ತಿಂಗಳಿಗೆ ಲಕ್ಷಗಟ್ಟಲೆ ದುಡ್ಡು ಎಣಿಸ್ತಿದ್ರೂ ಯುಪಿಎಸ್‌ಸಿ ಪರೀಕ್ಷೆ ಬರೆದು 81ನೇ ರ‍್ಯಾಂಕ್‌ ಪಡೆದ ಇಶು ಅಗರವಾಲ್

By BK Ashwin  |  First Published Aug 19, 2023, 12:44 PM IST

ಇಶು ಅಗರವಾಲ್ ತನ್ನ ಮೊದಲ ಪ್ರಯತ್ನದಲ್ಲಿ CA ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ನಂತರ ಅವರು ತಕ್ಷಣ ಸಿಎ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಜತೆಗೆ, ಯುಪಿಎಸ್‌ಸಿ ಅಧ್ಯಯನವನ್ನೂ ಆರಂಭಿಸಿದರು.


ನವದೆಹಲಿ (ಆಗಸ್ಟ್ 19, 2023): ಭಾರತದ ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲಿ ಯುಪಿಎಸ್‌ಸಿಯೂ ಒಂದಾಗಿದೆ. ಎಂಜಿನಿಯರಿಂಗ್, ಬ್ಯಾಂಕಿಂಗ್ ಮತ್ತು ಇತರ ವೃತ್ತಿಗಳು ಸೇರಿದಂತೆ ವಿವಿಧ ಉದ್ಯಮಗಳ ಲಕ್ಷಾಂತರ ಅಭ್ಯರ್ಥಿಗಳು ಪ್ರತಿ ವರ್ಷ ಅರ್ಜಿ ಸಲ್ಲಿಸ್ತಾರೆ. ಈ ಪೈಕಿ ಇಶು ಅಗರವಾಲ್ ಅವರ ಯಶಸ್ಸಿನ ಕಥೆ ಸಾಕಷ್ಟು ವಿಶಿಷ್ಟವಾಗಿದೆ. ಇವರು ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುವಾಗ್ಲೇ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾಗಿದ್ದಾರೆ.

UPSC ಮುಖ್ಯ ಪರೀಕ್ಷೆ 2023 ಕ್ಕೆ ತಯಾರಾಗುತ್ತಿರುವವರಿಗೆ ಇಶು ಅಗರವಾಲ್ ಅವರ ಸ್ಟೋರಿ ಪ್ರೇರಣೆಯಾಗಬಹುದು ನೋಡಿ.. 

Tap to resize

Latest Videos

undefined

ಇದನ್ನು ಓದಿ: UPSC success story: ಟೀ ಮಾರಿದ ಯುವಕ ಮಂಗೇಶ್ ಖಿಲಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌; ಹೋರಾಟದ ಹಾದಿ ಹೀಗಿದೆ..

ಇಶು ಅಗರವಾಲ್ ಯಾರು?
ಇಶು ಅಗರವಾಲ್ ಅವರು ಛತ್ತೀಸ್‌ಗಢದ ಧಮ್ತಾರಿಯಲ್ಲಿ ಹುಟ್ಟಿ ಬೆಳೆದಿದ್ದು, ಅಲ್ಲೇ ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. 2014 ರಲ್ಲಿ, ಅವರು ವಾಣಿಜ್ಯ ಪಠ್ಯಕ್ರದೊಂದಿಗೆ ಓದಿದ್ದು, ನಂತರ, ಸಿಎ ಕಾರ್ಯಕ್ರಮಕ್ಕೆ ಸೇರಲು ನಾಗ್ಪುರಕ್ಕೆ ತೆರಳಿದ್ದಾರೆ. ಇಶು ಅಗರವಾಲ್ ತನ್ನ ಮೊದಲ ಪ್ರಯತ್ನದಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ (CA) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ನಂತರ 2018 ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಕ್ಕೆ ಸೇರಿದರು. ಅದರ ನಂತರ, ಅವರು ತಕ್ಷಣ ಸಿಎ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಜತೆಗೆ, ಯುಪಿಎಸ್‌ಸಿ ಅಧ್ಯಯನವನ್ನೂ ಆರಂಭಿಸಿದರು.

