East Coast Railway Apprentice Recruitment 2022: ಬರೋಬ್ಬರಿ 756 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna NewsFirst Published Feb 11, 2022, 3:09 PM IST
Highlights

ಪೂರ್ವ ಕರಾವಳಿ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು  756  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ಆನ್‌ಲೈನ್‌ ಮೂಲಕ ಮಾರ್ಚ್ 7, 2022ರೊಳಗೆ ಅರ್ಜಿ ಆಹ್ವಾನ

ಬೆಂಗಳೂರು(ಫೆ.11): ಪೂರ್ವ ಕರಾವಳಿ ರೈಲ್ವೆ (East Coast Railway), ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು  756  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ಆನ್‌ಲೈನ್‌ ಮೂಲಕ ಮಾರ್ಚ್ 7, 2022ರೊಳಗೆ ಭುವನೇಶ್ವರ್‌ ರೈಲ್ವೆ ನೇಮಕಾತಿ ಕೋಶ (Railway Recruitment Cell -RRC)ದ  ಅಧಿಕೃತ ವೆಬ್‌ ತಾಣ  rrcbbs.org.in ನಲ್ಲಿ  ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://eastcoastrail.indianrailways.gov.in/ಗೆ  ಕೂಡ ಭೇಟಿ ನೀಡಬಹುದು.

ಒಟ್ಟು 756 ಹುದ್ದೆಗಳ ವಿಂಗಡಣೆ ಇಂತಿದೆ.
ಕ್ಯಾರೇಜ್ ರಿಪೇರಿ ಕಾರ್ಯಾಗಾರ, ಮಂಚೇಶ್ವರ, ಭುವನೇಶ್ವರ - 190 ಹುದ್ದೆಗಳು
ಖುರ್ದಾ ರಸ್ತೆ ವಿಭಾಗ - 237 ಹುದ್ದೆಗಳು
ವಾಲ್ಟೇರ್ ವಿಭಾಗ - 263 ಹುದ್ದೆಗಳು
ಸಂಬಲ್ಪುರ ವಿಭಾಗ - 66 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಪೂರ್ವ ಕರಾವಳಿ ರೈಲ್ವೆಯಲ್ಲಿನ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಯಿಂದ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಶೇಕಡ.50 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಾಸ್‌ ಮಾಡಿರಬೇಕು, ಜತೆಗೆ NCVT/SCVT ನೀಡಿದ ಅಧಿಸೂಚಿತ ವ್ಯಾಪಾರದಲ್ಲಿ (notified trade) ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಸಹ ಹೊಂದಿರಬೇಕು. 

HAL Recruitment 2022: ಮ್ಯಾನೇಜ್​ಮೆಂಟ್ ಟ್ರೇನಿ ಸೇರಿ 85 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಯೋಮಿತಿ: ಪೂರ್ವ ಕರಾವಳಿ ರೈಲ್ವೆಯಲ್ಲಿನ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು  ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು.

ಅರ್ಜಿ ಶುಲ್ಕ: ಪೂರ್ವ ಕರಾವಳಿ ರೈಲ್ವೆಯಲ್ಲಿನ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ರೂ.100 ಪಾವತಿಸಬೇಕು. ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಪೂರ್ವ ಕರಾವಳಿ ರೈಲ್ವೆಯಲ್ಲಿನ  ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಅಂಕಗಳ ಆಧಾರದಲ್ಲಿ  ಆಯ್ಕೆ ಮಾಡಲಾಗುತ್ತದೆ.

ಮಾಸಿಕ ವೇತನ: ಪೂರ್ವ ಕರಾವಳಿ ರೈಲ್ವೆಯಲ್ಲಿನ  ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ 8000  ದಿಂದ 10000 ರೂ ವೇತನ ದೊರೆಯಲಿದೆ.

CENTRAL BANK OF INDIA RECRUITMENT 2022: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

2422 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ರೈಲ್ವೆ: ಕೇಂದ್ರ ರೈಲ್ವೆಯ (Central Railway), ರೈಲ್ವೆ ನೇಮಕಾತಿ ಕೋಶ (Railway Recruitment Cell -RRC), ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 2422 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಫೆಬ್ರವರಿ 16, 2022ರ ಸಂಜೆ 5 ಗಂಟೆಯೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://rrccr.com/ ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಟ್ಟು 2422 ಹುದ್ದೆಗಳ ವಿಂಗಡಣೆ ಇಂತಿದೆ.
ಮುಂಬೈ -1659
ಭುಸ್ವಾಲ್ ಕ್ಲಸ್ಟರ್ -418
ಪುಣೆ ಕ್ಲಸ್ಟರ್ -152
ನಾಗ್ಪುರ್ ಕ್ಲಸ್ಟರ್ -114
ಸೋಲಾಪುರ್ ಕ್ಲಸ್ಟರ್ -79

ಶೈಕ್ಷಣಿಕ ವಿದ್ಯಾರ್ಹತೆ: ರೈಲ್ವೆ ನೇಮಕಾತಿ ಕೋಶದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಯಿಂದ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಶೇಕಡ.50 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಾಸ್‌ ಮಾಡಿರಬೇಕು, ಜತೆಗೆ ಸಂಬಂಧಿತ ವಿಭಾಗದಲ್ಲಿ ಐಟಿಐ ಪಾಸ್‌ ಮಾಡಿರಬೇಕು.

ವಯೋಮಿತಿ: ರೈಲ್ವೆ ನೇಮಕಾತಿ ಕೋಶದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು  ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು.

ಅರ್ಜಿ ಶುಲ್ಕ: ರೈಲ್ವೆ ನೇಮಕಾತಿ ಕೋಶದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ರೂ.100 ಪಾವತಿಸಬೇಕು. ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ರೈಲ್ವೆ ನೇಮಕಾತಿ ಕೋಶದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ  ಆಯ್ಕೆ ಮಾಡಲಾಗುತ್ತದೆ.

ಮಾಸಿಕ ವೇತನ: ರೈಲ್ವೆ ನೇಮಕಾತಿ ಕೋಶದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ 8000  ದಿಂದ 10000 ರೂ ವೇತನ ದೊರೆಯಲಿದೆ.

click me!