1664 ಅಪ್ರೆಂಟಿಸ್ ಹುದ್ದೆಗಳ ನೇಮಕ್ಕೆ ಉತ್ತರ ಮಧ್ಯೆ ರೇಲ್ವೆ ಅರ್ಜಿ ಆಹ್ವಾನ

By Suvarna News  |  First Published Nov 4, 2021, 4:36 PM IST

ಉತ್ತರ ಮಧ್ಯೆ ರೇಲ್ವೆ (North Central Railways) ವಲಯವು ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 1 ದಿನವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 


ಎಸ್ಎಸ್ಎಲ್ಸಿ (SSLC), ಐಟಿಐ (ITI) ಮುಗಿಸಿ ಕೆಲಸಕ್ಕಾಗಿ ಹುಡುಕಾಡ್ತಿದ್ದೀರಾ? ಅದರಲ್ಲೂ ಸರ್ಕಾರಿ ವಲಯಗಳಲ್ಲಿ ಸೇವೆಗೆ ಸೇರಲು ಕಾತುರರಾಗಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲೊಂದು ಸುವರ್ಣಾವಕಾಶವಿದೆ. ರೇಲ್ವೆ (Railway) ಯಲ್ಲಿ ಕೆಲಸಕ್ಕೆ ಸೇರುವ ಬಂಪರ್ ಅವಕಾಶವೊಂದು ಒಲಿದು ಬಂದಿದೆ. ಉತ್ತರ ಮಧ್ಯ ರೇಲ್ವೆ (North Central Railways) ವಲಯವು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸುಮಾರು 1664 ಅಪ್ರೆಂಟಿಸ್ (Apprentice) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ (Recruitment Process) ಯನ್ನು ಪ್ರಾರಂಭಿಸಿದ್ದು, ರೇಲ್ವೆ ಉದ್ಯೋಗಕ್ಕೆ ಸೇರುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ (Online) ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ರೇಲ್ವೆ ವಲಯದ ಅಧಿಕೃತ ವೆಬ್‌ಸೈಟ್ - rrcprjapprentices.in ನಲ್ಲಿ ಬಿಡುಗಡೆಯಾಗಿರುವ ಅಧಿಸೂಚನೆಯನ್ನು ಪರಿಶೀಲಿಸಬಹುದು. 

ಉತ್ತರ ಮಧ್ಯ ರೇಲ್ವೆಯು ತನ್ನ ವ್ಯಾಪ್ತಿಯಲ್ಲಿರುವ ವಿವಿಧ ವಿಭಾಗಗಳು, ಕಾರ್ಯಾಗಾರಗಳು ಹಾಗೂ ನಿಗದಿಪಡಿಸಿದ ಟ್ರೇಡ್‌ಗಳಲ್ಲಿ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳನ್ನ ನೇಮಕಾತಿ ಮಾಡಿಕೊಳ್ಳಲಿದೆ.   1664 ಮಂದಿ ಅಪ್ರೆಂಟಿಸ್‌ಗಳಾಗಿ ರೇಲ್ವೆ ವಲಯಕ್ಕೆ ಸೇರಲು ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಅಧಿಕೃತ ವೆಬ್‌ಸೈಟ್ rrcpryj.org ಮೂಲಕ  ಅರ್ಜಿ ನಮೂನೆಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 1 ಕೊನೆಯ ದಿನಾಂಕವಾಗಿದೆ. 

Tap to resize

Latest Videos

undefined

ಅಂದ ಹಾಗೇ ಉತ್ತರ ಮಧ್ಯ ರೇಲ್ವೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಡಿಸೆಂಬರ್ 1 ಕ್ಕೆ ಅನ್ವಯಿಸುವಂತೆ 15 ರಿಂದ 24 ವರ್ಷದೊಳಗಿನವರಾಗಿರಬೇಕು. ಈ ವಯೋಮಿತಿ ಮೀರಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.



