ನೌಕಾಪಡೆಯಲ್ಲಿ ನಾವಿಕರಾಗಬೇಕೆ? 300 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

By Suvarna News  |  First Published Oct 28, 2021, 2:03 PM IST

ಭಾರತೀಯ ನೌಕಾಪಡೆ (Indian Navy)ಯು ಖಾಲಿ ಇರುವ 300ಕ್ಕೂ ಅಧಿಕ ನಾವಿಕರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 2 ಕೊನೆಯ ದಿನ. ಅರ್ಹ ಹಾಗೂ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.


ಭಾರತೀಯ ನೌಕಾಪಡೆ (Indian Navy) ಯು ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆಯನ್ನು (Recruitment Process) ಆರಂಭಿಸಲಾಗಿದೆ. ಈ ನೇಮಕಾತಿ ಮೂಲಕ ಒಟ್ಟು 300ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅಧಿಸೂಚನೆಯನ್ನು ನೌಕಾಪಡೆ ಹೊರಡಿಸಿದೆ. ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 2021ರ ನವೆಂಬರ್ 2 ಕೊನೆಯ ದಿನವಾಗಿರುತ್ತದೆ. 

4135 ಪ್ರೊಬೇಷನರಿ ಆಫೀಸರ್, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ IBPS

Latest Videos

undefined

ಭಾರತೀಯ ನೌಕಾಪಡೆ (Indian Navy)ಯ ಮೆಟ್ರಿಕ್ ನೇಮಕಾತಿ (MR) ಅಡಿಯಲ್ಲಿ 300 ಕ್ಕೂ ಹೆಚ್ಚು ನಾವಿಕ (Sailor) ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ ಸೈಟ್ joinindiannavy.gov.in ಮೂಲಕ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೂ ಇದೇ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. 

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ (Education ministry) ದಿಂದ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಗಳಿಂದ 10 ನೇ ತರಗತಿಯನ್ನು ತೇರ್ಗಡೆಯಾದ ಅಭ್ಯರ್ಥಿಗಳು ನೌಕಾಪಡೆ (Indian Navy) ಯ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ನಾವಿಕ (MR) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ joinindiannavy.gov.inಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. 

ಜೊತೆಗೆ  ಹುದ್ದೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ. ಅಭ್ಯರ್ಥಿಗಳಿಗೆ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 2002ರ  ಏಪ್ರಿಲ್ 1 ಮತ್ತು 2005 ಸೆಪ್ಟೆಂಬರ್ 30ರೊಳಗೆ ಜನಿಸಿದವರಾಗಿರಬೇಕು. ಈ ನಿಬಂಧನೆಯನ್ನು ಮೀರಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

UPSC ನೇಮಕಾತಿ: ಕೇಂದ್ರದಲ್ಲಿ ಖಾಲಿ ಇರುವ 56 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪರೀಕ್ಷೆಗಳ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ (Written Test) ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ (Physical Fitness Test) ಎರಡು ಪರೀಕ್ಷೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮಾಡಲಾಗುತ್ತದೆ. ಇದು ರಾಜ್ಯಾದ್ಯಂತ ಆಯ್ಕೆ ಪ್ರಕ್ರಿಯೆಯಾಗಲಿದ್ದು, ಸುಮಾರು 1500 ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಕರೆಯಲಾಗುವುದು. ರಾಜ್ಯಕ್ಕೆ ಅನುಗುಣವಾಗಿ ಕಟ್ ಆಫ್ ಅಂಕ (Cut Off Marks) ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಅಧಿಕೃತ ಅಧಿಸೂಚನೆಯ ಪ್ರಕಾರ ಸಂಬಳವನ್ನು ನೀಡಲಾಗುತ್ತದೆ. ಆರಂಭಿಕ ತರಬೇತಿ ಅವಧಿಯಲ್ಲಿ ತಿಂಗಳಿಗೆ 14,600 ರೂ. ಹಾಗೂ ಆರಂಭಿಕ ತರಬೇತಿ ಅವಧಿಯ ನಂತರ, ಅಭ್ಯರ್ಥಿಯನ್ನು ಡಿಫೆನ್ಸ್ ಪೇ ಮ್ಯಾಟ್ರಿಕ್ಸ್‌ನ ಹಂತ 3 ರಲ್ಲಿ ಇರಿಸಲಾಗುತ್ತದೆ. ಅಂದರೆ, 21,700 ರೂಪಾಯಿಯಿಂದ 69,100 ರೂ. ವರೆಗೂ ಸ್ಕೇಲ್ ಇರಲಿದೆ. ಅವರಿಗೆ ಊಟದ ಭತ್ಯೆ ಜೊತೆಗೆ ತಿಂಗಳಿಗೆ  ಒಟ್ಟು 5200 ರೂ. ಅನ್ನು  ನೀಡಲಾಗುತ್ತದೆ.

ಅಂದ ಹಾಗೇ ಅರ್ಜಿ ಪ್ರಕ್ರಿಯೆ  ಅಕ್ಟೋಬರ್ 29ರಿಂದಲೇ ಶುರುವಾಗಲಿದ್ದು. ಈ ಬಗ್ಗೆ ಅಭ್ಯರ್ಥಿಗಳು ಗಮನಹರಿಸಬೇಕು ಮತ್ತು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. 

ನೌಕಾಪಡೆಯಲ್ಲಿ ನಾವಿಕರಾಗಿ ಕೆಲಸ ಮಾಡಲು  ಆಸಕ್ತಿಯುಳ್ಳ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. 2021ರ ನವೆಂಬರ್ 2ರಂದು  ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಅಂದ ಹಾಗೇ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ದೆಹಲಿಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. 

BELನಲ್ಲಿ ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

ದೇಶದ ಮೂರು ಪಡೆಗಳಲ್ಲಿ ಒಂದಾಗಿರುವ ನೌಕಾಪಡೆಯು ತನ್ನ ಶೌರ್ಯ ಹಾಗೂ ಧೈರ್ಯ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ದೇಶದ ನೌಕಾಪಡೆಯಲ್ಲಿ ಕೆಲಸ ಮಾಡುವುದ  ಹೆಮ್ಮೆಯ ವಿಷಯವಾಗಿದೆ. ಹಾಗಾಗಿ, ನಾವಿಕರಾಗಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹಾದಗಿದೆ.

click me!