NPCIL Recruitment 2022: ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನರ್ಸ್ ಸೇರಿ ವಿವಿಧ 42 ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Feb 11, 2022, 10:02 PM IST

ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ ತನ್ನ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನರ್ಸ್ ಸೇರಿ ವಿವಿಧ 42 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್​ಲೈನ್  ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನವಾಗಿದೆ.


ಬೆಂಗಳೂರು(ಫೆ.11): ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ (Nuclear Power Corporation of India - NPCIL)ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ನರ್ಸ್​, ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಸೇರಿ ವಿವಿಧ 42 ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ npcilcareers.co.in ಗೆ  ಭೇಟಿ ನೀಡಲು ಕೋರಲಾಗಿದೆ.

ಒಟ್ಟು 42 ಹುದ್ದೆಗಳ ಮಾಹಿತಿ:
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್​ವೈಸರ್)- 03
ನರ್ಸ್​​ A-02
ಅಸಿಸ್ಟೆಂಟ್ ಗ್ರೇಡ್ 1(HR)-13
ಅಸಿಸ್ಟೆಂಟ್ ಗ್ರೇಡ್ 1(F&A)-11
ಅಸಿಸ್ಟೆಂಟ್ ಗ್ರೇಡ್ 1(C &MM)-04
ಸ್ಟೆನೋಗ್ರಾಫರ್ ಗ್ರೇಡ್ 1- 09

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಹೊಂದಿರಬೇಕು.
-ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್) ಅಥವಾ B.Sc + ಒಂದು ವರ್ಷದ ಡಿಪ್ಲೊಮಾ/ಇಂಡಸ್ಟ್ರಿಯಲ್ ಸುರಕ್ಷತೆಯಲ್ಲಿ ಪ್ರಮಾಣಪತ್ರ ಪಡೆದಿರಬೇಕು
-ನರ್ಸ್​​  ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ಉತ್ತೀರ್ಣರಾಗಿರಬೇಕು, ಜತೆಗೆ ನರ್ಸಿಂಗ್​​ನಲ್ಲಿ 3 ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
-ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. 1 ನಿಮಿಷದಲ್ಲಿ 30 ಇಂಗ್ಲಿಷ್ ಪದಗಳನ್ನು ಟೈಪ್​ ಮಾಡುವ ಸ್ಪೀಡ್ ಇರಬೇಕು.

KSISF RECRUITMENT 2022: ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ಪೊಲೀಸ್

ವಯೋಮಿತಿ: ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ. ಅದರ ವಿವರ ಈ ಕೆಳಗಿನಂತಿದೆ.
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್​ವೈಸರ್)- 18-35 ವರ್ಷ
ನರ್ಸ್​​  : 18-30 ವರ್ಷ
ಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷ
ಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷ
ಅಸಿಸ್ಟೆಂಟ್ ಗ್ರೇಡ್ 1: 21ರಿಂದ 28 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ 1: 21ರಿಂದ 28 ವರ್ಷ

ಆಯ್ಕೆ ಪ್ರಕ್ರಿಯೆ: ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

India Unemployed people: 2020ರ ಲಾಕ್‌ಡೌನ್ ಮೊದಲ 3 ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರು 23 ಲಕ್ಷ ಮಂದಿ!

ವೇತನ ವಿವರ: ಭಾರತ ಅಣುಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹುದ್ದೆಗೆ ಅನುಸಾರವಾಗಿ ವೇತನ ನಿಗದಿಯಾಗಿದ್ದು, ವಿವರಣೆ ಈ ಕೆಳಗಿನಂತಿದೆ.
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್​ವೈಸರ್)-ಮಾಸಿಕ ₹ 44,900
ನರ್ಸ್​​ A-ಮಾಸಿಕ ₹ 44,900
ಅಸಿಸ್ಟೆಂಟ್ ಗ್ರೇಡ್ 1(HR)- ಮಾಸಿಕ ₹ 25,500
ಅಸಿಸ್ಟೆಂಟ್ ಗ್ರೇಡ್ 1(F&A)-ಮಾಸಿಕ ₹ 25,500
ಅಸಿಸ್ಟೆಂಟ್ ಗ್ರೇಡ್ 1(C &MM)-ಮಾಸಿಕ ₹ 25,500
ಸ್ಟೆನೋಗ್ರಾಫರ್ ಗ್ರೇಡ್ 1- ಮಾಸಿಕ ₹ 25,500

ಉದ್ಯೋಗ ಸ್ಥಳ: ಭಾರತೀಯ ಅಣುವಿದ್ಯುತ್ ( Atomic Power) ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾರವಾರ ತಾಲೂಕಿನ ಕೈಗಾ ಅಣು ಸ್ಥಾವರದಲ್ಲಿ (Kaiga Atomic Power Station) ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

click me!