ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ ಖಾಲಿ ಇರುವ ವಿವಿಧ ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರವರಿ 21ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಬೆಂಗಳೂರು(ಜ.31): ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ (National Hydroelectric Power Corporation - NHPC)ಖಾಲಿ ಇರುವ ವಿವಿಧ ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 113 ಹುದ್ದೆಗಳು ಖಾಲಿ ಇದ್ದು, ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 21ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ nhpcindia.com ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 113 ಹುದ್ದೆಗಳ ವಿವರ:
ಜೂನಿಯರ್ ಎಂಜಿನಿಯರ್(ಸಿವಿಲ್)-68
ಜೂನಿಯರ್ ಎಂಜಿನಿಯರ್(ಎಲೆಕ್ಟ್ರಿಕಲ್)-34
ಜೂನಿಯರ್ ಎಂಜಿನಿಯರ್(ಮೆಕ್ಯಾನಿಕಲ್)-31
undefined
ಶೈಕ್ಷಣಿಕ ವಿದ್ಯಾರ್ಹತೆ: ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ ಖಾಲಿ ಇರುವ ವಿವಿಧ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಶೇ.60ರಷ್ಟು ಅಂಕಗಳೊಂದಿಗೆ ಕಡ್ಡಾಯವಾಗಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.
ಅರ್ಜಿ ಶುಲ್ಕ: ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ ಖಾಲಿ ಇರುವ ವಿವಿಧ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು 295 ರೂ. ಅರ್ಜಿ ಶುಲ್ಕ ಪಾವತಿಸಬೇಕು.
SC/ST/PwBD/ ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ.
ವಯೋಮಿತಿ: ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ ಖಾಲಿ ಇರುವ ವಿವಿಧ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 1, 2022ಕ್ಕೆ 30 ವರ್ಷ ಮೀರಿರಬಾರದು.
ಮಾಸಿಕ ವೇತನ: ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ ಖಾಲಿ ಇರುವ ವಿವಿಧ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 29,600 ರಿಂದ 1,19,500 ರೂ. ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ ಖಾಲಿ ಇರುವ ವಿವಿಧ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
HQ Madras Engineer Group Recruitment 2022: 10th,12th, ITI ಪಾಸಾದವರು ಇಂದೇ ಅರ್ಜಿ ಸಲ್ಲಿಸಿ
EPFOಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ನೌಕರರ ಭವಿಷ್ಯ ನಿಧಿ ಸಂಸ್ಥೆ (Employees Provident Fund Organisation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್, ಆಡಿಟರ್, ಅಸಿಸ್ಟೆಂಟ್ ಆಡಿಟ್ ಆಫೀಸರ್ ಸೇರಿ ಒಟ್ಟು 98 ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಫೆಬ್ರವರಿ 2, 2022 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ www.epfindia.gov.in ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು. ಈ ಹಿಂದೆ ಜನವರಿ 2 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಿದೆ.
ಒಟ್ಟು 98 ಹುದ್ದೆಗಳು ಖಾಲಿ ಇದ್ದು, ಮಾಹಿತಿ ಇಂತಿದೆ
ಡೆಪ್ಯುಟಿ ಡೈರೆಕ್ಟರ್-13
ಅಸಿಸ್ಟೆಂಟ್ ಡೈರೆಕ್ಟರ್-25
ಅಸಿಸ್ಟೆಂಟ್ ಆಡಿಟ್ ಆಫೀಸರ್-26
ಆಡಿಟರ್-34
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ
ಶ್ರೀ ಪರಿತೋಷ್ ಕುಮಾರ್
ರೀಜನಲ್ ಪ್ರಾವಿಡೆಂಟ್ ಫಂಡ್ ಕಮಿಷನರ್-1(HRM)
ಭವಿಷ್ಯ ನಿಧಿ ಭವನ
14 ಭಿಕಜಿ ಕ್ಯಾಮ ಸರ್ಕಲ್
ನವದೆಹಲಿ-11006