CIIL Recruitment 2022: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ

By Suvarna News  |  First Published Mar 15, 2022, 4:15 PM IST

ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ  ಖಾಲಿ ಇರುವ  ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ.  ಅರ್ಜಿ ಸಲ್ಲಿಸಲು ಕೊನೆಯ ಮಾರ್ಚ್ 29 ಆಗಿದೆ.


ಬೆಂಗಳೂರು(ಮಾ.15): ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ (Central Institute of Indian Languages) ಖಾಲಿ ಇರುವ  ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪ್ರಾಜೆಕ್ಟ್ ಡೈರೆಕ್ಟರ್, ಅಸೋಸಿಯೇಟ್ ಫೆಲೋ, ಆಫೀಸ್ ಸೂಪರಿಂಟೆಂಡೆಂಟ್ ಸೇರಿ ಒಟ್ಟು 38 ವಿವಿಧ ಹುದ್ದೆಗಳು ಖಾಲಿ ಇದ್ದು,  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CIIL ನ ಅಧಿಕೃತ ವೆಬ್‌ಸೈಟ್ ciil.org ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ಮಾರ್ಚ್ 29 ಆಗಿದೆ.

ಒಟ್ಟು 38 ಹುದ್ದೆಗಳ ವಿವರ ಇಲ್ಲಿದೆ 
ಪ್ರಾಜೆಕ್ಟ್ ಡೈರೆಕ್ಟರ್ (Project Director) – 1 ಹುದ್ದೆ
ಸೀನಿಯರ್ ಫೆಲೋ (Senior Fellow) – 10 ಹುದ್ದೆಗಳು
ಅಸೋಸಿಯೇಟ್ ಫೆಲೋ (Associate Fellow) – 20 ಹುದ್ದೆಗಳು
ಆಫೀಸ್ ಸೂಪರಿಂಟೆಂಡೆಂಟ್ (Office Superintendent) – 1 ಹುದ್ದೆ
ಜೂನಿಯರ್ ಅಕೌಂಟ್ ಆಫೀಸರ್ (Junior Accounts Officer) – 1 ಹುದ್ದೆ
ಡಿವಿಷನ್ ಕ್ಲರ್ಕ್ (Upper Division Clerk) – 2 ಹುದ್ದೆ
ಲೋವರ್ ಡಿವಿಷನ್ ಕ್ಲರ್ಕ್ (Lower Division Clerk) – 3 ಹುದ್ದೆ

Tap to resize

Latest Videos

undefined

UPSC Recruitment 2022: ಉಪನ್ಯಾಸಕ ಸೇರಿ ವಿವಿಧ ಹುದ್ದೆಗಳಿಗೆ ಯುಪಿಎಸ್‌ಸಿ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಪ್ರಾಜೆಕ್ಟ್ ಡೈರೆಕ್ಟರ್ – ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡಿರಬೇಕು.
ಸೀನಿಯರ್ ಫೆಲೋ –  ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡಿರಬೇಕು.
ಅಸೋಸಿಯೇಟ್ ಫೆಲೋ – ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡಿರಬೇಕು.
ಆಫೀಸ್ ಸೂಪರಿಂಟೆಂಡೆಂಟ್ – ಹುದ್ದೆಗಳಿಗೆ ಪದವಿ ಮಾಡಿರಬೇಕು
ಜೂನಿಯರ್ ಅಕೌಂಟ್ ಆಫೀಸರ್ – ಹುದ್ದೆಗಳಿಗೆ ಪದವಿ ಮಾಡಿರಬೇಕು
ಅಪ್ಪರ್ ಡಿವಿಷನ್ ಕ್ಲರ್ಕ್ – ಹುದ್ದೆಗಳಿಗೆ  ಪದವಿ ಮಾಡಿರಬೇಕು
ಲೋವರ್ ಡಿವಿಷನ್ ಕ್ಲರ್ಕ್ – ಹುದ್ದೆಗಳಿಗೆ ಪದವಿ ಮಾಡಿರಬೇಕು

UIDAI RECRUITMENT 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ

ವಯೋಮಿತಿ: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗನುಸಾರವಾಗಿ  ವಯೋಮಿತಿ ನಿಗದಿಯಾಗಿದೆ
ಪ್ರಾಜೆಕ್ಟ್ ಡೈರೆಕ್ಟರ್ – ಗರಿಷ್ಠ 65 ವರ್ಷ
ಸೀನಿಯರ್ ಫೆಲೋ – ಗರಿಷ್ಠ 60 ವರ್ಷ
ಅಸೋಸಿಯೇಟ್ ಫೆಲೋ – ಗರಿಷ್ಠ 55 ವರ್ಷ
ಆಫೀಸ್ ಸೂಪರಿಂಟೆಂಡೆಂಟ್ – ಗರಿಷ್ಠ 40 ವರ್ಷ
ಜೂನಿಯರ್ ಅಕೌಂಟ್ ಆಫೀಸರ್ –  ಗರಿಷ್ಠ 40 ವರ್ಷ
ಅಪ್ಪರ್ ಡಿವಿಷನ್ ಕ್ಲರ್ಕ್ – ಗರಿಷ್ಠ 45 ವರ್ಷ
ಲೋವರ್ ಡಿವಿಷನ್ ಕ್ಲರ್ಕ್ – ಗರಿಷ್ಠ 40 ವರ್ಷ

ವೇತನ ವಿವರ: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ  ವೇತನ ದೊರೆಯಲಿದೆ.

ಪ್ರಾಜೆಕ್ಟ್ ಡೈರೆಕ್ಟರ್ – ₹70,000
ಸೀನಿಯರ್ ಫೆಲೋ – ₹41,000
ಅಸೋಸಿಯೇಟ್ ಫೆಲೋ – ₹37,000
ಆಫೀಸ್ ಸೂಪರಿಂಟೆಂಡೆಂಟ್ – ₹37,800
ಜೂನಿಯರ್ ಅಕೌಂಟ್ಸ್ ಆಫೀಸರ್ – ₹37,800
ಅಪ್ಪರ್‌ ಡಿವಿಷನ್ ಕ್ಲರ್ಕ್ – ₹ 27,200
ಲೋವರ್ ಡಿವಿಷನ್ ಕ್ಲರ್ಕ್- ₹21,200

click me!