ಕಳೆದ ನಾಲ್ಕು ವರ್ಷದಲ್ಲಿ 92,000 ರೈಲ್ವೇ ಉದ್ಯೋಗ ರದ್ದುಗೊಳಿಸಿದ ಕೇಂದ್ರ!

By Suvarna News  |  First Published Jun 27, 2022, 9:04 PM IST
  • ನಿರುದ್ಯೋಗ ಸಮಸ್ಯೆ ಬೆನ್ನಲ್ಲೇ ಸ್ಫೋಟಕ ಮಾಹಿತಿ ಬಹಿರಂಗ
  • ರೈಲ್ವೇ ಇಲಾಖೆಯ 92 ಸಾವಿರಕ್ಕೂ ಅಧಿಕ ಉದ್ಯೋಗಕ್ಕೆ ಕತ್ತರಿ
  • ಸದ್ಯ ರೈಲ್ವೇ ಇಲಾಖೆಯಲ್ಲಿ 2.98 ಲಕ್ಷ ಹುದ್ದೆ ಖಾಲಿ ಖಾಲಿ

ನವದೆಹಲಿ(ಜೂ.27): ಪ್ರಧಾನಿ ಮೋದಿ ಸರ್ಕಾರಕ್ಕೆ ಅತೀ ದೊಡ್ಡ ತಲೆನೋವಾಗಿರುವುದು ನಿರುದ್ಯೋಗ ಸಮಸ್ಯೆ. ವಿಪಕ್ಷಗಳು ಪದೇ ಪದೇ ಇದೇ ಅಸ್ತ್ರ ಹಿಡಿದು ತಿವಿಯುತ್ತಿದೆ. ಇದಕ್ಕಾಗಿ ಇತ್ತೀಚೆಗೆ 10 ಲಕ್ಷ ಉದ್ಯೋಗ ಭರ್ತಿ ಯೋಜನೆ ಘೋಷಿಸಿದ್ದಾರೆ. ಇದರ ನಡುವೆ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ. ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರ ಸರ್ಕಾರ ರೈಲ್ವೇ ಇಲಾಖೆಯ 92,000ಕ್ಕೂ ಹೆಚ್ಚುು ಉದ್ಯೋಗವನ್ನೇ ರದ್ದು ಮಾಡಿದೆ.

2019-19 ಹಾಗೂ 2021-22ರ ಸಾಲಿನಲ್ಲಿ ಕೇಂದ್ರ ಸರ್ಕಾರ ರೈಲ್ವೇ ಇಲಾಖೆಯಲ್ಲಿದ್ದ ಅನಗತ್ಯ ಹಾಗೂ ಹೊರೆಯಾಗಿದ್ದ 92,000ಕ್ಕೂ ಉದ್ಯೋಗವನ್ನು ರದ್ದುಗೊಳಿಸಿದೆ. ದೊಡ್ಡ ಸಂಖ್ಯೆಯಲ್ಲೇ ಉದ್ಯೋಗಕ್ಕೆ ಕತ್ತರಿ ಹಾಕಿದ್ದರೂ ಸದ್ಯ ರೈಲ್ವೇ ಇಲಾಖೆಯಲ್ಲಿ 2.98 ಲಕ್ಷ ಹುದ್ದೆಗಳು ಖಾಲಿ ಇವೆ.

Tap to resize

Latest Videos

undefined

Western Railway Recruitment 2022; ಬರೋಬ್ಬರಿ 3612 ಹುದ್ದೆಗಳ ನೇಮಕಾತಿ

2019-20ರ ಸಾಲಿನಲ್ಲಿ ದೇಶದ ಎಲ್ಲಾ 17 ಝೋನ್‌ಗಳಿಂದ ಒಟ್ಟು 31,275 ಹುದ್ದೆಗಳನ್ನು ರದ್ದುಗೊಳಿಸಲಾಗಿತ್ತು. 2018-19ರ ಸಾಲಿನಲ್ಲಿ  23,366 ಹುದ್ದೆ, 2021-22 ಸಾಲಿನಲ್ಲಿ 31,275 ಹುದ್ದೆ, 2020-21 ಸಾಲಿನಲ್ಲಿ 27,477 ಹುದ್ದೆಗಳನ್ನು ರದ್ದುಗೊಳಿಸಲಾಗಿದೆ. ಕುರಿತುಲ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕೇಂದ್ರ ಸರ್ಕಾರ ಸಬ್ ಅರ್ಬನ್ ರೈಲು ಸೇವೆ ಆರಂಭಿಸುತ್ತಿದೆ. ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದರಿಂದ ರೈಲ್ವೇ ಇಲಾಖೆಯಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಿದೆ. 

