NIOS ನೇಮಕಾತಿ: 115 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

By Suvarna NewsFirst Published Sep 17, 2021, 6:55 PM IST
Highlights

ಸ್ವಾಯತ್ತ ಸಂಸ್ಥೆಯಾಗಿರುವ ಹಾಗೂ ಕೇಂದ್ರ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್(ಎನ್ಐಒಎಸ್) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 115 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 10ರವರೆಗೂ ಕಾಲಾವಕಾಶವಿದೆ. ಉನ್ನತ ಹುದ್ದೆಗಳಿಗೆ ಆಯ್ಕೆಯಾದವರಿಗೆ ಆಕರ್ಷಕ ವೇತನವೂ ಇದೆ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್ (NIOS) ಸ್ಟೆನೋಗ್ರಾಫರ್ ಮತ್ತು ನಿರ್ದೇಶಕ ಸೇರಿದಂತೆ ಒಟ್ಟು 115 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆಯು ಈಗಾಗಲೇ ಶುರುವಾಗಿದ್ದು, ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 10ರವರೆಗೂ ಕಾಲಾವಕಾಶವಿದೆ.  ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಎನ್ ಐಒಎಸ್ ಅಧಿಕೃತ ವೆಬ್‌ಸೈಟ್ www.nios.ac.in ಗೆ ಭೇಟಿ ನೀಡಿ ಪರಿಶೀಲಿಸಬಹುದು. ಒಟ್ಟು 115 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.  ಅರ್ಜಿದಾರರು ಕೇವಲ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ನಿರ್ದೇಶಕ (ಮೌಲ್ಯಮಾಪನ), ಜಂಟಿ ನಿರ್ದೇಶಕ (ಮಾಧ್ಯಮ), ಉಪ ನಿರ್ದೇಶಕ (ಖಾತೆಗಳು), ಸಹಾಯಕ ನಿರ್ದೇಶಕರು (ನಿರ್ವಹಣೆ), ಖಾತೆ ಅಧಿಕಾರಿ, ಶೈಕ್ಷಣಿಕ ಅಧಿಕಾರಿ, ಸಂಶೋಧನೆ ಮತ್ತು ಮೌಲ್ಯಮಾಪನ ಅಧಿಕಾರಿ, ಸಹಾಯಕ ಎಂಜಿನಿಯರ್ (ಸಿವಿಲ್) ಮತ್ತು ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ ಸೇರಿದಂತೆ ಒಟ್ಟು 115 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. 

UPSC ನೇಮಕಾತಿ: ಕೇಂದ್ರ ಗೃಹ ಇಲಾಖೆಯ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನ

ಈ‌ ನೇಮಕಾತಿ ಡ್ರೈವ್‌ನಲ್ಲಿ  ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್, ನಿರ್ದೇಶಕ- 01 ಹುದ್ದೆ, ಜಂಟಿ ನಿರ್ದೇಶಕ-01, ಅಸಿಸ್ಟೆಂಟ್ ಡೈರೆಕ್ಟರ್-01, ಅಕೌಂಟ್ ಆಫೀಸರ್-01, ಅಕಾಡೆಮಿಕ್ ಆಫೀಸರ್-01, ರಿಸರ್ಚ್ ಆ್ಯಂಡ್ ಇವ್ಯಾಲ್ಯುವೇಷನ್ ಆಫೀಸರ್- 01, ಸೆಲೆಕ್ಷನ್ ಆಫೀಸರ್- 07, ಅಸಿಸ್ಟೆಂಟ್ ಇಂಜಿನಿಯರ್-01, ಹಿಂದಿ ಆಫೀಸರ್- 01, ಅಸಿಸ್ಟೆಂಟ್ ಆಡಿಟ್ ಆಫೀಸರ್- 01, ಇಡಿಪಿ ಸೂಪರ್ ವೈಸರ್- 37, ಜ್ಯೂನಿಯರ್ ಇಂಜಿನಿಯರ್- 01, ಅಸಿಸ್ಟೆಂಟ್- 04, ಸ್ಟೆನೋಗ್ರಾಫರ್- 03, ಜ್ಯೂನಿಯರ್ ಅಸಿಸ್ಟೆಂಟ್- 36 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

