SECR Recruitment 2022: ಪ್ಯಾರಾ ಮೆಡಿಕಲ್‌ನ ವಿವಿಧ ಹುದ್ದೆಗಳಿಗೆ ಆಗ್ನೇಯ ಮಧ್ಯ ರೈಲ್ವೆ ಸಂದರ್ಶನ

By Suvarna NewsFirst Published Jan 13, 2022, 8:25 PM IST
Highlights

ಆಗ್ನೇಯ ಮಧ್ಯ ರೈಲ್ವೆ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 75  ಪ್ಯಾರಾ ಮೆಡಿಕಲ್ ಸ್ಟಾಫ್ ಪೋಸ್ಟ್‌ ಹುದ್ದೆಗಳು ಖಾಲಿ ಇದ್ದು ಅಸಕ್ತರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಬೆಂಗಳೂರು(ಜ.13): ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಆಗ್ನೇಯ ಮಧ್ಯ ರೈಲ್ವೆ (South East Central Railway) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 75  ಪ್ಯಾರಾ ಮೆಡಿಕಲ್ ಸ್ಟಾಫ್ ಪೋಸ್ಟ್‌ ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ (walk-in interview) ನಿರ್ದಿಷ್ಟ ದಿನಾಂಕದಂದು ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://secr.indianrailways.gov.in/ ಗೆ ಭೇಟಿ ನೀಡಬಹುದು.

ಅರೆವೈದ್ಯಕೀಯ ಸಿಬ್ಬಂದಿಯನ್ನು ಸೆಂಟ್ರಲ್ ಆಸ್ಪತ್ರೆ, ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇ, ಬಿಲಾಸ್‌ಪುರಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಹುದ್ದೆಗೆ ಅನುಗುಣವಾಗಿ ಜನವರಿ 18 ರಿಂದ ನೇರ ಸಂದರ್ಶನ ಆರಂಭವಾಗಲಿದ್ದು ಜನವರಿ 25ರ ತನಕ ಇರಲಿದೆ.

ಒಟ್ಟು 75 ಹುದ್ದೆಯ ವಿವರಗಳು ಈ ಕೆಳಗಿನಂತಿದೆ
ಸ್ಟಾಫ್ ನರ್ಸ್: 49 ಹುದ್ದೆಗಳು
ಫಾರ್ಮಸಿಸ್ಟ್: 4 ಹುದ್ದೆಗಳು
ಡ್ರೆಸ್ಸರ್: 6 ಪೋಸ್ಟ್‌ಗಳು
ಕ್ಷ-ಕಿರಣ  ತಂತ್ರಜ್ಞ (X-Ray technician): 3 ಪೋಸ್ಟ್‌ಗಳು
ದಂತ ನೈರ್ಮಲ್ಯ ತಜ್ಞ (Dental Hygienist): 1 ಪೋಸ್ಟ್
ಲ್ಯಾಬ್ ಸೂಪರಿಂಟೆಂಡೆಂಟ್: 2 ಹುದ್ದೆಗಳು
ಲ್ಯಾಬ್ ಅಸಿಸ್ಟೆಂಟ್: 7 ಹುದ್ದೆಗಳು
ಫಿಸಿಯೋಥೆರಪಿಸ್ಟ್: 1 ಪೋಸ್ಟ್
ಆಡಿಯೋ-ಕಮ್-ವಾಕ್ ಚಿಕಿತ್ಸಕ (Audio-cum-Speech Therapist): 1 ಪೋಸ್ಟ್
Refractionist: 1 ಪೋಸ್ಟ್

RCF Recruitment 2022:10th,12th ಐಟಿಐ ಆದವರಿಗೆ ರೈಲು ಕೋಚ್ ಫ್ಯಾಕ್ಟರಿಯಲ್ಲಿ ಉದ್ಯೋಗವಕಾಶ

ಹುದ್ದೆಗೆ ಅನುಗುಣವಾಗಿ ನೇರ ಸಂದರ್ಶನ ನಡೆಯುವ ದಿನಾಂಕಗಳು
ಸ್ಟಾಫ್ ನರ್ಸ್: ಜನವರಿ 18, 19, 20, 21, 2022
ಫಾರ್ಮಾಸಿಸ್ಟ್, ಎಕ್ಸ್-ರೇ ತಂತ್ರಜ್ಞ ಮತ್ತು ಡ್ರೆಸ್ಸರ್: ಜನವರಿ 22, 2022
ಲ್ಯಾಬ್ ಸೂಪರಿಂಟೆಂಡೆಂಟ್, ಲ್ಯಾಬ್ ಅಸಿಸ್ಟೆಂಟ್, ಡೆಂಟಲ್ ಹೈಜೀನಿಸ್ಟ್, ಫಿಸಿಯೋಥೆರಪಿಸ್ಟ್, ಆಡಿಯೋ-ಕಮ್-ಸ್ಪೀಚ್ ಥೆರಪಿಸ್ಟ್, ರಿಫ್ರಾಕ್ಷನಿಸ್ಟ್: ಜನವರಿ 24, 25, 2022

ಶೈಕ್ಷಣಿಕ ವಿದ್ಯಾರ್ಹತೆ: ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ತಿಗಳು ಹುದ್ದೆಗನುಸಾರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕೋರ್ಸ್ ಗಳನ್ನು ಮಾಡಿರಬೇಕು.

ಆಯ್ಕೆ ಪ್ರಕ್ರಿಯೆ: ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಭಯರ್ಥಿಗಳ ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲ ನಡೆಯಲಿದೆ. 

ಅಭ್ಯರ್ಥಿಗಳು ಅರ್ಜಿಯನ್ನು ಅನ್ನು ಡೌನ್‌ಲೋಡ್ ಮಾಡಿಕೊಂಡು ಕೇಳಿರುವ ವಿವರಗಳನ್ನು ಭರ್ತಿ ಮಾಡಬೇಕು. ವಾಕ್-ಇನ್ ಸಂದರ್ಶನಕ್ಕೆ ಹಾಜರಿರುವಾಗ, ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ನೀಡಬೇಕು.

ಸಂದರ್ಶನ ನಡೆಯುವ ಸ್ಥಳ:
Medical Director
Central Hospital
SEC Railway
Bilaspur, Chhattisgarh

Infosys Off Campus Drive 2022: 55,000 ಫ್ರೆಶರ್ ಹುದ್ದೆಗಳ ನೇಮಕಾತಿ

ಕ್ರೀಡಾ ಕೋಟದಡಿ SSLC, PUC ಪಾಸಾದವರಿಗೆ ಉದ್ಯೋಗವಕಾಶ: ದಕ್ಷಿಣ ಮಧ್ಯ ರೈಲ್ವೆ (South Central Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕ್ರೀಡಾ​ ಕೋಟಾದ (Sports Quota) ಒಟ್ಟು 21  ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಲು ಜನವರಿ 17 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ scr.indianrailways.gov.in ಗೆ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ದಕ್ಷಿಣ ಮಧ್ಯ ರೈಲ್ವೆ ನೇಮಕಾತಿಯ ಕ್ರೀಡಾ​ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ 10ನೇ ತರಗತಿ, 12 ನೇ ತರಗತಿ, ಐಟಿಐ ಪಾಸಾಗಿರಬೇಕು.

click me!