NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಎನ್‌ಟಿಪಿಸಿ ನೇಮಕಾತಿ

By Suvarna News  |  First Published Mar 16, 2022, 12:37 PM IST

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 21 ಆಗಿದೆ. 


ಬೆಂಗಳೂರು(ಮಾ.16):  ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ (National Thermal Power Corporation) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ವಿವಿಧ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳು ಖಾಲಿ ಇದ್ದು  ಒಟ್ಟು 60 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 21 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು NTPCಯ ಅಧಿಕೃತ ವೆಬ್‌ತಾಣ https://www.ntpc.co.in/ ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಒಟ್ಟು 60 ಹುದ್ದೆಗಳ ಮಾಹಿತಿ ಇಂತಿದೆ
ಎಕ್ಸಿಕ್ಯೂಟಿವ್ ಟ್ರೈನಿ-ಹಣಕಾಸು (CA/CMA): 20 ಹುದ್ದೆಗಳು
ಎಕ್ಸಿಕ್ಯೂಟಿವ್ ಟ್ರೈನಿ-ಹಣಕಾಸು (MBA):10 ಹುದ್ದೆಗಳು
ಎಕ್ಸಿಕ್ಯೂಟಿವ್ ಟ್ರೈ-ಹೆಚ್‌ಆರ್ : 30 ಹುದ್ದೆಗಳು

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ CA/CMA/MBA ಮಾಡಿರಬೇಕು.

ESCI RECRUITMENT 2022: ರಾಜ್ಯ ನೌಕರರ ವಿಮಾ ನಿಗಮ ನೇಮಕಾತಿ

ವಯೋಮಿತಿ:  ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾರ್ಚ್ 21 , 2022ಕ್ಕೆ ಸಂಬಂಧಿಸಿದಂತೆ  ಗರಿಷ್ಠ 29 ವರ್ಷಗಳಾಗಿರಬೇಕು.

ವೇತನ ವಿವರ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ  ₹40,000 ದಿಂದ ₹1,40,000 ವೇತನ ದೊರೆಯಲಿದೆ.

CIIL Recruitment 2022: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ 

ಉಪನ್ಯಾಸಕ ಸೇರಿ ವಿವಿಧ ಹುದ್ದೆಗಳಿಗೆ ಯುಪಿಎಸ್‌ಸಿ ನೇಮಕಾತಿ: ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ  ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಹಿರಿಯ ಉಪನ್ಯಾಸಕ, ಟೆಕ್ನಿಕಲ್ ಆಫೀಸರ್ ಸೇರಿ ಒಟ್ಟು 45 ವಿವಿಧ ಹುದ್ದೆಗಳು ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 31. ಆಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ upsc.gov.in ಗೆ ಭೇಟಿ ನೀಡಲು ಕೋರಲಾಗಿದೆ. https://www.upsconline.nic.in/  ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. 

ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಸಹಾಯಕ ಸಂಪಾದಕ (ತೆಲುಗು):   ಲೈಬ್ರೆರಿಯನ್ ಪದವಿ/ಡಿಪ್ಲೋಮ ಜೊತೆಗೆ 5 ವರ್ಷಗಳ ಅನುಭವ ಜೊತೆಗೆ ತೆಲುಗು ಭಾಷೆಯಲ್ಲಿ ಪ್ರಾವಿಣ್ಯತೆ ಇರಬೇಕು
ಫೋಟೋಗ್ರಾಫಿಕ್ ಅಧಿಕಾರಿ:  ಪದವಿ /ಛಾಯಾಗ್ರಹಣದ ವಿವಿಧ ಶಾಖೆಗಳಲ್ಲಿ ಎರಡು ವರ್ಷಗಳ ಅನುಭವ/ಪತ್ರಿಕಾ ಛಾಯಾಗ್ರಹಣದಲ್ಲಿ ಅನುಭವ. 
ವಿಜ್ಞಾನಿ "ಬಿ" (ಟಾಕ್ಸಿಕಾಲಜಿ):  ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ಬಯೋಕೆಮಿಸ್ಟ್ರಿ/ಫಾರ್ಮಕಾಲಜಿ/ಫಾರ್ಮಸಿ/ಫೊರೆನ್ಸಿಕ್ ಸೈನ್ಸ್ .
ತಾಂತ್ರಿಕ ಅಧಿಕಾರಿ: ಸಿವಿಲ್ ಇಂಜಿನಿಯರಿಂಗ್ /ಪರಿಸರ ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ  
ಡ್ರಿಲ್ಲರ್-ಇನ್-ಚಾರ್ಜ್:  ಡ್ರಿಲ್ಲಿಂಗ್/ಮೈನಿಂಗ್/ಮೆಕ್ಯಾನಿಕಲ್/ಸಿವಿಲ್/ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಜೊತೆಗೆ ಅನುಭವ
ಗಣಿ ಸುರಕ್ಷತೆಯ ಉಪ ನಿರ್ದೇಶಕರು (ಮೆಕ್ಯಾನಿಕಲ್):  ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಇಂಜಿನಿಯರ್‌ಗಳ ಸಂಸ್ಥೆಯಿಂದ  ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಾಖೆಯಲ್ಲಿ ಅಸೋಸಿಯೇಟ್ ಸದಸ್ಯತ್ವ ಪರೀಕ್ಷೆಯ ವಿಭಾಗ A ಮತ್ತು ವಿಭಾಗ B ಯಲ್ಲಿ ತೇರ್ಗಡೆ ಮತ್ತು 10 ವರ್ಷಗಳ ಅನುಭವ.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್):  ದೂರಸಂಪರ್ಕ/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ 
ಸಿಸ್ಟಮ್ ವಿಶ್ಲೇಷಕ:  ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ M.Sc. ಕಂಪ್ಯೂಟರ್ ಸೈನ್ಸ್ ಅಥವಾ ಎಂ.ಎಸ್ಸಿ. ಅಥವಾ ಕಂಪ್ಯೂಟರ್ ಸೈನ್ಸ್ 
ಹಿರಿಯ ಉಪನ್ಯಾಸಕರು (ಜನರಲ್ ಮೆಡಿಸಿನ್, ಸಾಮಾನ್ಯ ಶಸ್ತ್ರಚಿಕಿತ್ಸೆ ,ಕ್ಷಯರೋಗ ಮತ್ತು ಉಸಿರಾಟದ ಕಾಯಿಲೆಗಳು):  ಭಾರತೀಯ ವೈದ್ಯಕೀಯ ನೋಂದಣಿಯಲ್ಲಿ ನೋಂದಾಯಿಸಿರಬೇಕು. M.D.(ಮೆಡಿಸಿನ್ ಅಥವಾ ಕ್ಷಯರೋಗ)/ M.D.(ಜನರಲ್ ಮೆಡಿಸಿನ್ ಅಥವಾ T.B. ಮತ್ತು ಉಸಿರಾಟದ ಕಾಯಿಲೆಗಳು) ಅಥವಾ M.S.(ಶಸ್ತ್ರಚಿಕಿತ್ಸೆ)/ M.S.(ಜನರಲ್ ಸರ್ಜರಿ) ಆಗಿರಬೇಕು.

click me!