2019 ರಲ್ಲಿ UPSC CSEಯಲ್ಲಿ ಭಾಗವಹಿಸಿದ್ದು, ಆದರೆ, ಮೇನ್‌ ಎಕ್ಸಾಂ ಉತ್ತೀರ್ಣರಾಗಲಿಲ್ಲ. 12ನೇ ತರಗತಿಯಿಂದ ಟಾಪರ್‌ ಆಗಿದ್ದ ಇವರಿಗೆ ತಮ್ಮ ಮೊದಲ ಪ್ರಯತ್ನದಲ್ಲಿ UPSC ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದಾಗ ಆಘಾತಕ್ಕೊಳಗಾಗಿದ್ದರು. ಈ ಹಿನ್ನೆಲೆ ಚಾಲೆಂಜ್‌ ಆಗಿ ಪಡೆದು, CA ಆಗಿ ಕೆಲಸ ಮಾಡುವಾಗಲೇ 2021 ರಲ್ಲಿ 81 ರ ಅಖಿಲ ಭಾರತ ಶ್ರೇಣಿಯೊಂದಿಗೆ ಉತ್ತೀರ್ಣರಾದರು.

ಇದನ್ನೂ ಓದಿ: ಹೋಟೆಲ್‌ ಮಾಣಿಯಾಗಿದ್ದೋರು IAS ಅಧಿಕಾರಿಯಾದ್ರು: 7ನೇ ಪ್ರಯತ್ನದಲ್ಲಿ ನನಸಾಯ್ತು UPSC ಕನಸು!

ಈ ಮಧ್ಯೆ, ಯುಪಿಎಸ್‌ಸಿ ಪಾಸಾದ್ರೂ ಸಿಎ ಆಗಿ ಅಭ್ಯಾಸವನ್ನು ಮುಂದುವರಿಸುವ ಆಲೋಚನೆ ಹೊಂದಿದ್ದೇನೆ ಎಂದೂ ಇಶು ಅಗರ್‌ವಾಲ್‌ ಹೇಳಿದ್ದಾರೆ. ಆರು ಅಂಕಿಗಳ ಮಾಸಿಕ ವೇತನವಿದ್ದರೂ ನಮ್ಮ ಆತ್ಮಸ್ಥೈರ್ಯವೇ ಅವರನ್ನು ಇಂದು ಇರುವ ಸ್ಥಿತಿಗೆ ಕೊಂಡೊಯ್ದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇನ್ನು, ನೀವು ಯಾವ ಸಮಯದಲ್ಲಿ ಓದ್ಬೇಕು ಅನ್ನೋದು ನಿಮ್ಮದೆ ಆಯ್ಕೆ. ಹಾಗೆ, ಪರೀಕ್ಷೆಯ ಸ್ವರೂಪ, ನಿರ್ದಿಷ್ಟ ವಿಷಯಗಳ ಮಹತ್ವ ಮತ್ತು ಪ್ರತಿ ವಿಷಯಕ್ಕೂ ಸೂಕ್ತವಾದ ಗಮನವನ್ನು ನೀಡಬೇಕು ಎಂದೂ ಅವರು ಹೇಳುತ್ತಾರೆ. 
ಇದನ್ನೂ ಓದಿ: IAS ಅಧಿಕಾರಿಯಾದ ರಿಕ್ಷಾ ಎಳೆಯುವವರ ಮಗ ಗೋವಿಂದ್‌ ಜೈಸ್ವಾಲ್‌: ಹೋರಾಟದ ಹಾದಿ ಹೀಗಿದೆ..

click me!