಹುದ್ದೆಗಳಿಗೆ ಡಿಸೆಂಬರ್ 29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಹರು ಹಾಗೂ ಸೂಕ್ತ ಅಭ್ಯರ್ಥಿಗಳು ಜನವರಿ 20, 2022ರಂದು ಅರ್ಜಿ ಸಲ್ಲಿಸಬಹುದಾಗಿದೆ. ಬಿಎಸ್‌ಎನ್‌ಎಲ್,  ಜಮ್ಮು, ಶ್ರೀನಗರದಲ್ಲಿ ನೇಮಕಾತಿಗೆ ಈ ಬಾರಿ ಅರ್ಜಿಗಳನ್ನು ಆಹ್ವಾನಿಸಿದೆ.  ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅಧಿಕೃತ ಪೋರ್ಟಲ್ www.mhrdnats.gov.in ಅಥವಾ https://bsnl.co.in/ ಗೆ ಭೇಟಿ ನೀಡಿ. 

ಶೈಕ್ಷಣಿಕ ವಿದ್ಯಾರ್ಹತೆ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ತಮ್ಮನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ (Ministry of Human Resource Development) ಪೋರ್ಟಲ್ mhrdnats.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು.   ಜಮ್ಮು, ಶ್ರೀನಗರ ಟೆಲಿಕಾಂ ಸರ್ಕಲ್, ಇಂಜಿನಿಯರಿಂಗ್/ ಟೆಕ್ನಾಲಜಿ ಕ್ಷೇತ್ರದಲ್ಲಿ (ಎಲೆಕ್ಟ್ರಾನಿಕ್ಸ್/ ಇ& ಟಿಸಿ/ ಕಂಪ್ಯೂಟರ್/ ಐಟಿ)  ಡಿಪ್ಲೋಮಾ ವನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಹೊಂದಿರುವವರನ್ನು ಒಂದು ವರ್ಷದ ಅವಧಿಗೆ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ನೇಮಕ ಮಾಡಿಕೊಳ್ಳಲಿದೆ. ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿಯು ಒಂದು ವರ್ಷವಿರುತ್ತದೆ. 

Tap to resize

Latest Videos

undefined

ವಯೋಮಿತಿ: ಗ್ರಾಜುಯೇಟ್​ ಅಪ್ರೆಂಟಿಸ್, ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 31/ 01/ 2022 ತಕ್ಕಂತೆ  25 ವರ್ಷ ಮೀರಿರಬಾರದು.

MYSURU UDYOGA MELA: ಮೈಸೂರಿನಲ್ಲಿ ಜನವರಿ 4 ರಿಂದ ಉದ್ಯೋಗ ಮೇಳ

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಗ್ರಾಜುಯೇಟ್​ ಅಪ್ರೆಂಟಿಸ್, ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಶಾರ್ಟ್​​ಲಿಸ್ಟಿಂಗ್​, ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.  ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ. ಮತ್ತು ಜಮ್ಮು ಕಾಶ್ಮೀರದ ಜಮ್ಮು ಮತ್ತು ಶ್ರೀನಗರದಲ್ಲಿ ಉದ್ಯೋಗ ನೀಡಲಾಗುತ್ತದೆ.

 ಮೈಸೂರಿನಲ್ಲಿ ಜನವರಿ 4 ರಿಂದ ಉದ್ಯೋಗ ಮೇಳ: ಮೈಸೂರಿನಲ್ಲಿ ಬೃಹತ್ ಉದ್ಯೋಗ ಮತ್ತು ಕೌಶಲ್ಯ ಮೇಳ ಆಯೋಜನೆ ಮಾಡಲಾಗಿದೆ. ಜನವರಿ 4 ರಿಂದ 8ರ ತನಕ ವಿವಿಧ ಸ್ಥಳಗಳಲ್ಲಿ ಮೇಳ ನಡೆಯಲಿದೆ. ಕೆ. ಆರ್. ಕ್ಷೇತ್ರದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ ಎಂದು ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಶಾಸಕರು ಜನವರಿ 4ರಿಂದ ನಡೆಯುವ ಉದ್ಯೋಗ ಮತ್ತು ಕೌಶಲ್ಯ ನೋಂದಣಿ ಕಾರ್ಯಕ್ರಮದ ಪೂರ್ವ ಸಿದ್ಧತೆಯಾಗಿ ವಿವಿಧ ಅಧಿಕಾರಿಗಳ ಜತೆ ಸಭೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಜನವರಿ 4 ರಿಂದ 8ರ ತನಕ ಮಂಗಳವಾರದಿಂದ ಶನಿವಾರದ ತನಕ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ.

Land Surveyor Recruitment 2022: 3000 ಪರವಾನಗಿ ಭೂಮಾಪಕರ ನೇಮಕಾತಿಗೆ ಮತ್ತೆ ಅಧಿಸೂಚನೆ

ಜನವರಿ 4, 2022ರಂದು ವಿದ್ಯಾಶಂಕರ ಕಲ್ಯಾಣ ಮಂಟಪ, ಗನ್ ಹೌಸ್ ವೃತ್ತದ ಬಳಿ. ಜನವರಿ 5ರಂದು ಒಕ್ಕಲಿಗರ ಹಾಸ್ಟೆಲ್, 2ನೇ ಮೇನ್, ವಿದ್ಯಾರಣ್ಯಪುರಂನಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಜನವರಿ 6ರಂದು ನಿತ್ಯಾನಂದ ಕಲ್ಯಾಣ ಮಂಟಪ, ಸ್ಟರ್ಲಿಂಗ್ ಟಾಕೀಸ್ ಬಳಿ. ಜನವರಿ 7ರಂದು ಭ್ರಮರಾಂಭ ಕಲ್ಯಾಣ ಮಂಟಪ ಶ್ರೀರಾಂಪುರ 2ನೇ ಹಂತ ಮತ್ತು ಜನವರಿ 8ರಂದು ಸಾಮ್ರಾಟ್ ಕಲ್ಯಾಣ ಮಂಟಪ, ಉದಯರವಿ ರಸ್ತೆ, ಕುವೆಂಪು ನಗರ ಇಲ್ಲಿ ಉದ್ಯೋಗ ಮೇಳ ನಡೆಯಲಿದೆ.

click me!