ONGC Recruitment 2022: ONGCಯಲ್ಲಿನ HR ಮತ್ತು PRO ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

By Suvarna News  |  First Published Dec 16, 2021, 8:02 PM IST
  • ONGC ಒಟ್ಟು 21 ಹುದ್ದೆಗಳು ಖಾಲಿ ಇದ್ದು ಅರ್ಹರಿಂದ ಅರ್ಜಿ ಆಹ್ವಾನಿಸಿದೆ
  • ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ
  • ಹೆಚ್ಚಿನ ಮಾಹಿತಿಗಾಗಿ www.ongcindia.com ಗೆ ಭೇಟಿ ನೀಡಿ

ಬೆಂಗಳೂರು (ಡಿ16): ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌ (Oil and Natural Gas Corporation Limited-ONGC)ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಕಂಪೆನಿಯಲ್ಲಿ ಒಟ್ಟು 21 HR ಎಕ್ಸಿಕ್ಯೂಟಿವ್​​, ಪಬ್ಲಿಕ್​​ ರಿಲೇಷನ್​ ಆಫೀಸರ್ (PRO) ಹುದ್ದೆಗಳು ಖಾಲಿ ಇದೆ. ಡಿಪ್ಲೋಮಾ, ಎಂಎಸ್ಸಿ, ಎಂಬಿಎ, ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಡಿಸೆಂಬರ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.  ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಹೆಚ್ಚಿನ ಮಾಹಿತಿಗಾಗಿ www.ongcindia.com ಗೆ ಭೇಟಿ ನೀಡಲು ಕೋರಲಾಗಿದೆ.

ವಿದ್ಯಾರ್ಹತೆ: ಹೆಚ್‌ಆರ್ ಎಕ್ಸಿಕ್ಯುಟಿವ್ () ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ () ಹುದ್ದೆಗಳಿಗೆ ಎಂಬಿಎ/ಪೋಸ್ಟ್ ಗ್ರಾಜುಯೇಶನ್ ಪದವಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ ; ಪಿಜಿ ಪದವಿ/ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

Tap to resize

Latest Videos

undefined

HR ಎಕ್ಸಿಕ್ಯೂಟಿವ್​​- ಕನಿಷ್ಠ ಶೇ.60 ಅಂಕಗಳೊಂದಿಗೆ HRD/HRM ನಲ್ಲಿ ಎಂಬಿಎ ಪೂರ್ಣಗೊಳಿಸಿರಬೇಕು/ ಅಥವಾ ಕನಿಷ್ಠ 60% ಅಂಕಗಳೊಂದಿಗೆ ಸಿಬ್ಬಂದಿ ನಿರ್ವಹಣೆ/ IR/ ಕಾರ್ಮಿಕ ಕಲ್ಯಾಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು/ ಅಥವಾ ಕನಿಷ್ಠ 60% ಅಂಕಗಳೊಂದಿಗೆ PM/ IR/ ಕಾರ್ಮಿಕ ಕಲ್ಯಾಣದಲ್ಲಿ ಕನಿಷ್ಠ 2 ವರ್ಷಗಳ ಪೂರ್ಣ ಸಮಯದ ಸ್ನಾತಕೋತ್ತರ ಡಿಪ್ಲೊಮಾ ಪೂರ್ಣಗೊಳಿಸಿರಬೇಕು/ ಅಥವಾ ಕನಿಷ್ಠ 60% ಅಂಕಗಳೊಂದಿಗೆ IIM ನಿಂದ PGDM ಪಡೆದಿರಬೇಕು.

ಪಬ್ಲಿಕ್ ರಿಲೇಶನ್ ಆಫೀಸರ್- ಕನಿಷ್ಠ 60% ಅಂಕಗಳೊಂದಿಗೆ ಸಾರ್ವಜನಿಕ ಸಂಪರ್ಕ/ಪತ್ರಿಕೋದ್ಯಮ/ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ/ ಕನಿಷ್ಠ 2 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ESIC IMO RECRUITMENT 2022: MBBS ಆದವರಿಗೆ ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗ

ಹುದ್ದೆಯ ವಿವರ ಮತ್ತು ವಯೋಮಿತಿ: ಒಟ್ಟು 15-HR ಎಕ್ಸಿಕ್ಯೂಟಿವ್​​ ಹುದ್ದೆಗಳು  ಮತ್ತು 6- ಪಿಆರ್‌ಓ ಹುದ್ದೆಗಳು ಖಾಲಿ ಇದೆ.  HR ಎಕ್ಸಿಕ್ಯೂಟಿವ್ ಮತ್ತು ಪಿಆರ್‌ಓ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಟ 30 ವರ್ಷ ವಯೋಮಿತಿಯೊಳಗಿರಬೇಕು. ಓಬಿಸಿ ಯ ಗರಿಷ್ಟ 33 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಗರಿಷ್ಟ 35 ವರ್ಷ ಮತ್ತು  PWDಗೆ ಗರಿಷ್ಟ 40 ವರ್ಷ ಹಾಗೂ  ಮಾಜಿ ಸೈನಿಕ- ಗರಿಷ್ಠ 35 ವರ್ಷ ಮೀರಿರಬಾರದು.

BSNL recruitment 2022: ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ONGC ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ  ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆ, ಯುಜಿಸಿ ಎನ್‌ಇಟಿ ಜೂನ್ 2020ರ ಅಂಕಗಳ ಆಧಾರದ ಮೇಲೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

Apple Delays Office Reopening: ಆಪಲ್ ಉದ್ಯೋಗಿಗಳಿಗೆ ಮುಂದುವರೆದ WFH

ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ (ONGC) ನೇಮಕಾತಿಯ ಹೆಚ್‌ಆರ್ ಎಕ್ಸಿಕ್ಯುಟಿವ್ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 300/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಪರಿಶಿಷ್ಟ ಜಾತಿ/ಪರಿ‍ಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ https://www.ongcindia.com/wps/wcm/connect/en/home ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿ.

UGC NET ಜೂನ್​ 2020ರ ಮಾನದಂಡ, ಶಾರ್ಟ್​ಲಿಸ್ಟಿಂಗ್​, ವೈಯಕ್ತಿಕ ಸಂದರ್ಶನದ ಮೂಲಕ HR ಎಕ್ಸಿಕ್ಯೂಟಿವ್​​, ಪಬ್ಲಿಕ್​​ ರಿಲೇಷನ್​ ಆಫೀಸರ್ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತರಾಖಂಡದ ಡೆಹ್ರಾಡೂನ್​​ನಲ್ಲಿ ಉದ್ಯೋಗ ನೀಡಲಾಗುತ್ತದೆ. 

click me!