Central Railway Recruitment 2022: MBBS ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಸುವರ್ಣವಕಾಶ, ಇಂದೇ ಅರ್ಜಿ ಸಲ್ಲಿಸಿ

By Suvarna NewsFirst Published Jan 8, 2022, 8:16 PM IST
Highlights

ಮಧ್ಯ ರೈಲ್ವೆಯು ಖಾಲಿ ಇರುವ  ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು  ಜನವರಿ 11 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ  ಪಾಲ್ಗೊಳ್ಳಲು ಕೋರಲಾಗಿದೆ.

ಬೆಂಗಳೂರು(ಜ.8): ಮಧ್ಯ ರೈಲ್ವೆಯು (Central Railway)ಖಾಲಿ ಇರುವ  ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರಿವಳಿಕೆ ತಜ್ಞ , ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO), ಫಿಜಿಸಿಯನ್ ಸೇರಿ ಒಟ್ಟು ಒಟ್ಟು 18 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಜನವರಿ 11 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ (Walk-in-Interview) ಪಾಲ್ಗೊಳ್ಳಲು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ  ಅಧಿಕೃತ ವೆಬ್‌ಸೈಟ್ https://cr.indianrailways.gov.in/ ಗೆ ಭೇಟಿ ನೀಡಬಹುದು.

ಒಟ್ಟು 18 ಹುದ್ದೆಗಳ ಮಾಹಿತಿ ಇಂತಿದೆ:
ವೈದ್ಯ (Physicians)​- 4
ಅರಿವಳಿಕೆ ತಜ್ಞ (Anaesthetis)- 4
GDMO (General Duties Medical Officer.)-10

ಶೈಕ್ಷಣಿಕ ವಿದ್ಯಾರ್ಹತೆ: ಮಧ್ಯ ರೈಲ್ವೆ ನೇಮಕಾತಿಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗನುಸಾರ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಎಂಬಿಬಿಎಸ್ ಪೂರ್ಣಗೊಳಿಸಿರಬೇಕು.

ವಯೋಮಿತಿ ಮತ್ತು ವೇತನ: ಮಧ್ಯ ರೈಲ್ವೆ ನೇಮಕಾತಿಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು  ಜನವರಿ 1,  2022ಕ್ಕೆ ಸಂಬಂಧಿಸಿ ಗರಿಷ್ಠ 53 ವರ್ಷ ಇರಬೇಕು.

South Eastern Railway Recruitment 2022: ಸ್ಪೋರ್ಟ್ಸ್​ ಕೋಟಾದಡಿ ಖಾಲಿ ಹುದ್ದೆಗಳ ಭರ್ತಿಗೆ ಮುಂದಾದ ಆಗ್ನೇಯ ರೈಲ್ವೆ

ಆಯ್ಕೆ ಪ್ರಕ್ರಿಯೆ: ಜನವರಿ 11 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ನೇರ ಸಂದರ್ಶನದಲ್ಲಿ  ಭಾಗವಹಿಸಬೇಕು. ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು,  ಗುತ್ತಿಗೆ ಆಧಾರದ ಮೇಲೆ  ಉದ್ಯೋಗ ನೀಡಲಾಗುತ್ತದೆ. ಸಂದರ್ಭಗಳು ಮತ್ತು ಅರ್ಜಿದಾರರ ಕಾರ್ಯಕ್ಷಮತೆಯನ್ನು ಅವಲಂಬಿಸಿ ಒಪ್ಪಂದದ ಅವಧಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವೇತನ ಮತ್ತು ಉದ್ಯೋಗ ಸ್ಥಳ:  ನೇರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 75,000-95,000 ರೂ ವೇತನ ನೀಡಲಾಗುತ್ತದೆ.  ಮತ್ತು ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದವರಿಗೆ  ಮಹಾರಾಷ್ಟ್ರದ ಮುಂಬೈನಲ್ಲಿ ಉದ್ಯೋಗ ನೀಡಲಾಗುತ್ತದೆ.

ನೇರ ಸಂದರ್ಶನ ನಡೆಯುವ ಸ್ಥಳದ ವಿಳಾಸ:
Bharatratna Dr. Babasaheb Ambedkar Memorial Hospital
Central Railway
Byculla, Mumbai- 400027.

https://kannada.asianetnews.com/central-government-jobs/west-central-railway-jobs-notification-2022-for-the-hiring-of-sports-person-posts-gow-r4meol

ಖಾಲಿ ಇರುವ 21 ಹುದ್ದೆಗಳಿಗೆ ಸ್ಪೋರ್ಟ್ಸ್​ ಕೋಟಾದಡಿ  ಅರ್ಜಿ ಆಹ್ವಾನಿಸಿದ ಪಶ್ಚಿಮ ಮಧ್ಯ ರೈಲ್ವೆ: ಪಶ್ಚಿಮ ಮಧ್ಯ ರೈಲ್ವೇ (Western Central Railway)ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ  ಅರ್ಹ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 21 ಸ್ಪೋರ್ಟ್ಸ್​ ಪರ್ಸನ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸ್ಪೋರ್ಟ್ಸ್​ ಕೋಟಾ, 10ನೇ ತರಗತಿ ಹಾಗೂ 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಲು ಜನವರಿ 22 ಕೊನೆ ದಿನವಾಗಿದೆ.  ಅಭ್ಯರ್ಥಿಗಳು ಪಶ್ಚಿಮ ಮಧ್ಯ ರೈಲ್ವೆಯ ಅಧಿಕೃತ ವೆಬ್​​ ತಾಣ ​ wcr.indianrailways.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. 

ವಿದ್ಯಾರ್ಹತೆ ಮತ್ತು ವಯೋಮಿತಿ: ಪಶ್ಚಿಮ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಸ್ಪೋರ್ಟ್ಸ್​ ಪರ್ಸನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು. ಜೊತೆಗೆ ಟೆಕ್ನಿಕಲ್​ ಹುದ್ದೆಗಳಿಗೆ ಐಟಿಐ ಪಾಸಾಗಿರಬೇಕು. ಅಭ್ಯರ್ಥಿಗಳ ವಯಸ್ಸು 18-25 ವರ್ಷದೊಳಗಿರಬೇಕು. PWD ಅಭ್ಯರ್ಥಿಗಳಿಗೆ 10 ವರ್ಷ, ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

click me!