ಸೆಕ್ಷನ್ ಆಫೀಸರ್ ಮತ್ತು ಹಿಂದಿ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗಬೇಕು.ಇನ್ನು ಇಡಿಪಿ ಮೇಲ್ವಿಚಾರಕ, ಸಹಾಯಕ, ಸ್ಟೆನೋಗ್ರಾಫರ್ ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗೆ ಹಾಜರಾಗಬೇಕು. ಹಾಗೇ ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಾಗಿ ವಿದ್ಯುತ್ ನಿರ್ವಹಣೆ ಕೆಲಸಕ್ಕೆ ಸೀಮಿತವಾದ ಕೌಶಲ್ಯ ಪರೀಕ್ಷೆಯನ್ನು ಎದುರಿಸಬೇಕು.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್, ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು‌ ಪಾವತಿಸುತ್ತದೆ. ನಿರ್ದೇಶಕರ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 1,23,100 ರೂ.ನಿಂದ 2,15,900 ರೊಳಗೆ ಪಾವತಿಸಲಾಗುತ್ತದೆ. ಉಪ ನಿರ್ದೇಶಕರಾಗಿ ನೇಮಕಗೊಂಡವರು 78,800 ರೂ.- 2,09,200 ರೊಳಗೆ ವೇತನ ಪಡೆಯುತ್ತಾರೆ. ಸಹಾಯಕ ನಿರ್ದೇಶಕ, ಖಾತೆ ಅಧಿಕಾರಿ ಮತ್ತು ಶೈಕ್ಷಣಿಕ ಅಧಿಕಾರಿ ಹುದ್ದೆಗಳಿಗೆ 1,67,700 ರೂ.ನಿಂದ 2,08,700ರವರೆಗೆ ವೇತನ ಸಿಗಲಿದೆ. 

ಭಾರತದಲ್ಲಿ IBM ನೇಮಕಾತಿ: ಫ್ರೆಶರ್ಸ್‌ಗೆ ಅವಕಾಶ

ಹಿಂದಿ ಅಧಿಕಾರಿ ಮತ್ತು ಸಹಾಯಕ ಲೆಕ್ಕ ಪರಿಶೋಧನಾ ಅಧಿಕಾರಿಯಾಗಿ ನೇಮಕಗೊಂಡವರಿಗೆ 44,900 ರಿಂದ 1,42,400 ರೂ. ವೇತನ‌ ದೊರೆಯಲಿದೆ. ಇಡಿಪಿ ಮೇಲ್ವಿಚಾರಕ, ಕಿರಿಯ ಎಂಜಿನಿಯರ್ ಹುದ್ದೆಗಳಿಗೆ 35,400 ರಿಂದ 1,12,400 ರೂ.,  ಸಹಾಯಕ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗೆ 25,500 ರಿಂದ 81,100 ರೂ., ಕಿರಿಯ ಸಹಾಯಕರಿಗೆ  21900 - ರೂ 63,200 ರವರೆಗೂ ವೇತನ ಪಾವತಿಸಲಾಗುತ್ತದೆ.
 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅರ್ಜಿಯ ಶುಲ್ಕವನ್ನು ಪಾವತಿಸಬೇಕು. ಗ್ರೂಪ್ ಎ (ಒಬಿಸಿ) ಹುದ್ದೆಗಳಿಗೆ 750ರೂ. ಗ್ರೂಪ್ ಬಿ ಹಾಗೂ ಸಿ(ಒಬಿಸಿ) ಹುದ್ದೆಗಳಿಗೆ 500 ರೂ. ಶುಲ್ಕ, ಗ್ರೂಪ್ ಎ ಹಾಗೂ ಬಿ(ಎಸ್ ಸಿ/ಎಸ್ ಟಿ, ಇಡಬ್ಲೂಎಸ್)250 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಜೊತೆಗೆ ಪ್ರತಿ ಆನ್‌ಲೈನ್ ವಹಿವಾಟಿಗೆ ರೂ. 50 ಅನ್ನು ಆನ್‌ಲೈನ್ ಪ್ರಕ್ರಿಯೆ ಶುಲ್ಕವಾಗಿ (ಅರ್ಜಿ ಶುಲ್ಕವನ್ನು ಹೊರತುಪಡಿಸಿ) ಪಾವತಿಸಬೇಕು. ನಿಗದಿತ ಶುಲ್ಕ ಪಾವತಿಸದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

HALನಲ್ಲಿ ಅಪ್ರೆಂಟಿಶಿಪ್: ಡಿಪ್ಲೋಮಾ, ಪದವೀಧರರಿಗೆ ಅವಕಾಶ

ಅಭ್ಯರ್ಥಿಗಳು ಒಂದು ಹುದ್ದೆಗೆ ಮಾತ್ರ ಒಂದೇ ಅರ್ಜಿಯನ್ನು ಸಲ್ಲಿಸಬೇಕು. ಯಾವುದೇ ಹುದ್ದೆಗೆ ಬಹು ಅರ್ಜಿಗಳು / ನೋಂದಣಿಗಳಿದ್ದಲ್ಲಿ, ಕೊನೆಯದಾಗಿ ನೋಂದಾಯಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ NIOS ಒಂದೇ ದಿನದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಹುದ್ದೆಗಳ ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ ನಡೆಸುತ್ತದೆ. ಆಗ ಅಭ್ಯರ್ಥಿಗಳು ಯಾವುದಾದರೂ ಒಂದು ಹುದ್ದೆಯ ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆಯನ್ನು ಮಾತ್ರ ತೆಗೆದುಕೊಳ್ಳಬೇಕಾಗುತ್ತದೆ.

click me!