ರಾಷ್ಟ್ರೀಯ ನೇಮಕಾತಿ ಏಜೆನ್ಸಿಯು ಮೊದಲ ಬಾರಿಗೆ ಕೇಂದ್ರ ಸರ್ಕಾರದ ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ಸಿಇಟಿ ಪರೀಕ್ಷೆಗೆ ಮುಂದಾಗಿದೆ.
ನವದೆಹಲಿ (ಮೇ.23): ರಾಷ್ಟ್ರೀಯ ನೇಮಕಾತಿ ಏಜೆನ್ಸಿಯು (National Recruitment Agency) ಮೊದಲ ಬಾರಿಗೆ ಕೇಂದ್ರ ಸರ್ಕಾರದ ನಾನ್ ಗೆಜೆಟೆಡ್ (non-gazetted) ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಅರ್ಹತಾ ಪರೀಕ್ಷೆ ( Common Eligibility Test-ಸಿಇಟಿ) ಯನ್ನು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಮೂಲಕ ಈ ವರ್ಷದ ಅಂತ್ಯದ ಒಳಗೆ ನಡೆಸಲಿದೆ ಎಂದು ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Union Minister of State for Science and Technology Jitendra Singh) ಮಾಹಿತಿ ನೀಡಿದ್ದಾರೆ.
ನವದೆಹಲಿಯ ಉತ್ತರ ಬ್ಲಾಕ್‌ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (Department of Personnel and Training- ಡಿಒಪಿಟಿ) ಅಡಿಯಲ್ಲಿ ಎಲ್ಲಾ ಆರು ಸ್ವಾಯತ್ತ ಸಂಸ್ಥೆಗಳ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನ್-ಗೆಜೆಟೆಡ್ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಸಾಮಾನ್ಯ ಆನ್‌ಲೈನ್ ಪರೀಕ್ಷೆಯನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಈ ವರ್ಷ ಪ್ರಾರಂಭವಾಗಲಿದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರದ ಮೂಲಕ ಉದ್ಯೋಗ ಆಕಾಂಕ್ಷಿಗಳಿಗೆ ಸುಲಭವಾಗಿ ನೇಮಕಾತಿ ಅವಕಾಶ ದೊರಕುವಂತೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
TEXTBOOK CONTROVERSY ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷ
ಯುವಕರಿಗೆ ಅದರಲ್ಲಿಯೂ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಯುವಕರಿಗೆ ಇದು ವರದಾನವಾಗಲಿದೆ ಈ ಐತಿಹಾಸಿಕ ಸುಧಾರಣೆಯು ಎಲ್ಲಾ ಅಭ್ಯರ್ಥಿಗಳಿಗೆ ಅವರ ಹಿನ್ನೆಲೆ, ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಮೀರಿ ಉದ್ಯೋಗದ ಅವಕಾಶವನ್ನು ಒದಗಿಸುತ್ತದೆ. ಅನೇಕ ಕೇಂದ್ರಗಳಿಗೆ ಅಲೆದಾಡಿ ಪರೀಕ್ಷೆ ಬರೆಯುವುದು ತಪ್ಪುವುದರಿಂದ ಮಹಿಳೆಯರು, ಅಂಗವಿಕಲ ಅಭ್ಯರ್ಥಿಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂದು ವಿವರಿಸಿದ್ದಾರೆ
12 ಭಾಷೆಗಳಲ್ಲಿ ಪರೀಕ್ಷೆ: ಆರಂಭದಲ್ಲಿ ಹಿಂದಿ, ಇಂಗ್ಲಿಷ್ ಸೇರಿದಂತೆ 12 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಭವಿಷ್ಯದಲ್ಲಿ ಸಂವಿಧಾನದ 8ನೇ ಪರಿಚ್ಛೇದದಲ್ಲಿ ನಮೂದಿಸಿರುವ ಎಲ್ಲಾ ಭಾಷೆಗಳಲ್ಲಿ ಕೂಡ ಪರೀಕ್ಷೆ ನಡೆಸಲಾಗುತ್ತದೆ. ಪ್ರಧಾನಿ ಮೋದಿ ಅವರು ಪರಿಚಯಿಸಿದ 'ಸಂಪೂರ್ಣ ಸರ್ಕಾರದ' ಪರಿಕಲ್ಪನೆ, ಕೇವಲ ಕೆಟ್ಟದ್ದನ್ನು ತೆಗೆದುಹಾಕಿದ್ದು ಮಾತ್ರವಲ್ಲದೆ, ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಏಜೆನ್ಸಿಗಳು ಪ್ರತಿಯೊಂದು ಸಮಸ್ಯೆಯನ್ನು ಒಟ್ಟಾಗಿ ಪರಿಹರಿಸುವ ಮೂಲಕ ಸಮಗ್ರ ವಿಧಾನವನ್ನೂ ಸಹ ಅನುಷ್ಟಾನಗೊಳಿಸಿದೆ ಎಂದು ಈ ವೇಳೆ ಹೇಳಿದರು.
Karnataka Textbook controversy ಕುವೆಂಪುಗೆ ಅವಮಾನ ಆರೋಪಕ್ಕೆ ಸಚಿವ ನಾಗೇಶ್ ಗರಂ
ಮೂರು ಸ್ವಾಯತ್ತ ಸಂಸ್ಥೆಗಳ ವಿಲೀನ: ಎಲ್ಲಾ ಆರು ಸ್ವಾಯತ್ತ ಸಂಸ್ಥೆಗಳಾದ ರಾಷ್ಟ್ರೀಯ ನೇಮಕಾತಿ ಸಂಸ್ಥೆ (NRA), ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (IIPA), ನಾಗರಿಕ ಸೇವಾ ಅಧಿಕಾರಿಗಳ ಸಂಸ್ಥೆ (CSOI), ಗೃಹ ಕಲ್ಯಾಣ ಕೇಂದ್ರಗಳು (GKK), ಕೇಂದ್ರೀಯ ನಾಗರಿಕ ಸೇವೆಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಮಂಡಳಿ (CCSCSB) ಮತ್ತು ಕೇಂದ್ರೀಯ ಭಂಡಾರ್ (ನೋಂದಾಯಿತ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ) ಮುಖ್ಯಸ್ಥರು ಸಂಸ್ಥೆಗಳ ಆದೇಶ, ಕೆಲಸ, ಬಜೆಟ್, ಗುರಿಗಳು ಮತ್ತು ಉದ್ದೇಶಗಳ ಬಗ್ಗೆ ವಿವರವಾಗಿ ಹೇಳಿದರು.
ವೆಚ್ಚ ಇಲಾಖೆಯ ಆದೇಶಕ್ಕೆ ಅನುಗುಣವಾಗಿ, ಅತಿಕ್ರಮಿಸುವ ಆದೇಶಗಳು, ಗುರಿಗಳು ಮತ್ತು ಉದ್ದೇಶಗಳ ಕಾರಣದಿಂದ ಗೃಹ ಕಲ್ಯಾಣ ಕೇಂದ್ರಗಳು ಮತ್ತು ಕೇಂದ್ರ ನಾಗರಿಕ ಸೇವೆಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಮಂಡಳಿ ವಿಲೀನದ ಸಾಧ್ಯತೆಯನ್ನು ಅನ್ವೇಷಿಸಲು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹೀಗಾಗಿ ಡಿಒಪಿಟಿಯ ಮೂರು ಸ್ವಾಯತ್ತ ಸಂಸ್ಥೆಗಳ ಸಂಭವನೀಯ ವಿಲೀನದ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸುವ ಸಾಧ್ಯತೆ ಇದೆ.