ದೇಶದ ಮೊದಲ ಹೈಟೆಕ್‌ ಸಬ್‌ ಅರ್ಬನ್‌:
ಬೆಂಗಳೂರಿನಲ್ಲಿ ದೇಶದ ಮೊದಲ ಹೈಟೆಕ್‌ ಸಬ್‌ ಅರ್ಬನ್‌ ಯೋಜನೆಗೆ ಚಾಲನೆ ನೀಡಲಾಗಿದೆ. ಆ ಯೋಜನೆಯಡಿ ರೈಲು, ನಿಲ್ದಾಣಗಳನ್ನು ಹೈಟೆಕ್‌ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಹವಾನಿಯಂತ್ರಿತ ಬೋಗಿ, ನಿಲ್ದಾಣ, ಪೇಪರ್‌ಲೆಸ್‌ ಟಿಕೆಟ್‌ ವ್ಯವಸ್ಥೆ ಸೇರಿದಂತೆ ಮೆಟ್ರೋ ಮಾದರಿಯಲ್ಲಿಯೇ ಹಲವು ಅಪ್‌ಡೇಟ್‌, ಹೈಟೆಕ್‌ ಅಂಶ ಇರಲಿದೆ.

 

ರೈಲ್ವೆ ವಿದ್ಯುತ್ತೀಕರಣದಿಂದ 300 ಕೋ.ರು. ಉಳಿತಾಯ: ಶೋಭಾ ಕರಂದ್ಲಾಜೆ

*ಏನಿದು ಉಪನಗರ ರೈಲು?
ನಗರದ ಒಳ ಮತ್ತು ಹೊರವಲಯದ ರೈಲ್ವೆ ನಿಲ್ದಾಣಗಳ ಮಧ್ಯೆ ಅಗತ್ಯವಿರುವ ಬಡಾವಣೆಗಳಲ್ಲಿ ನಿಲುಗಡೆ ಮಾಡಿಕೊಂಡು ಸೀಮಿತ ಬೋಗಿಗಳ ಮೆಮೊ ಮಾದರಿಯ ರೈಲು ಓಡಾಟ ನಡೆಸಲಿದೆ. ಸದ್ಯ ಲಭ್ಯವಿರುವ ರೈಲು ಮಾರ್ಗಗಳಲ್ಲಿ ಜತೆಗೆ ಅಗತ್ಯವಿರುವ ಕಡೆ ಹೊಸ ಪ್ರತ್ಯೇಕ ರೈಲು ಮಾರ್ಗ ಜತೆಗೆ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. 147.17 ಕಿ.ಮೀನಲ್ಲಿ ನಾಲ್ಕು ಮಾರ್ಗ ರೂಪಿಸಿದ್ದು, 57 ನಿಲ್ದಾಣಗಳ ನಡುವೆ ರೈಲು ಓಡಾಟ ನಡೆಸಲಿವೆ. ಮೆಟ್ರೊ ರೈಲಿನ ಮಾದರಿಯಲ್ಲಿ ಈ ರೈಲುಗಳು ನಗರದ ವಿವಿಧೆಡೆ ಸಂಚರಿಸಲಿದ್ದು, ರೈಲಿನಲ್ಲಿ ಶೌಚಾಲಯ, ಲಗೇಜ್‌ ಸಾಗಾಣಿಕೆಗೆ ಅನುಕೂಲವಾಗಲಿದೆ.

*ಅನುಕೂಲ ಹೇಗೆ?
ಮೆಟ್ರೊಗಿಂತಲೂ ಕಡಿಮೆ ದರ ಇರಲಿದೆ. ಮೆಟ್ರೊ ಲಭ್ಯವಿರದ ಹೊರ ವಲಯಗಳಲ್ಲಿ ಈ ರೈಲುಗಳು ಸಂಚರಿಸಲಿವೆ. ಜತೆಗೆ ಮೆಟ್ರೊ ರೀತಿಯಲ್ಲಿಯೇ ತ್ವರಿತವಾಗಿ ನಗರದ ವಿವಿಧ ಭಾಗಗಳಿಗೆ ಸಂಚರಿಸಬಹುದು. ಪ್ರಮುಖವಾಗಿ ನಗರ ವಿವಿಧ ಬಡಾವಣೆಗಳಿಂದ ಸುತ್ತಲಿನ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಸಂಪರ್ಕ ಸುಗಮಗೊಳ್ಳಲಿದೆ. ನಗರದ ಸಂಚಾರ ದಟ್ಟಣೆ ತಗ್ಗಿ, ಹೊರವಲಯ ಮತ್ತು ನಗರದ ವಿವಿಧ ಭಾಗಗಳಿಗೆ ಸಂಚಾರ ಸುಗಮವಾಗಲಿದೆ.
 

click me!