ಈ ನೇಮಕಾತಿ ಪ್ರಕ್ರಿಯೆ ಮೂಲಕ ವಿವಿಧ ಹುದ್ದೆಗಳು, ವೈರ್‌ಮ್ಯಾನ್, ಎಲೆಕ್ಟ್ರಿಷಿಯನ್, ಮೆಷಿನಿಸ್ಟ್, ಫಿಟ್ಟರ್, ಸ್ಟೆನೋಗ್ರಾಫರ್, ಹೆಲ್ತ್ ಸ್ಯಾನಿಟರಿ ಇನ್ಸ್‌ಪೆಕ್ಟರ್ ಮತ್ತಿತರ ಹಲವು ಅಪ್ರೆಂಟಿಸ್ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುತ್ತದೆ.  ನಿಮ್ಮ ಆಯ್ಕೆಯ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು rrcprjapprentices.in ಗೆ ಭೇಟಿ ನೀಡಿ  ವಿವರವಾದ ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸಿ.  

ನೌಕಾಪಡೆಯಲ್ಲಿ ನಾವಿಕರಾಗಬೇಕೆ? 300 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಉತ್ತರ ಮಧ್ಯ ರೇಲ್ವೆ ನೇಮಕಾತಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು   10 ನೇ ತರಗತಿ ಅಥವಾ ಯಾವುದೇ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಆಯಾ ವ್ಯಾಪಾರಕ್ಕಾಗಿ ಐಟಿಐ ಅಥವಾ ರಾಷ್ಟ್ರೀಯ ಪ್ರಮಾಣಪತ್ರವನ್ನು ಹೊಂದಿರಬೇಕು. ಪ್ರಮಾಣಪತ್ರವು NCVT ಅಥವಾ SCVT ಯೊಂದಿಗೆ ಸಂಯೋಜಿತವಾಗಿರಬೇಕು.

ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಗಮನಿಸಬೇಕು. ಮೆರಿಟ್ ಪಟ್ಟಿಯು 10 ನೇ ತರಗತಿಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಸರಾಸರಿ ಮತ್ತು ಐಟಿಐ ಪರೀಕ್ಷೆಯಲ್ಲಿ ಅವರು ಗಳಿಸಿದ ಅಂಕಗಳನ್ನು ಒಳಗೊಂಡಿರುತ್ತದೆ. 

ಅಭ್ಯರ್ಥಿಗಳು ಉತ್ತರ ರೇಲ್ವೆಯ ಅಧಿಕೃತ ವೆಬ್ಸೈಟ್ rrcprjapprentices.in ಗೆ ಮೊದಲು ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಹೆಸರು ನೋಂದಾಯಿಸಲು ಅಗತ್ಯವಿರುವ  ಹೆಸರು, ಹುಟ್ಟಿದ ದಿನಾಂಕ, ಫೋನ್ ಸಂಖ್ಯೆ, ಅಪ್ರೆಂಟಿಸ್‌ನ ನೋಂದಣಿ ಸಂಖ್ಯೆ ಮತ್ತು ITI ಸರ್ಟಿಫಿಕೇಟ್ನ ವಿವರಗಳನ್ನ ನಮೂದಿಸಬೇಕು. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. 

4135 ಪ್ರೊಬೇಷನರಿ ಆಫೀಸರ್, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ IBPS

ಇನ್ನು 100 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆದ್ರೆ ಈ ಶುಲ್ಕದ ಹಣವನ್ನು ಯಾವುದೇ ಕಾರಣಕ್ಕೂ ಮರುಪಾವತಿಸುವುದಿಲ್ಲ. ಮಹಿಳೆಯರು, SC, ST, PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.  ಉತ್ತರ ಮಧ್ಯೆ ರೇಲ್ವೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಇದು ಸಕಾಲ. ಅರ್ಹರು ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 1 ಕೊನೆಯ ದಿನವಾಗಿದೆ.

click me!