ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

By Suvarna News  |  First Published May 11, 2020, 4:48 PM IST

ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರು  ಸ್ಯಾಲರಿ ಕಟ್ ಆಗುತ್ತೆ ಎನ್ನುವ ಆತಂಕದಲ್ಲುರುವವರಿಗೆ ಸಚಿವೆ ನಿರ್ಮಲಾಸೀತಾರಾಮನ್  ಸ್ಪಷ್ಟನೆ ನೀಡಿದ್ದಾರೆ. 


ನವದೆಹಲಿ, (ಮೇ.11): ಕೇಂದ್ರ ಸರ್ಕಾರಿ ನೌಕರರ ವೇತನ ಕಡಿತದ ಪ್ರಸ್ತಾಪವೇ ಇಲ್ಲ ಎಂದು ಕೇಂದ್ರ  ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಕೇಂದ್ರ ನೌಕರರ ವೇತನದಲ್ಲಿ ಕಡಿತ ಮಾಡಲಾಗುತ್ತೆ ಎನ್ನುವ ಸುದ್ದಿ ಹಬ್ಬಿತ್ತು.

Latest Videos

undefined

ಇದೀಗ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್, ಕೇಂದ್ರ ಸರ್ಕಾರಿ ನೌಕರ ವೇತನ ಕಡಿತಗೊಳಿಸಲಾಗುತ್ತದೆ ಎಂಬ ಸುದ್ದಿಯೇ ಸುಳ್ಳು. ಇಂತಹ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಯಾವುದೇ ನೌಕರರ ವೇತನವನ್ನು ಕಡಿತಗೊಳಿಸುವುದೂ ಇಲ್ಲ ಎಂದು ಹೇಳಿದರು.

8 ಗಂಟೆ ಬದಲು 12 ಗಂಟೆ ಶಿಫ್ಟ್‌: ಸುಗ್ರೀವಾಜ್ಞೆ ಸಾಧ್ಯತೆ

ಸ್ಯಾಲರಿ ಕಟ್ ಮಾಡುತ್ತಾರೆ ಎನ್ನುವುದು ಸುಳ್ಳು ಸುದ್ದಿಯಾಗಿದೆ ಎಂದು ತಿಳಿಸುವ ಮೂಲಕ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದರು.

ಸುಮಾರು 50 ದಿನಗಳಿಂದ ಕೊರೋನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್ ಡೌನ್ ಹೇರಲಾಗಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಕೂಡ ಉಂಟಾಗಿದೆ. 

ಇದರ ಮಧ್ಯೆ ಅನೇಕ ಖಾಸಗಿ ಕಂಪನಿಗಳು, ರಾಜ್ಯ ಸರ್ಕಾರಗಳು ನೌಕರರ ವೇತನಕ್ಕೆ ಕತ್ತರಿ ಹಾಕಿದ್ದಾವೆ. ಇದೇ ಮಾದರಿಯಲ್ಲೇ ಕೇಂದ್ರ ಸರ್ಕಾರಿ ನೌಕರರ ವೇತನ ಕೂಡ ಕಡಿತಗೊಳಿಸಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು.

click me!