HQ Madras Engineer Group Recruitment 2022: 10th,12th, ITI ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

Published : Jan 30, 2022, 07:54 PM IST
HQ Madras Engineer Group Recruitment 2022: 10th,12th, ITI ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

ಸಾರಾಂಶ

ಬೆಂಗಳೂರಿನ ಪ್ರಧಾನ ಕಾರ್ಯಸ್ಥಾನ ಮದ್ರಾಸ್ ಇಂಜಿನಿಯರ್ ಗ್ರೂಪ್‌ ಹಾಗೂ ಕೇಂದ್ರವು ವಿವಿಧ 72 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಬೆಂಗಳೂರು(ಜ.30): ಕೇಂದ್ರ ರಕ್ಷಣಾ ಸಚಿವಾಲಯ ಅಧೀನದ ಪ್ರಧಾನ ಕಾರ್ಯಸ್ಥಾನ ಮದ್ರಾಸ್ ಇಂಜಿನಿಯರ್ ಗ್ರೂಪ್‌ ಹಾಗೂ ಕೇಂದ್ರ ಬೆಂಗಳೂರು (Headquarters Madras Engineer Group and Centre Bangalore ) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಒಟ್ಟು 72 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಫೆಬ್ರವರಿ18ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://indianarmy.nic.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ.

ಒಟ್ಟು 72 ಹುದ್ದೆಗಳ ವಿವರ
ಕೆಳ ವಿಭಾಗದ ಗುಮಾಸ್ತ (ಎಲ್‌ಡಿಸಿ) 06
ಸ್ಟೋರ್ ಕೀಪರ್ ಗ್ರೇಡ್ III (SK III)-10
ಸಿವಿಲಿಯನ್ ಟ್ರೇಡ್‌ ಇನ್ಸ್‌ಪೆಕ್ಟರ್ (CTI)-07
ಬಾಣಸಿಗ-04
ಲಾಸ್ಕರ್-10
ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್ )-28
ಮಡಿವಾಳ-05
ಕ್ಷೌರಿಕ-02

ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರ ರಕ್ಷಣಾ ಸಚಿವಾಲಯ ಅಧೀನದ ಪ್ರಧಾನ ಕಾರ್ಯಸ್ಥಾನ ಮದ್ರಾಸ್ ಇಂಜಿನಿಯರ್ ಗ್ರೂಪ್‌ ಹಾಗೂ ಕೇಂದ್ರ ಬೆಂಗಳೂರು ಇಲ್ಲಿ ಖಾಲಿ ಇರುವ ಗ್ರೂಪ್ ಸಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ 10ನೇ ತರಗತಿ,12ನೇ ತರಗತಿ ಮತ್ತು ಐಟಿಐ ಪಾಸಾಗಿರಬೇಕು.

ಆಯ್ಕೆ ಪ್ರಕ್ರಿಯೆ: ರಕ್ಷಣಾ ಸಚಿವಾಲಯ ಅಧೀನದ ಪ್ರಧಾನ ಕಾರ್ಯಸ್ಥಾನ ಮದ್ರಾಸ್ ಇಂಜಿನಿಯರ್ ಗ್ರೂಪ್‌ ಹಾಗೂ ಕೇಂದ್ರ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ (Skill Test), ದಾಖಲಾತಿ ಪರಿಶೀಲನೆ, ಮೆಡಿಕಲ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

EPFO Recruitment 2022: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವೇತನ ವಿವರ: ರಕ್ಷಣಾ ಸಚಿವಾಲಯ ಅಧೀನದ ಪ್ರಧಾನ ಕಾರ್ಯಸ್ಥಾನ ಮದ್ರಾಸ್ ಇಂಜಿನಿಯರ್ ಗ್ರೂಪ್‌ ಹಾಗೂ ಕೇಂದ್ರ ಬೆಂಗಳೂರು ಇಲ್ಲಿ ಖಾಲಿ ಇರುವ ಗ್ರೂಪ್ ಸಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ವೇತನ ಇರಲಿದ್ದು, ಮಾಸಿಕ  19,900 ರೂ ನಿಂದ ಆರಂಭವಾಗಲಿದೆ. 

ಅರ್ಜಿ ಸಲ್ಲಿಸಬೇಕಾದ ವಿಳಾಸ:
The Civilian Establishment Officer
Civilian Recruitment Cell
HQ MEG & Centre
Sivan Chetty Garden Post
Bangalore – 560 042

BARC RECRUITMENT 2022: ಬಿಇ, ಬಿ.ಟೆಕ್, ಬಿಎಸ್ಸಿ ಪದವೀಧರರಿಗೆ ಉದ್ಯೋಗವಕಾಶ

ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗೆ ನೇರ ನೇಮಕಾತಿ: ಭಾರತೀಯ ಉಕ್ಕು ಪ್ರಾಧಿಕಾರ (Steel Authority of India- SAIL) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ .  ಸ್ಪೆಷಲಿಸ್ಟ್​ ಮತ್ತು ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಸೇರಿ ಒಟ್ಟು 24 ಹುದ್ದೆಗಳು  ಖಾಲಿ ಇದ್ದು, ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 9 ರಿಂದ 11 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ (Walk-in-Interview)ಭಾಗವಹಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಉಕ್ಕು ಪ್ರಾಧಿಕಾರ (SAIL)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಕಾಲೇಜಿನಿಂದ ಕಡ್ಡಾಯವಾಗಿ ಎಂಬಿಬಿಎಸ್, ಎಂಎಸ್​, ಎಂಡಿ ಪೂರ್ಣಗೊಳಿಸಿರಬೇಕು.

ಸ್ಪೆಷಲಿಸ್ಟ್​  ಹುದ್ದೆಗಳಿಗೆ ಪಿಜಿ ಡಿಪ್ಲೋಮಾ/ ಪದವಿ, ಎಂಬಿಬಿಎಸ್​​ ಪದವಿ ಮತ್ತು
ಜನರಲ್​ ಡ್ಯೂಟಿ ಮೆಡಿಕಲ್​ ಆಫೀಸರ್ ಹುದ್ದೆಗಳಿಗೆ  ಎಂಬಿಬಿಎಸ್​ ಪದವಿ ಮಾಡಿರಬೇಕು.

ಸಂದರ್ಶನ ನಡೆಯುವ ಸ್ಥಳ:
ED ಕಚೇರಿ (M&HS)
DSP ಮುಖ್ಯ ಆಸ್ಪತ್ರೆ ದುರ್ಗಾಪುರ- 713205
ಪಶ್ಚಿಮ್ ಬರ್ಧಮಾನ್

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್