Prasar Bharati Recruitment 2022: ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

By Suvarna NewsFirst Published Jan 14, 2022, 1:27 PM IST
Highlights

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.  ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. 

ಬೆಂಗಳೂರು(ಜ.14): ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ (Prasar Bharathi) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.  ಮಲ್ಟಿ ಮೀಡಿಯಾ ಜರ್ನಲಿಸ್ಟ್ ( Multi Media Journalist ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು,  ಅನುಭವಿ ಮತ್ತು ಕ್ರಿಯಾತ್ಮಕರಿಂದ ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗಳ ಆಯ್ಕೆಗೆ ನೇರ ಸಂದರ್ಶನ ನಡೆಸಲಿರುವ ಬಗ್ಗೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ 28 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣ https://prasarbharati.gov.in/pbvacancies/ ಗೆ ಭೇಟಿ ನೀಡಬಹುದು.

ಹುದ್ದೆಯ ವಿವರ: ಪ್ರಸಾರ ಭಾರತಿಯ ಮಲ್ಟಿ ಮೀಡಿಯಾ ಜರ್ನಲಿಸ್ಟ್ ವಿಭಾಗದಲ್ಲಿ ಒಟ್ಟು 8 ಹುದ್ದೆಗಳು ಖಾಲಿ ಇದ್ದು,  ಚೆನ್ನೈ -3, ಮದುರೈ-1, ತಿರುಚಿರಾಪಳ್ಳಿ -1, ಕೊಯಂಬೊತ್ತೂರ್ -1, ಸೇಲಂ -1, ತಿರುನೆಲ್ವೇಲಿ-1 ಹುದ್ದೆಗಳು ಖಾಲಿ ಇದೆ.

ಶೈಕ್ಷಣಿಕ ವಿದ್ಯಾರ್ಹತೆ: ಪ್ರಸಾರ ಭಾರತಿಯ ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಮಾಡಿರಬೇಕು. 

ಭಾಷಾ ಅನುಭವ: ಪ್ರಸಾರ ಭಾರತಿಯ ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ  ನಿರರ್ಗಳವಾಗಿ ಹಿಂದಿ ಬರಬೇಕು. ವೀಡಿಯೋ ಜರ್ನಲಿಸಂನಲ್ಲಿ ಅನುಭವ ಇರಬೇಕು. ದಕ್ಷಿಣ ಭಾರತೀಯ ಭಾಷೆಗಳು ಬರಬೇಕು. ಮಾತ್ರವಲ್ಲ ಹುದ್ದೆಗೆ ಸಂಬಂಧಿಸಿ 8 ವರ್ಷಗಳ ಅನುಭವ ಹೊಂದಿರಬೇಕು.

ವಯೋಮಿತಿ: ಪ್ರಸಾರ ಭಾರತಿಯ ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ  35 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ದಿನಾಂಕ 28-01-2022ರಂದು ಬೆಳಿಗ್ಗೆ 10 ಗಂಟೆಗೆ  ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ  ಮಾಸಿಕ 30,000 ವೇತನ ದೊರೆಯಲಿದೆ.

ಈ ಹುದ್ದೆಗಳಿಗೆ ಅರ್ಹರಾದಂತ ಅಭ್ಯರ್ಥಿಗಳು ಸಂದರ್ಶನಕ್ಕೆ ತೆರಳೋ ಮುನ್ನ https://applications.prasarbharati.org ಲಿಂಕ್ ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಸಂದರ್ಶನ ನಡೆಯುವ ಸ್ಥಳ:
DD News,
Doordarshan Kendra,
5 Sivananda Salai, Chennai
Pin – 600005, Tamil Nadu

KARNATAKA VILLAGE ACCOUNTANT RECRUITMENT 2022: 355 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

ಪ್ರಸಾರ ಭಾರತಿಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.20 ಕೊನೆ ದಿನ: ಪ್ರಸಾರ ಭಾರತಿಯು ಡಿಡಿ-ಕಿಸಾನ್ ನ  ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Production Executive) ಮತ್ತು ಸೀನಿಯರ್ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ( Senior Production Exicutive) ಹುದ್ದೆಗಳಿಗೆ ಅರ್ಹ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಡಿಡಿ-ಕಿಸಾನ್ ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವ  ಅನುಭವಿ ಮತ್ತು ಕ್ರಿಯಾತ್ಮಕ ವ್ಯಕ್ತಿಗಳಿಂದ ಪ್ರಸಾರ್ ಭಾರತಿ ಅರ್ಜಿಗಳನ್ನು ಆಹ್ವಾನಿಸಿದೆ.

ಅಂದಹಾಗೆ ಈ ಸೇವೆಗಳು ಸಂಪೂರ್ಣವಾಗಿ ಕಾಂಟ್ರಾಕ್ಟ್  ಆಧಾರದ ಮೇಲೆ ಇರುತ್ತವೆ. ಈ ನೇಮಕಾತಿಯಲ್ಲಿ ಸೀನಿಯರ್ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Senior Production Executive) - 6 ಹುದ್ದೆಗಳು, ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Production Executive) -3 ಹುದ್ದೆಗಳು ಸೇರಿ ಒಟ್ಟು 9 ಹುದ್ದೆಗಳನ್ನು ನೇಮಕ‌ ಮಾಡಿಕೊಳ್ಳಲಾಗುತ್ತದೆ.

ಪ್ರಸಾರ ಭಾರತಿಯಲ್ಲಿ ಈ ಎಲ್ಲಾ ನಿಯಮಗಳು ಮತ್ತು ಷರತ್ತುಗಳ ಮೇಲೆ ಕೆಲಸ ಮಾಡಲು  ಸಿದ್ಧರಿರುವ ಅಭ್ಯರ್ಥಿಗಳು, ಅಗತ್ಯವಿರುವ ವಿದ್ಯಾರ್ಹತೆಗಳು ಮತ್ತು ಮೇಲೆ ಸೂಚಿಸಿದ ಅನುಭವವನ್ನು ಹೊಂದಿರುವವರು ಜನವರಿ 20ರ ಒಳಗಾಗಿ ಪ್ರಸಾರ ಭಾರತಿ ವೆಬ್ ಲಿಂಕ್ https://applications.prasarbharati.org/ ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 

Shivamogga Anganwadi Recruitment 2022: ಶಿವಮೊಗ್ಗದಲ್ಲಿ 88 ಅಂಗನವಾಡಿ ಹುದ್ದೆಗಳಿಗೆ ಅರ್ಜಿ

click me!