NCERT Recruitment 2022: 54 ಹುದ್ದೆಗಳ ಭರ್ತಿಗೆ ಮುಂದಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮಂಡಳಿ

By Suvarna News  |  First Published Jan 10, 2022, 6:05 PM IST

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.   ಒಟ್ಟು 54 ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್  ಮೂಲಕ ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ  


ಬೆಂಗಳೂರು(ಜ.10): ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (National Council of Education Research and Training- NCERT) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಸೀನಿಯರ್ ಕನ್ಸಲ್ಟೆಂಟ್, ಕನ್ಸಲ್ಟೆಂಟ್ ಹಾಗೂ ಇತರೆ ಸೇರಿ ಒಟ್ಟು 54 ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ.  ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ ncert.nic.in ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 54 ಹುದ್ದೆಗಳ ವಿವರ ಇಂತಿದೆ
ಸೀನಿಯರ್ ಕನ್ಸಲ್ಟೆಂಟ್(ಅಕಾಡೆಮಿಕ್)-6
ಕನ್ಸಲ್ಟೆಂಟ್(ಅಕಾಡೆಮಿಕ್)- 29
ಪ್ರಾಜೆಕ್ಟ್​ ಅಸೋಸಿಯೇಟ್​/ಸರ್ವೇ ಅಸೋಸಿಯೇಟ್/ಸೀನಿಯರ್ ರಿಸರ್ಚ್​ ಅಸೋಸಿಯೇಟ್- 5
ಜೂನಿಯರ್ ಪ್ರಾಜೆಕ್ಟ್​ ಫೆಲೋ-12
ಆಫೀಸ್ ಅಸಿಸ್ಟೆಂಟ್-1
ಅಕೌಂಟೆಂಟ್-1

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಅನುಭವ:
ಸೀನಿಯರ್ ಕನ್ಸಲ್ಟೆಂಟ್(ಅಕಾಡೆಮಿಕ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮತ್ತು  5 ವರ್ಷಗಳ ಅನುಭವ  ಹೊಂದಿರಬೇಕು.
ಕನ್ಸಲ್ಟೆಂಟ್(ಅಕಾಡೆಮಿಕ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ  ಮತ್ತು 2 ವರ್ಷಗಳ ಅನುಭವ  ಹೊಂದಿರಬೇಕು.
ಪ್ರಾಜೆಕ್ಟ್​ ಅಸೋಸಿಯೇಟ್​/ಸರ್ವೇ ಅಸೋಸಿಯೇಟ್/ಸೀನಿಯರ್ ರಿಸರ್ಚ್​ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮತ್ತು 2 ವರ್ಷಗಳ ಅನುಭವ  ಹೊಂದಿರಬೇಕು.
ಜೂನಿಯರ್ ಪ್ರಾಜೆಕ್ಟ್​ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ  ಹೊಂದಿರಬೇಕು.
ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ  ಮತ್ತು 2 ವರ್ಷಗಳ ಅನುಭವ  ಹೊಂದಿರಬೇಕು.
ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ  ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು.

ARMY SCHOOL RECRUITMENT 2022: ದೇಶದಾದ್ಯಂತ ಸೇನಾ ಶಾಲೆಗೆ 8700 ಶಿಕ್ಷಕರ ನೇಮಕಾತಿ, ಜನವರಿ 28ರೊಳಗೆ ಅರ್ಜಿ ಸಲ್ಲಿಸಿ

ಹುದ್ದೆಗೆ ಅನಸಾರ ವೇತನ ವಿವರ:
ಸೀನಿಯರ್ ಕನ್ಸಲ್ಟೆಂಟ್(ಅಕಾಡೆಮಿಕ್)- ಮಾಸಿಕ  60,000 ರೂ
ಕನ್ಸಲ್ಟೆಂಟ್(ಅಕಾಡೆಮಿಕ್)- ಮಾಸಿಕ   45,000 ರೂ
ಪ್ರಾಜೆಕ್ಟ್​ ಅಸೋಸಿಯೇಟ್​/ಸರ್ವೇ ಅಸೋಸಿಯೇಟ್/ಸೀನಿಯರ್ ರಿಸರ್ಚ್​ ಅಸೋಸಿಯೇಟ್- ಮಾಸಿಕ   30,000 ರೂ
ಜೂನಿಯರ್ ಪ್ರಾಜೆಕ್ಟ್​ ಫೆಲೋ-ಮಾಸಿಕ   23,000 ರೂ
ಆಫೀಸ್ ಅಸಿಸ್ಟೆಂಟ್- ಮಾಸಿಕ   25,000 ರೂ
ಅಕೌಂಟೆಂಟ್- ಮಾಸಿಕ   25,000 ರೂ

ಆಯ್ಕೆ ಪ್ರಕ್ರಿಯೆ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಖಾಲಿ ಇರುವ ಹುದ್ದೆಗಳೀಗೆ ಅರ್ಜಿ ಸಲ್ಲಿಸಿದವರನ್ನು ಆನ್‌ಲೈನ್ ಸಂದರ್ಶನದ ಮೂಲಕ ಆಯ್ಕೆ ಮಾಡಲಿದೆ.  ಆನ್‌ಲೈನ್ ಸಂದರ್ಶನ ಯಾವಾಗ ನಡೆಯಲಿದೆ ಎಂಬುದನ್ನು ಈ ಮೇಲ್ ಮೂಲಕ ತಿಳಿಸಲಿದೆ. 

NHM Recruitment 2022: ಬರೋಬ್ಬರಿ 4000 ಕಮ್ಯುನಿಟಿ ಹೆಲ್ತ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗ ಅರಸುತ್ತಿರುವ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ: ಕರ್ನಾಟಕ ಬ್ಯಾಂಕ್ (Karnataka Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್ (Manager) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆಫ್​ಲೈನ್ (Offline)​ ಮೂಲಕ ಜನವರಿ 20ರೊಳಗೆ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು karnatakabank.com ಗೆ ಭೇಟಿ ನೀಡಿ.

ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ಬ್ಯಾಂಕ್ ನೇಮಕಾತಿಯ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ CA (ಚಾರ್ಟರ್ಡ್ ಅಕೌಂಟೆಂಟ್) ಪೂರ್ಣಗೊಳಿಸಿರಬೇಕು.

ಅರ್ಜಿ ವಿಳಾಸ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಸಹಾಯಕ ಪ್ರಧಾನ ವ್ಯವಸ್ಥಾಪಕರು (HR & IR)
ಕರ್ನಾಟಕ ಬ್ಯಾಂಕ್ ಲಿಮಿಟೆಡ್
ಪ್ರಧಾನ ಕಛೇರಿ
ಮಹಾವೀರ ಸರ್ಕಲ್
ಕಂಕನಾಡಿ
ಮಂಗಳೂರು- 575002

click me!