Ministry of Defence Recruitment 2022: 97 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಕ್ಷಣಾ ಸಚಿವಾಲಯ

By Suvarna News  |  First Published Jan 9, 2022, 5:38 PM IST

ರಕ್ಷಣಾ ಸಚಿವಾಲಯವು ಉಪ ವಿಭಾಗಾಧಿಕಾರಿ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 15 ಆಗಿದೆ. 


ಬೆಂಗಳೂರು(ಜ.9): ದೇಶ ರಕ್ಷಣೆ ವಿಚಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರುವ ಕನಸು ನಿಮಗಿದ್ಯಾ? ಕೇಂದ್ರ ಸರ್ಕಾರ ಪ್ರಮುಖ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಅನ್ನೋ ಆಸೆ ಇದ್ದರೆ, ತಡಮಾಡದೇ ಅರ್ಜಿ ಸಲ್ಲಿಸಿ. ಯಾಕಂದ್ರೆ ಈಗಾಗಲೇ ರಕ್ಷಣಾ ಸಚಿವಾಲಯವು 2022ರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.

ಈ ಬಾರಿ ರಕ್ಷಣಾ ಸಚಿವಾಲಯವು ಉಪ ವಿಭಾಗಾಧಿಕಾರಿ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 97 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 15 ಆಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ https://indianarmy.nic.in/ ಗೆ ಭೇಟಿ ನೀಡಬಹುದು. 

Tap to resize

Latest Videos

undefined

ಒಟ್ಟು  97 ಹುದ್ದೆಗಳ ವಿವರ ಇಂತಿದೆ: 
ಉಪ ವಿಭಾಗಾಧಿಕಾರಿ (Sub Divisional Officer):  89 ಹುದ್ದೆಗಳು
ಕಿರಿಯ ಹಿಂದಿ ಅನುವಾದಕರು (Junior Hindi Translator): 7 ಹುದ್ದೆಗಳು
ಹಿಂದಿ ಬೆರಳಚ್ಚು (Hindi Typist): 1 ಹುದ್ದೆಗಳು

GAIL INDIA RECRUITMENT 2022: ಗೈಲ್ ಇಂಡಿಯಾದಲ್ಲಿ MBBS, MD ಪದವೀಧರರಿಗೆ ಉದ್ಯೋಗಾವಕಾಶ

ಶೈಕ್ಷಣಿಕ ವಿದ್ಯಾರ್ಹತೆ: ಹಿಂದಿ ಅನುವಾದಕರು  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹಿಂದಿಯನ್ನು ಐಚ್ಚಿಕ ವಿಷಯವಾಗಿ ಪಡೆದು ಸ್ನಾತಕೋತ್ತರ ಪದವಿ ಮಾಡಿರಬೇಕು. ಇಲ್ಲವೇ ಪದವಿ ಮಟ್ಟದಲ್ಲಿ ಪರೀಕ್ಷಾ ಮಾಧ್ಯಮವಾಗಿರಬೇಕು. ಇತರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಪಾಸ್ ಆಗಿರಬೇಕು.

ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ: ರಕ್ಷಣಾ ಸಚಿವಾಲಯದ ವಿವಿಧ ಹುದ್ದೆಗಳ ಹಿಂದಿ ಅನುವಾದಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ  30 ಇರಬೇಕು. ಇತರ ಹುದ್ದೆಗೆ 18 ರಿಂದ 27 ಇರಬೇಕು. ಒಬಿಸಿ/ಎಸ್‌ಸಿ/ಎಸ್‌ಟಿ ಕೆಟಗರಿಯವರಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಶುಲ್ಕ: ರಕ್ಷಣಾ ಸಚಿವಾಲಯದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 200 ರೂ ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿಯನ್ನು ನೀಡಲಾಗಿದೆ.

ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾದ ವಿಳಾಸ: 
Principal Director
Defence Estates
Southern Command
Near ECHS Polyclinic
Kodhwa Road, Pune- 411040. 

TCS Recruitment 2022: ಬೆಂಗಳೂರಿನಲ್ಲಿ ಟೆರಾ ಡೆವಲಪರ್ ಹುದ್ದೆಗೆ ಅರ್ಜಿ ಆಹ್ವಾನ

UPSC ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ರಿಸರ್ವ್ ಲಿಸ್ಟ್‌ ಬಿಡುಗಡೆ: ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC) ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆ 2020 ರ (Engineering Services Examination 2020 ) ರಿಸರ್ವ್ ಲಿಸ್ಟ್‌ ಅನ್ನು ಬಿಡುಗಡೆ ಮಾಡಲಾಗಿದೆ. ಸದರಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ ಫಲಿತಾಂಶವನ್ನು ಪರೀಕ್ಷಿಸಬಹುದು. ಕೇಂದ್ರ ಲೋಕಸೇವಾ ಆಯೋಗವು ಎಪ್ರಿಲ್ 12, 2021ರಂದು  302 ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನೇಮಕಾತಿಗೆ ಶಿಫಾರಸು ಮಾಡಿ ನೋಟಿಸ್ ಬಿಡುಗಡೆ ಮಾಡಿತ್ತು.

ಪ್ರಸ್ತುತ ರೈಲ್ವೆ ಸಚಿವಾಲಯದ ಬೇಡಿಕೆಯಂತೆ ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ಆಧಾರದ ಮೇಲೆ ಉಳಿದ ಹುದ್ದೆಗಳ ನೇಮಕಾತಿಗೆ ಆಯೋಗವು 41 ಅಭ್ಯರ್ಥಿಗಳ ರಿಸರ್ವ್‌ ಲಿಸ್ಟ್‌ ಅನ್ನು ಬಿಡುಗಡೆ ಮಾಡಿದೆ. ಈ ಅಭ್ಯರ್ಥಿಗಳ ಪೈಕಿ ಸಾಮಾನ್ಯ-30, ಒಬಿಸಿ-09, ಇಡಬ್ಲ್ಯೂಎಸ್ (Economically Weaker Section)-01, ST-1 ವರ್ಗದವರ ಹೆಸರು ಪಟ್ಟಿಯಲ್ಲಿದೆ.

click me!